ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯ್ತು ಅಲಹಾಬಾದ್‌ ಹೈಕೋರ್ಟ್‌ ವಿವಾದಿತ ತೀರ್ಪು

KannadaprabhaNewsNetwork |  
Published : Mar 21, 2025, 12:30 AM ISTUpdated : Mar 21, 2025, 04:37 AM IST
ಅಲಹಬಾದ್‌ | Kannada Prabha

ಸಾರಾಂಶ

ಸ್ತನಗಳನ್ನು ಹಿಡಿಯುವುದು ಅಥವಾ ಪೈಜಾಮಾದ ದಾರ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಎಂದು ಆಗುವುದಿಲ್ಲ. ಬದಲಾಗಿ ಲೈಂಗಿಕ ಹಲ್ಲೆ ಎಂದು ಪರಿಗಣಿಸಲ್ಪಡುತ್ತದೆ. ಅತ್ಯಾಚಾರಕ್ಕೂ ಮತ್ತು ಅತ್ಯಾಚಾರದ ಸಿದ್ಧತೆಗೂ ವ್ಯತ್ಯಾಸವಿದೆ ಎಂದು ಪ್ರಕರಣವೊಂದರಲ್ಲಿ ಅಲಹಾಬಾದ್‌ ಹೈಕೋರ್ಟ್‌  

ನವದೆಹಲಿ: ಸ್ತನಗಳನ್ನು ಹಿಡಿಯುವುದು ಅಥವಾ ಪೈಜಾಮಾದ ದಾರ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಎಂದು ಆಗುವುದಿಲ್ಲ. ಬದಲಾಗಿ ಲೈಂಗಿಕ ಹಲ್ಲೆ ಎಂದು ಪರಿಗಣಿಸಲ್ಪಡುತ್ತದೆ. ಅತ್ಯಾಚಾರಕ್ಕೂ ಮತ್ತು ಅತ್ಯಾಚಾರದ ಸಿದ್ಧತೆಗೂ ವ್ಯತ್ಯಾಸವಿದೆ ಎಂದು ಪ್ರಕರಣವೊಂದರಲ್ಲಿ ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅತ್ಯಾಚಾರ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕಿಂತ ಲೈಂಗಿಕ ಹಲ್ಲೆ ಪ್ರಕರಣವು ಆರೋಪಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸುತ್ತದೆ. ಉತ್ತರಪ್ರದೇಶದ ಅಪ್ರಾಪ್ತ ಬಾಲಕಿ ಕೇಸಲ್ಲಿ ನೀಡಿದ ಈ ತೀರ್ಪಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜತೆಗೆ, ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಕ್ಕೂ ಆಗ್ರಹ ಕೇಳಿಬಂದಿದೆ.

ಉತ್ತರಪ್ರದೇಶದಲ್ಲಿ 2021ರಲ್ಲಿ ಯುವಕರಿಬ್ಬರು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದು, ಪೈಜಾಮದ ನಾಡಿ ಎಳೆದು ಕಾಲುವೆಯೊಂದರ ಕೆಳಗೆ ಎಳೆದೊಯ್ದಿದ್ದರು. ದಾರಿಹೋಕರು ಬಾಲಕಿ ಕೂಗಾಟ ಕೇಳಿ ಸ್ಥಳಕ್ಕೆ ತೆರಳಿದಾಗ, ದುಷ್ಕರ್ಮಿಗಳು ಪರಾರಿಯಾಗಿದ್ದರು.

ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಪೋಸ್ಕೋ ಕೇಸ್‌ನಡಿ ಸಮನ್ಸ್‌ ನೀಡಲಾಗಿತ್ತು. ಇದನ್ನು ನ್ಯಾ.ರಾಮ್‌ ಮನೋಹರ್‌ ನಾರಾಯಣ ಮಿಶ್ರಾ ಅವರ ಹೈಕೋರ್ಟ್ ಪೀಠವು, ಕ್ರಿಮಿನಲ್‌ ಉದ್ದೇಶದಿಂದ ಬಟ್ಟೆಬಿಟ್ಟಿದ ಹಾಗೂ ಖಾಸಗಿ ಭಾಗದ ಮೇಲಿನ ಗಂಭೀರ ಹಲ್ಲೆ ಪ್ರಕರಣವಾಗಿ ಬದಲಿಸಲು ಸೂಚಿಸಿದೆ.

ಅತ್ಯಾಚಾರದ ಉದ್ದೇಶ ಹೊಂದಿದ್ದರು ಎಂದು ಹೇಳಲು ಇಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಅಲ್ಲದೆ, ಪೈಜಾಮದ ನಾಡಿ ಬಿಚ್ಚಿದರೂ ಆರೋಪಿ ಲೈಂಗಿಕ ಕ್ರಿಯೆ ನಡೆಸಿದ ಆರೋಪಗಳಿಲ್ಲ ಎಂದು ಪೀಠ ಹೇಳಿದೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅತ್ಯಾಚಾರಕ್ಕೆ ಸಿದ್ಧತೆ ಹಾಗೂ ನೈಜ ಅತ್ಯಾಚಾರ ಯತ್ನಕ್ಕೆ ನಡುವಿನ ವ್ಯತ್ಯಾಸವನ್ನು ಬೇರೆ ಬೇರೆ ಎಂದು ಹೇಳಿದ್ದು, ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಪತ್ನಿಯ ನೀಲಿಚಿತ್ರ, ಹಸ್ತಮೈಥುನ ಚಟ ಡೈವೋರ್ಸ್‌ಗೆ ಕಾರಣವಲ್ಲ: ಹೈ  

ಚೆನ್ನೈ: ಪತ್ನಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾಳೆ ಮತ್ತು ಹಸ್ತಮೈಥುನ ಮಾಡಿಕೊಳ್ಳುತ್ತಾಳೆಂಬುದು ವಿಚ್ಛೇಧನಕ್ಕೆ ಕಾರಣವಾಗಲಾರದು. ಹಸ್ತಮೈಥುನ ಮಾಡಿಕೊಳ್ಳುವುದು, ಬಿಡುವುದು ಮಹಿಳೆಯ ಹಕ್ಕು. ಮದುವೆ ಆದಾಕ್ಷಣ ಆಕೆ ತನ್ನ ಲೈಂಗಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಗಂಡನಿಗೆ ಅರ್ಪಿಸಿಬಿಟ್ಟಿದ್ದಾಳೆ ಎಂದರ್ಥವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಿಚ್ಛೇಧನ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮದ್ರಾಸ್‌ ಹೈಕೋರ್ಟ್‌ಗೆ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬುಧವಾರ ಈ ರೀತಿ ಹೇಳಿದೆ. ಅಶ್ಲೀಲ ಚಿತ್ರ ನೋಡುವುದು ಮತ್ತು ಹಸ್ತಮೈಥುನ ಮಾಡಿಕೊಳ್ಳುವುದು ಸೇರಿ ಹಲವು ಆರೋಪಗಳನ್ನು ಮಾಡಿ ವ್ಯಕ್ತಿಯು ತನ್ನ ಪತ್ನಿಯಿಂದ ವಿಚ್ಛೇಧನ ಕೋರಿದ್ದ. ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದೇ ವೇಳೆ, ಹಸ್ತಮೈಥುನದಂಥ ಸ್ವಯಂ ಅಥವಾ ವೈಯಕ್ತಿಕ ತೃಪ್ತಿ ನಿಷಿದ್ಧವಲ್ಲ. ಗಂಡಸರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಸ್ವೀಕಾರ್ಹವಾದರೆ ಮಹಿಳೆಯರು ಹಸ್ತಮೈಥುನ ಮಾಡಿಕೊಳ್ಳುವುದನ್ನು ಯಾಕೆ ಕಳಂಕವಾಗಿ ಪರಿಣಗಣಿಸಬೇಕು ಎಂದು ಪ್ರಶ್ನಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!