ನವದೆಹಲಿ: ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶವು ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬರುವ ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಈ ಗೆಲುವು ಅಲ್ಲಿನ ಬಿಜೆಪಿ ಘಟಕಗಳು ಹಾಗೂ ಮಿತ್ರಪಕ್ಷಗಳಲ್ಲಿ ಸ್ಫೂರ್ತಿ ನೀಡಿದೆ.
ಆದರೆ ಕಾಂಗ್ರೆಸ್‌ನಲ್ಲಿ ಫಲಿತಾಂಶದಿಂದ ಆತಂಕ ಮನೆ ಮಾಡಿದೆ. ‘ಇಂಡಿಯಾ ಕೂಟದ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಂಗಿಯಾಗಿ ಮುನ್ನುಗ್ಗುವ ದುಸ್ಸಾಹಸವನ್ನು ಮುಂದಿನ ಚುನಾವಣೆಗಳಲ್ಲೂ ಮಾಡಿದರೆ ಅಪಾಯ ಗ್ಯಾರಂಟಿ’ ಎಂದು ಪಕ್ಷದ ಕೆಲವು ನಾಯಕರು ಮಾತಾಡಿಕೊಳ್ಳತೊಡಗಿದ್ದಾರೆ.