ಮುಂಬೈ: ಪೇಟಿಎಂ ಪೇಮೆಂಟ್ ಬ್ಯಾಂಕ್ ಫೆ.29ರ ಬಳಿಕ ಹೊಸ ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ ಹಾಗೂ ಫಾಸ್ಟ್ಯಾಗ್ ಸೇವೆ ನೀಡಕೂಡದು ಎಂದು ಆರ್‌ಬಿಐನಿರ್ಬಂಧ ವಿಧಿಸಿದೆ.
ಆಡಿಟ್‌ನ ಸಮಯದಲ್ಲಿ ನಿಯಮಗಳ ಉಲ್ಲಂಘನೆ ಕಂಡು ಬಂದಿರುವುದರಿಂದ ಈ ಆದೇಶ ನೀಡಲಾಗಿದೆ.
‘ಇನ್ನು ಮುಂದೆ ಯಾವುದೇ ಠೇವಣಿ ಅಥವಾ ಸಾಲ ನೀಡುವಿಕೆ, ಯಾವುದೇ ಗ್ರಾಹಕರಿಗೆ ಟಾಪ್‌ಅಪ್ ನೀಡುವಿಕೆ ಅಥವಾ ಪೂರ್ವಪಾವತಿ ಸಾಧನ, ವ್ಯಾಲೆಟ್, ಫಾಸ್ಟ್‌ಟ್ಯಾಗ್, ಎನ್‌ಸಿಎಂಸಿ ಕಾರ್ಡ್ ಹಾಗೂ ಇತರ ಸೇವೆಗಳನ್ನು ನೀಡುವುದರಿಂದ ಫೆ.29ರ ಬಳಿಕ ನಿರ್ಬಂಧಿಸಲಾಗಿದೆ’ ಎಂದಿದೆ.
‘ಆದರೆ ವ್ಯಾಲೆಟ್‌ನಲ್ಲಿ ಇದ್ದ ಬಾಕಿ ಹಣವನ್ನು ಹಿಂಪಡೆತ ಅಥವಾ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಬಡ್ಡಿ ಪಾವತಿ, ಕ್ಯಾಷ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಯಾವಾಗ ಬೇಕಾದರೂ ಮಾಡಬಹುದು’ ಎಂದು ಆರ್‌ಬಿಐ ಹೇಳಿದೆ.