ಯಶಸ್ವಿ ಗಗನಯಾನದ ಬಳಿಕ ಮೊದಲ ಸಲ ತವರಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅವರಿಗೆ ಸೋಮವಾರ ಹುಟ್ಟೂರು ಲಖನೌನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಲಖನೌ: ಯಶಸ್ವಿ ಗಗನಯಾನದ ಬಳಿಕ ಮೊದಲ ಸಲ ತವರಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅವರಿಗೆ ಸೋಮವಾರ ಹುಟ್ಟೂರು ಲಖನೌನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಲಖನೌ ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಅವರನ್ನು ಸ್ವಾಗತಿಸಿದರು. ಬಳಿ ತೆರೆದ ವಾಹನದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೂರಾರು ಮಂದಿ ತ್ರಿವರ್ಣ ಧ್ವಜ ಹಾರಿಸುತ್ತಾ, ವಂದೇ ಮಾತರಂ ಘೋಷಣೆ ಕೂಗುತ್ತಾ ಜೊತೆ ಸಾಗಿದರು. ಬಳಿಕ ಮಾತನಾಡಿದ ಶುಕ್ಲಾ, ‘ ಇಲ್ಲಿ ನೆರೆದಿರುವವರ ಉತ್ಸಾಹ ನೋಡಲು ತುಂಬಾ ಖುಷಿಯಾಗಿದೆ’ ಎಂದರು.
ಈ ನಡುವೆ ಶುಕ್ಲಾ ದಂಪತಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಭೇಟಿಯಾದರು.
ಸ್ಕಾಲರ್‌ಶಿಪ್:
ಅಂತರಿಕ್ಷ ಕುರಿತ ಕೋರ್ಸುಗಳ ವಿದ್ಯಾರ್ಥಿಗಳಿಗೆ ಶುಭಾಂಶು ಶುಕ್ಲಾ ಹೆಸರಿನಲ್ಲಿ ಸ್ಕಾಲರ್‌ಶಿಪ್ ನೀಡಲು ಯೋಗಿ ಸರ್ಕಾರ ನಿರ್ಧರಿಸಿದೆ.------
ಆ.17ರಂದೇ ಭಾರತಕ್ಕೆ ಬಂದಿದ್ದ ಶುಕ್ಲಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇದೀಗ ತವರಿಗೆ ಮರಳಿದ್ದಾರೆ.
ವಾಯುಪಡೆಯ ಚಿಹ್ನೆ ಇರುವ ಕಂದುಬಣ್ಣದ ಜಾಕೆಟ್, ಅದರ ತೋಳಿನಲ್ಲಿ ತ್ರಿವರ್ಣ ಧ್ವಜ, ಮತ್ತೊಂದು ತೋಳಿನಲ್ಲಿ ಇಸ್ರೋ ಲಾಂಛನ ಧರಿಸಿ ಶುಕ್ಲಾ ಸೆಳೆದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.