ಇಪಿಎಫ್‌ ಬಡ್ಡಿದರ ಶೇ.8.25: ಕೇಂದ್ರ ಅಸ್ತು, ತಿಂಗಳಂತ್ಯಕ್ಕೆ ಜಮೆ

KannadaprabhaNewsNetwork |  
Published : Jun 19, 2026, 01:45 AM IST
EPFO

ಸಾರಾಂಶ

ಕೇಂದ್ರ ಸರ್ಕಾರವು 2025-26ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.25ರಷ್ಟು ನಿಗದಿ ಮಾಡಿದೆ. ಈ ತಿಂಗಳ ಅಂತ್ಯದೊಳಗೆ ನೌಕರರ ಖಾತೆಗೆ ಹಣ ಜಮಾ ಆಗಲಿದ್ದು ಇದರಿಂದ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಪ್ರಯೋಜನ ಸಿಗಲಿದೆ.

ನವದೆಹಲಿ: ಕೇಂದ್ರ ಸರ್ಕಾರವು 2025-26ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.8.25ರಷ್ಟು ನಿಗದಿ ಮಾಡಿದೆ. ಈ ತಿಂಗಳ ಅಂತ್ಯದೊಳಗೆ ನೌಕರರ ಖಾತೆಗೆ ಹಣ ಜಮಾ ಆಗಲಿದ್ದು ಇದರಿಂದ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಪ್ರಯೋಜನ ಸಿಗಲಿದೆ. 

ಸಭೆಯಲ್ಲಿ ಈ ಬಗ್ಗೆ ನಿರ್ಧಾರ

ಮಾರ್ಚ್‌ನಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಾನ್ಸೂಖ್‌ ಮಾಂಡವೀಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು, ಕಾರ್ಯರೂಪಕ್ಕೆ ಬರಲಿದೆ. ಈ ಮೂಲಕ ಸತತ ಮೂರನೇ ವರ್ಷವೂ ಇಪಿಎಫ್‌ ಬಡ್ಡಿದರ ಶೇ.8.25 ರಷ್ಟು ನಿಗದಿಯಾದಂತಾಗಿದೆ. 2024-25, 2023-24ರಲ್ಲಿಯೂ ಇದೇ ಬಡ್ಡಿದರವಿತ್ತು.

ಮಾಸಾಂತ್ಯಕ್ಕೆ ಯುಪಿಐ, ಎಟಿಎಂನಲ್ಲಿ:

ಈ ಹಿಂದೆ ಘೋಷಿಸಲಾಗಿದ್ದ ಯುಪಿಐ ಹಾಗೂ ಎಟಿಎಂ ಮೂಲಕ ಇಪಿಎಫ್‌ಒ ಹಣ ಹಿಂಪಡೆಯುವ ವ್ಯವಸ್ಥೆ ತಿಂಗಳಾಂತ್ಯದೊಳಗೆ ಜಾರಿಗೆ ಬರುವ ನಿರೀಕ್ಷೆ ಇದೆ. ಶೇ.75ರಷ್ಟು ಪಿಎಫ್‌ ಹಣವನ್ನು ಈ ಮೂಲಕ ವಾಪಸು ಪಡೆಯಲು ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ
ಅಯೋಧ್ಯೆ ರಾಮಮಂದಿರ ಸಿಸಿಟೀವಿ ತಿರುಚಲು ಯತ್ನ: ಎಸ್‌ಐಟಿ ತನಿಖೆಯಿಂದ ಪತ್ತೆ