ಮೇನಲ್ಲಿ ಭರ್ಜರಿ ₹2.01 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

Published : Jun 02, 2025, 11:25 AM IST
GST collection up Will maha kumbh effect

ಸಾರಾಂಶ

ಆರ್ಥಿಕ ಬೆಳವಣಿಗೆಯಲ್ಲಿನ ನಿಧಾನಗತಿ ಹೊರತಾಗಿಯೂ ಕಳೆದ ವರ್ಷದ ಮೇಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಜಿಎಸ್‌ಟಿ (ಸರಕು-ಸೇವಾ ತೆರಿಗೆ) ಸಂಗ್ರಹ ಶೇ.16.4ರಷ್ಟು ಏರಿಕೆ ಕಂಡಿದೆ

ನವದೆಹಲಿ: ಆರ್ಥಿಕ ಬೆಳವಣಿಗೆಯಲ್ಲಿನ ನಿಧಾನಗತಿ ಹೊರತಾಗಿಯೂ ಕಳೆದ ವರ್ಷದ ಮೇಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಜಿಎಸ್‌ಟಿ (ಸರಕು-ಸೇವಾ ತೆರಿಗೆ) ಸಂಗ್ರಹ ಶೇ.16.4ರಷ್ಟು ಏರಿಕೆ ಕಂಡಿದೆ. ಒಟ್ಟಾರೆ 2.01 ಲಕ್ಷ ಕೋಟಿ ರು. ಸಂಗ್ರಹವಾಗಿದೆ.

ಏಪ್ರಿಲ್‌ ತಿಂಗಳಲ್ಲಿ ದಾಖಲೆಯ 2.37 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಸಲದ ಜಿಎಸ್ಟಿ ಕೊಂಚ ಕಡಿಮೆ. ಆದರೂ ಮೇನ ದೇಶೀಯ ವಹಿವಾಟು ಮೂಲಕ ಸಂಗ್ರಹಿಸಿದ ಆದಾಯ ಶೇ.13.7ರಷ್ಟು ಏರಿ 1.50 ಲಕ್ಷ ಕೋಟಿ ರು. ತಲುಪಿದರೆ, ಆಮದು ವಹಿವಾಟಿನಿಂದ ಸಂಗ್ರಹಿಸಿದ ಜಿಎಸ್‌ಟಿ ಆದಾಯ ಶೇ.25.2ರಷ್ಟು ಏರಿ 51,266 ಕೋಟಿ ರು. ತಲುಪಿದೆ.

ಮೇ ತಿಂಗಳಲ್ಲಿ ಜಿಎಸ್‌ಟಿ ಮೂಲಕ ಕೇಂದ್ರದಿಂದ 35,434 ಕೋಟಿ ರು, ರಾಜ್ಯದ ಮೂಲಕ 43,902 ಕೋಟಿ ರು. ಆದಾಯ ಸಂಗ್ರಹಿಸಲಾಗಿದೆ. ಇನ್ನು ಸಮಗ್ರ ಸರಕು ಸೇವಾ ತೆರಿಗೆ ಮೂಲಕ 1.09 ಕೋಟಿ ರು.ನಷ್ಟು ಆದಾಯ ಸಂಗ್ರಹ ಆಗಿದೆ. ಅದೇ ರೀತಿ ಸೆಸ್‌ ಮೂಲಕ 12,879 ಕೋಟಿ ರು. ಆದಾಯ ಸಂಗ್ರಹಿಸಲಾಗಿದೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಒಟ್ಟಾರ ಜಿಎಸ್‌ಟಿ ಸಂಗ್ರಹವು 1,72,739 ರು. ಆಗಿತ್ತು.

ಈ ನಡುವೆ, ಮೇ ತಿಂಗಳ ಒಟ್ಟು ಮರುಪಾವತಿ 27,210 ಕೋಟಿ ರು. ನಷ್ಟಾಗಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.4ರಷ್ಟು ಕುಸಿದಿದೆ.

ಏಕರೂಪದ ಏರಿಕೆ ಇಲ್ಲ:

ದೇಶಾದ್ಯಂತ ಜಿಎಸ್‌ಟಿ ಸಂಗ್ರಹದಲ್ಲಿ ಒಂದೇ ರೀತಿಯ ಏರಿಕೆ ಕಂಡಿಲ್ಲ. ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜಿಎಸ್‌ಟಿ ಸಂಗ್ರಹ ಶೇ.17ರಿಂದ 25ರಷ್ಟು, ಗುಜರಾತ್‌, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಶೇ.6ರಷ್ಟು ಹಾಗೂ ಮಧ್ಯಪ್ರದೇಶ, ಹರ್ಯಾಣ, ಪಂಜಾಬ್‌ ಮತ್ತು ರಾಜಸ್ಥಾನದಂಥ ರಾಜ್ಯಗಳಲ್ಲಿ ಶೇ.10ರಷ್ಟು ಏರಿಕೆ ಕಂಡಿದೆ.

PREV
Read more Articles on

Recommended Stories

ಲಡ್ಕಿ ಬಹಿನ್‌’ ಯೋಜನೆಯಡಿ 14,000 ಪುರುಷರ ನೋಂದಣಿ!
ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು: ಮೋದಿ