ಕೇಂದ್ರ ಸರ್ಕಾರದಿಂದ ‘ತುರ್ತು ಎಚ್ಚರಿಕೆ’ ಎಸ್ಸೆಮ್ಮೆಸ್‌ ಪರೀಕ್ಷೆ

KannadaprabhaNewsNetwork |  
Published : Oct 11, 2023, 12:45 AM IST

ಸಾರಾಂಶ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶಾದ್ಯಂತ ಜಾರಿಗೊಳಿಸುತ್ತಿರುವ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸೋಮವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶಾದ್ಯಂತ ಜಾರಿಗೊಳಿಸುತ್ತಿರುವ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸೋಮವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಅನೇಕ ನಾಗರಿಕರ ಮೊಬೈಲ್‌ಗಳಿಗೆ ಮಧ್ಯಾಹ್ನ ಎಸ್ಸೆಮ್ಮೆಸ್‌ ಬಂದಿವೆ. ಈ ವೇಳೆ ಫೋನ್‌ಗಳಲ್ಲಿ ಮಾಮೂಲಿ ಎಸ್ಸೆಮ್ಮೆಸ್ ಬಜರ್‌ ಸೌಂಡ್‌ ಬಾರದೇ, ವಿಚಿತ್ರ ಬಜರ್‌ ಧ್ವನಿಯೊಂದಿಗೆ ಈ ತುರ್ತು ಸಂದೇಶ ಪಾಪ್ ಅಪ್ ಆಗಿದೆ. ಇದರರ್ಥ ತುರ್ತು ಸಂದೇಶಗಳು ಇದೇ ಬಜರ್‌ ಸೌಂಡ್‌ನೊಂದಿಗೆ ಮೊಬೈಲ್‌ಗಳಿಗೆ ಬಂದು, ನಾಗರಿಕರನ್ನು ಎಚ್ಚರಿಸುತ್ತವೆ. ಸಂದೇಶದಲ್ಲಿ, ‘ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶ ನಿರ್ಲಕ್ಷಿಸಿ. ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೆ ತಂದಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆ ಪರೀಕ್ಷಿಸಲು, ಸಾರ್ವಜನಿಕ ಸುರಕ್ಷತೆ ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆ ನೀಡುವ ಗುರಿಯನ್ನು ಈ ಸಂದೇಶ ಹೊಂದಿದೆ’ ಎಂದು ಬರೆಯಲಾಗಿದೆ. ವಿಚಿತ್ರ ಶಬ್ದದೊಂದಿಗೆ ಬಂದ ಈ ಎಸ್ಸೆಮ್ಮೆಎಸ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಯು, ಅಮೆರಿಕ ಬಳಿಕ ಇನ್ನೂ 11 ದೇಶದ ಜತೆ ಟ್ರೇಡ್‌ ಡೀಲ್‌
ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!