ನವದೆಹಲಿ: ಅಮೆರಿಕ ಸೇರಿದಂತೆ ಕೆಲವು ದೇಶಗಳು ಅನುಮೋದನೆ ನೀಡಿರುವ ಕೆಲ ಅತ್ಯಗತ್ಯ ಔಷಧಗಳನ್ನು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸದೆಯೇ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಭಾರತೀಯ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಜಿಸಿಐ) ಈ ಬಗ್ಗೆ ಆದೇಶ ಹೊರಡಿಸಿದೆ.
ಯಾವ ಔಷಧಿ?:
ಒಟ್ಟು 5 ವರ್ಗಗಳ ಔಷಧಗಳಿಗೆ ಈ ವಿನಾಯ್ತಿ ನೀಡಲಾಗಿದೆ. ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಗಳು, ಜೀನ್ ಮತ್ತು ಸೆಲ್ಯುಲಾರ್ ಥೆರಪಿ ಉತ್ಪನ್ನಗಳು, ಸಾಂಕ್ರಾಮಿಕ ಸಂದರ್ಭಗಳಲ್ಲಿ ಬಳಸುವ ಹೊಸ ಔಷಧಗಳು, ವಿಶೇಷ ರಕ್ಷಣಾ ಉದ್ದೇಶಗಳಿಗಾಗಿ ಬಳಸುವ ಹೊಸ ಔಷಧಗಳು ಮತ್ತು ಪ್ರಸ್ತುತ ಗುಣಮಟ್ಟದ ಆರೈಕೆಗಿಂತ ಗಮನಾರ್ಹ ಚಿಕಿತ್ಸಕ ಪ್ರಗತಿಯನ್ನು ಹೊಂದಿರುವ ಹೊಸ ಔಷಧಗಳು ವಿನಾಯ್ತಿಗೆ ಅರ್ಹತೆ ಹೊಂದಿವೆಈ ಔಷಧಿಗಳ ಬಳಕೆಯಿಂದ ತುರ್ತಾಗಿ ಬೇಕಿರುವ ಔಷಧಿಗಳನ್ನು ಈ ದೇಶಗಳಿಂದ ತರಿಸಿಕೊಂಡು ಅದನ್ನು ರೋಗಿಗಳಿಗೆ ನೇರವಾಗಿ ನೀಡುವ ಮೂಲಕ ಅವರ ಪ್ರಾಣ ಉಳಿಸಲು ಸಹಾಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.