ವಿಶ್ವದಲ್ಲೇ ಭಾರತ ವಿಶ್ವಾಸಾರ್ಹ ದೇಶ : ಮೋದಿ

KannadaprabhaNewsNetwork |  
Published : Jun 19, 2026, 01:45 AM IST
Modi

ಸಾರಾಂಶ

‘ಭಾರತದ ಪ್ರಯಾಣದಲ್ಲಿ ಪ್ರಸ್ತುತ ಕಾಲವು ನಿರ್ಣಾಯಕ ಅವಧಿಯಾಗಿದ್ದು, ನಮ್ಮ ಆಕಾಂಕ್ಷೆಗಳು ಹೊಸ ಎತ್ತರವನ್ನು ತಲುಪುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಹೇಳಿದ್ದಾರೆ.

 ಪ್ಯಾರಿಸ್‌: ‘ಭಾರತದ ಪ್ರಯಾಣದಲ್ಲಿ ಪ್ರಸ್ತುತ ಕಾಲವು ನಿರ್ಣಾಯಕ ಅವಧಿಯಾಗಿದ್ದು, ನಮ್ಮ ಆಕಾಂಕ್ಷೆಗಳು ಹೊಸ ಎತ್ತರವನ್ನು ತಲುಪುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ಆಯೋಜನೆಯಾಗಿದ್ದ ಭಾರತ ಮೂಲದವರೊಂದಿಗಿನ ಸಂಭಾಷಣೆ

6 ದಿನಗಳ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳುವ ಮುನ್ನ ಪ್ಯಾರಿಸ್‌ನಲ್ಲಿ ಆಯೋಜನೆಯಾಗಿದ್ದ ಭಾರತ ಮೂಲದವರೊಂದಿಗಿನ ಸಂಭಾಷಣೆ ವೇಳೆ ಅವರು ಮಾತನಾಡಿದರು. ‘ಕಳೆದ 12 ವರ್ಷಗಳಲ್ಲಿ ಭಾರತವು ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಬೆಳವಣಿಗೆಯನ್ನು ಕಂಡಿದೆ.  

25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ

ಈ ಅವಧಿಯಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ. ಆರ್ಥಿಕ ಬೆಳವಣಿಗೆಯ ಹೊರತಾಗಿ, ನಮ್ಮ ಪ್ರಯಾಣವು ಜನರ ಸಬಲೀಕರಣ ಮತ್ತು ಅವರ ಜೀವನವನ್ನು ಪರಿವರ್ತಿಸುವ ಗುರಿ ಹೊಂದಿದೆ. ಸದ್ಯದ ಕಾಲವು ಭಾರತದ ಪ್ರಯಾಣದಲ್ಲಿ ನಿರ್ಣಾಯಕ ಅವಧಿಯಾಗಿದೆ. ಭಾರತದ ಅಭ್ಯುದಯಕ್ಕೆ ಅದರ ನಾಗರಿಕರೇ ಕಾರಣ’ ಎಂದರು. ಜತೆಗೆ, ‘ಜಾಗತಿಕ ಸಂಬಂಧಕ್ಕೆ ವಿಶ್ವಾಸವೇ ಬುನಾದಿ. ಇಂದು ಭಾರತವು ಇಡೀ ವಿಶ್ವದ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಾವು ಒಟ್ಟಿಗೆ ಹೆಜ್ಜೆ ಇಡೋಣ. ಒಟ್ಟಿಗೆ ನಡೆದರಷ್ಟೇ ಜಾಗತಿಕ ಬೆಳವಣಿಗೆ ಸುಸ್ಥಿರವಾಗಿರುತ್ತದೆ’ ಎಂದು ಮೋದಿ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ
ಅಯೋಧ್ಯೆ ರಾಮಮಂದಿರ ಸಿಸಿಟೀವಿ ತಿರುಚಲು ಯತ್ನ: ಎಸ್‌ಐಟಿ ತನಿಖೆಯಿಂದ ಪತ್ತೆ