ಏ.1ರಿಂದ ಆರಂಭವಾಗುವ ಆರ್ಥಿಕ ವರ್ಷದಲ್ಲಿನ ವಿತ್ತೀಯ ಕೊರತೆಯನ್ನು ನೀಗಿಸಲು ಮಾರುಕಟ್ಟೆಯಿಂದ 14.13 ಲಕ್ಷ ಕೋಟಿ ರು. ಸಾಲ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಈ ಸಾಲದ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇದ್ದು, ಕಳೆದ ವರ್ಷ 15.43 ಲಕ್ಷ ಕೋಟಿ ರು. ಸಾಲ ಮಾಡಲಾಗಿತ್ತು. ಇದು ಈವರೆಗಿನ ಅತಿ ಹೆಚ್ಚು ಸಾಲದ ಪ್ರಮಾಣವಾಗಿತ್ತು.
2024-25ರಲ್ಲಿ ತೆರಿಗೆ ಆದಾಯದ ಪ್ರಮಾಣವೂ ಹೆಚ್ಚಿರುವುದರಿಂದ ಸಾಲ ಮಾಡಬೇಕಾದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲಾಗಿದೆ. ಈ ಸಾಲಕ್ಕೆ ಮುಂದಿನ ವರ್ಷದಲ್ಲಿ ಸರ್ಕಾರ 2.37 ಕೋಟಿ ರು. ಮರುಪಾವತಿಯನ್ನು ಮಾಡಬೇಕಿದೆ.
ಇದಲ್ಲದೇ 11.75 ಲಕ್ಷ ಕೋಟಿಯಷ್ಟು ನಿವ್ವಳ ಸಾಲ ಮಾಡಲು ಸಹ ನಿರ್ಧರಿಸಲಾಗಿದೆ. ಮುಂದಿನ ದಿನಾಂಕಗಳಲ್ಲಿ ಸೆಕ್ಯುರಿಟಿ ಬಾಂಡ್‌ಗಳನ್ನು ನೀಡುವ ಮೂಲಕ ಈ ಸಾಲವನ್ನು ಸರ್ಕಾರ ಮಾರುಕಟ್ಟೆಯಿಂದ ಪಡೆದುಕೊಳ್ಳುತ್ತದೆ.