- ಈ 10 ಮಂದಿಯನ್ನು ಉಗ್ರರೆಂದು ಕರೆದ ಅಮೆರಿಕ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿ ಹತ್ತು ರಾಜಕಾರಣಿಗಳು ಹಾಗೂ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕದ ಟ್ರಂಪ್‌ ಸರ್ಕಾರ 92 ಕೋಟಿ ರು. ಬಹುಮಾನ ಘೋಷಿಸಿದೆ.

ಈ ಹತ್ತು ಮಂದಿಯನ್ನು ‘ಇರಾನಿನ ಭಯೋತ್ಪಾದಕರು’ ಎಂದು ಕರೆದಿರುವ ಅಮೆರಿಕ, ಇವರು ವಿಶ್ವಾದ್ಯಂತ ಉಗ್ರವಾದವನ್ನು ಯೋಜಿಸುವ, ಕಾರ್ಯರೂಪಕ್ಕಿಳಿಸುವ ಐಆರ್‌ಜಿಸಿಯ ಭಾಗವಾಗಿದ್ದಾರೆ ಎಂದು ಆರೋಪಿಸಿದೆ.ಯಾರೆಲ್ಲಾ ಇದ್ದಾರೆ ಈ ಪಟ್ಟಿಯಲ್ಲಿ?ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ, ಧರ್ಮಗುರು, ರಾಜಕೀಯ ಮುಖಂಡ ಅಲಿ ಅಸ್ಗರ್‌ ಹಿಜಾಝಿ, ಮಿಲಿಟರಿ ಕಮಾಂಡರ್‌ ಯಾಹ್ಯಾ ರಹೀಂ ಸಫಾವಿ, ಹಿರಿಯ ರಾಜಕಾರಣಿ ಅಲಿ ಲಾರಿಜಾನಿ, ಗುಪ್ತಚರ ಸಚಿವ ಇಸ್ಮಾಯಿಲ್‌ ಖಾತಿಬ್‌, ಸೇನಾ ಕಮಾಂಡರ್‌ ಎಸ್ಕಂದರ್‌ ಮೊಮೆನಿ ಮತ್ತು ಉಳಿದ ನಾಲ್ವರು ಉನ್ನತಾಧಿಕಾರಿಗಳಾದ ರಕ್ಷಣಾ ಸಮಿತಿ ಕಾರ್ಯದರ್ಶಿ, ಪರಮೋಚ್ಚ ನಾಯಕನ ಸಲಹೆಗಾರ, ಐಆರ್‌ಜಿಸಿ ಕಮಾಂಡರ್‌, ಆಫೀಸ್‌ ಆಫ್‌ ದಿ ಸುಪ್ರೀಂ ಲೀಡರ್‌ ಹೆಸರು ಪಟ್ಟಿಯಲ್ಲಿದೆ.