ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಹಲವು ಜನಪ್ರಿಯ ವಸ್ತುಗಳ ಮೇಲಿನ ತೆರಿಗೆ ಹಾಗೂ ಸುಂಕವನ್ನು ಏರಿಳಿಕೆ ಮಾಡಲಾಗಿದೆ.
ನವದೆಹಲಿ : ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ಹಲವು ಜನಪ್ರಿಯ ವಸ್ತುಗಳ ಮೇಲಿನ ತೆರಿಗೆ ಹಾಗೂ ಸುಂಕವನ್ನು ಏರಿಳಿಕೆ ಮಾಡಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬೆಲೆ ಏರಿಳಿತ ಕಾಣಲಿವೆ. ಚಿನ್ನ, ಬೆಳ್ಳಿ, ಮೊಬೈಲ್ ಫೋನ್, ಕ್ಯಾನ್ಸರ್‌ಗೆ ಸಂಬಂಧಿಸಿದ ಹಲವು ಔಷಧಗಳು ಸೇರಿ ಕೆಲವು ವಸ್ತುಗಳು ಅಗ್ಗ ಆಗಲಿದ್ದರೆ, ಕೆಲವು ಕೆಲವು ಟೆಲಿಕಾಂ ಉಪಕರಣ, ಪ್ಲಾಸ್ಟಿಕ್ ಉತ್ಪನ್ನಗಳು ದುಬಾರಿ ಆಗಲಿವೆ.
* ಇವು ಅಗ್ಗ *
ಮೊಬೈಲ್ ಫೋನ್‌ಗಳು
ಮೊಬೈಲ್ ಫೋನ್‌ಗಳು, ಮೊಬೈಲ್ ಚಾರ್ಜರ್‌ಗಳು ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.20ರಿಂದ ಶೇ.15ಕ್ಕೆ ಇಳಿಸಲಾಗಿದೆ. ಇದರಿಂದ ದೇಶದಲ್ಲಿ ಮೊಬೈಲ್ ಫೋನ್ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
ಕ್ಯಾನ್ಸರ್ ಔಷಧಿಗಳು
ಸರ್ಕಾರವು 3 ಜೀವರಕ್ಷಕ ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಿದೆ, ಅವುಗಳ ಬೆಲೆಯನ್ನು ಇಳಿಸಿ ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವಂತೆ ಮಾಡಿದೆ. ಅಸ್ಟ್ರಾಜೆನೆಕಾದಿಂದ ತಯಾರಿಸಲ್ಪಡುವ 3 ಕ್ಯಾನ್ಸರ್ ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರಕ್ಸ್ಟೆಕನ್, ಒಸಿಮೆರ್ಟಿನಿಬ್ ಮತ್ತು ದುರ್ವಾಲುಮಾಬ್‌ಗೆ ಮೊದಲು ಶೇ.10 ಆಮದು ತೆರಿಗೆ ಇತ್ತು. ಈಗ ಇದರಿಂದ ಅವುಗಳಿಗೆ ವಿನಾಯ್ತಿ ಲಭ್ಯ ಆಗಿದ್ದು, ಅಗ್ಗವಾಗಲಿವೆ.
ಎಕ್ಸ್-ರೇ ಯಂತ್ರಗಳಲ್ಲಿ ಬಳಸುವ ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸಹ ಶೇ.15ರಿಂದ ಶೇ.5ಕ್ಕೆ ಕಡಿಮೆ ಮಾಡಲಾಗಿದೆ.
---ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ
ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ಕ್ಕೆ ಇಳಿಸಲಾಗಿದ್ದು, ಪ್ಲಾಟಿನಂ ಮೇಲಿನ ಸುಂಕವನ್ನು ಶೇ.6.4ಕ್ಕೆ ಇಳಿಸಲಾಗಿದೆ. ಈ ಮುನ್ನ ಇವುಗಳ ಮೇಲಿನ ಆಮದು ಸುಂಕ ಶೇ.15ರಷ್ಟಿತ್ತು. ಪ್ಲಾಟಿನಂ, ಪಲ್ಲಾಡಿಯಂ, ಸೇರಿ ಕೆಲವು ವಸ್ತುಗಳ ಮೇಲೆ ಇದ್ದ ಶೇ.14.35ರ ಸುಂಕವನ್ನು ಶೇ.5.35ಕ್ಕೆ ಇಳಿಸಲಾಗಿದೆ. 25 ಖನಿಜಗಳು
ಇದೇ ವೇಳೆ 25 ಖನಿಜಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗಿದೆ. ಇವುಗಳಲ್ಲಿ ಕಫಬಾಲ್ಟ್, ತಾಮ್ರ, ಲೀಥಿಯಂ- ಮೊದಲಾದವು ಇದ್ದು, ಇವು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ತಯಾರಿಕೆಗೆ ಬೇಕಾದ ಖನಿಜಗಳಾಗಿವೆ. ಇದರಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನಾ ವೆಚ್ಚ ಕೊಂಚ ಇಳಿಯಲಿದೆ. ಇದೇ ವೇಳೆ, ಹಾಗೂ ಸೌರ ಫಲಕಗಳ ತಯಾರಿಕೆಗೆ ಬೇಕಾದ ಸೋಲಾರ್ ಸೆಲ್ ಮೇಲಿನ ಸುಂಕಕ್ಕೂ ವಿನಾಯ್ತಿ ನೀಡಲಾಗಿದೆ.
---ಮೀನಿನ ಆಹಾರ ಮತ್ತು ಸೀಗಡಿ
ಮೀನಿನ ಆಹಾರ ಮತ್ತು ಸೀಗಡಿಗಳ ಮೇಲಿನ ಬಿಸಿಡಿಯನ್ನು ಶೇ.5ಕ್ಕೆ ಇಳಿಸಲಾಗಿದೆ.
ಚರ್ಮದ ಸಾಮಗ್ರಿಗಳು
ಉಡುಪು, ಚೀಲ ಹಾಗೂ ಶೂ ಉತ್ಪಾದನೆಯಲ್ಲಿ ಬಳಸಲಾಗುವ ಚರ್ಮದ ವಸ್ತುಗಳ ಮೇಲಿನ ಸುಂಕ ಕೂಡ ಕಡಿಮೆಯಾಗಿದೆ.-----
ಇವು ದುಬಾರಿಪ್ಲಾಸ್ಟಿಕ್ ವಸ್ತುಗಳು
ಪ್ಲಾಸ್ಟಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.25ಕ್ಕೆ ಹೆಚ್ಚಿಸಲಾಗಿದೆ. ಇದರರ್ಥ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್ ವಸ್ತುಗಳು ದುಬಾರಿಯಾಗುತ್ತವೆ.
---ಟೆಲಿಕಾಂ ಉಪಕರಣಗಳು
ನಿರ್ದಿಷ್ಟಪಡಿಸಿದ ಟೆಲಿಕಾಂ ಉಪಕರಣಗಳ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಹೆಚ್ಚಿಸಲಾಗಿದೆ.
----
ಇವು ಅಗ್ಗ
ವಸ್ತುಸುಂಕ ಇಳಿಕೆ ಎಷ್ಟು?
ಮೊಬೈಲ್ ಫೋನ್‌ಶೇ.20ರಿಂದ ಶೇ.15
ಚಿನ್ನ-ಬೆಳ್ಳಿಶೇ.15ರಿಂದ ಶೇ.6
3 ಕ್ಯಾನ್ಸರ್ ಔಷಧಶೇ.10ರಿಂದ ಶೇ.0
25 ಖನಿಜ--
ಚರ್ಮ ಸಾಮಗ್ರಿ--
ಮೀನು, ಸೀಗಡಿ ಶೇ.5ಕ್ಕೆ ಇಳಿಕೆ
--
*ಇವು ಏರಿಕೆ*ವಸ್ತುಸುಂಕ ಏರಿಕೆ ಎಷ್ಟು?
ಪ್ಲಾಸ್ಟಿಕ್ ವಸ್ತುಶೇ.10ರಿಂದ ಶೇ.25ಕ್ಕೆ
ಟೆಲಿಕಾಂ ಉತ್ಪನ್ನಶೇ.10ರಿಂದ ಶೇ.15ಕ್ಕೆ