ಓಲಾ, ಉಬರ್‌ ಸೇವೆ- ಗ್ರಾಹಕರಿಂದ ರಾಷ್ಟ್ರಾದ್ಯಂತ ವ್ಯಾಪಕ ಆರೋಪ : ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ

KannadaprabhaNewsNetwork |  
Published : Mar 28, 2025, 12:35 AM ISTUpdated : Mar 28, 2025, 03:11 AM IST
ಟ್ಯಾಕ್ಸಿ | Kannada Prabha

ಸಾರಾಂಶ

ಓಲಾ, ಉಬರ್‌ನಂಥ ಟ್ಯಾಕ್ಸಿ ಸೇವೆಗಳ ಕುರಿತು ಕ್ಯಾಬ್‌ ಚಾಲಕರು ಮತ್ತು ಗ್ರಾಹಕರಿಂದ ರಾಷ್ಟ್ರಾದ್ಯಂತ ವ್ಯಾಪಕ ಆರೋಪ ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ನವದೆಹಲಿ: ಓಲಾ, ಉಬರ್‌ನಂಥ ಟ್ಯಾಕ್ಸಿ ಸೇವೆಗಳ ಕುರಿತು ಕ್ಯಾಬ್‌ ಚಾಲಕರು ಮತ್ತು ಗ್ರಾಹಕರಿಂದ ರಾಷ್ಟ್ರಾದ್ಯಂತ ವ್ಯಾಪಕ ಆರೋಪ ಕೇಂದ್ರ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಕ್ಯಾಬ್‌ ಚಾಲಕರ ಅನುಕೂಲಕ್ಕಾಗಿ ಸಹಕಾರಿ ಮಾದರಿಯಲ್ಲಿ ''''''''ಸಹಕಾರ್‌ ಟ್ಯಾಕ್ಸಿ'''''''' ಜಾರಿಗೆ ತರಲು ಉದ್ದೇಶಿಸಿದೆ.

ಓಲಾ ಮತ್ತು ಉಬರ್‌ ಮಾದರಿಯಲ್ಲೇ ಸಹಕಾರಿ ತತ್ವದಡಿ ಈ ಕ್ಯಾಬ್‌ ಸಂಸ್ಥೆ ನಡೆಸಲ್ಪಡಲಿದೆ. ಸಹಕಾರ ಸಚಿವರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಈ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಸಹಕಾರದ ಮೂಲಕ ಸಂಮೃದ್ಧಿ ಘೋಷವಾಕ್ಯದೊಂದಿಗೆ ಈ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಶಾ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಊಬರ್‌ ಮತ್ತು ಓಲಾ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ನಾವು ದೊಡ್ಡಮಟ್ಟದ ಸಹಕಾರಿ ಟ್ಯಾಕ್ಸಿ ಸೇವೆ ಜಾರಿಗೊಳಿಸುತ್ತಿದ್ದೇವೆ. ಈ ಸಹಕಾರಿ ಟ್ಯಾಕ್ಸಿ ಸೇವೆಯಿಂದ ಬರುವ ಲಾಭ ಉದ್ಯಮಿಗಳಿಗೆ ಹೋಗುವುದಿಲ್ಲ, ಬದಲಾಗಿ ನೇರವಾಗಿ ಚಾಲಕರ ಪಾಲಾಗಲಿದೆ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!