: ದಾಖಲೆಯ 104 ಉಪಗ್ರಹಗಳನ್ನು ಹೊತ್ತು 7 ವರ್ಷಗಳ ಹಿಂದೆ ನಭಕ್ಕೆ ಹಾರಿದ್ದ ಪಿಎಸ್‌ಎಲ್‌ವಿ-37 ರಾಕೆಟ್‌ನ ಮೇಲಿನ ಭಾಗ ಇದೀಗ ನಿರೀಕ್ಷೆಯಂತೆ ಭೂಮಿಯ ವಾತಾವರಣಕ್ಕೆ ಮರಳಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಬೆಂಗಳೂರು: ದಾಖಲೆಯ 104 ಉಪಗ್ರಹಗಳನ್ನು ಹೊತ್ತು 7 ವರ್ಷಗಳ ಹಿಂದೆ ನಭಕ್ಕೆ ಹಾರಿದ್ದ ಪಿಎಸ್‌ಎಲ್‌ವಿ-37 ರಾಕೆಟ್‌ನ ಮೇಲಿನ ಭಾಗ ಇದೀಗ ನಿರೀಕ್ಷೆಯಂತೆ ಭೂಮಿಯ ವಾತಾವರಣಕ್ಕೆ ಮರಳಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧಾ ಸಂಸ್ಥೆ (ಇಸ್ರೋ) ತಿಳಿಸಿದೆ.
2017ರ ಫೆ.5ರಂದು ಕಾರ್ಟೊಸ್ಯಾಟ್-2ಡಿ ಸೇರಿದಂತೆ 104 ಉಪಗ್ರಹಗಳನ್ನುಹೊತ್ತ ಪಿಎಸ್‌ಎಲ್‌ವಿ -37 ರಾಕೆಟ್ ಆಗಸಕ್ಕೆ ಉಡ್ಡಯನಗೊಂಡಿತ್ತು. ಉಡ್ಡಯನದ ಬಳಿಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿದ್ದ ರಾಕೆಟ್ ಅನ್ನು ಬಳಿಕ ಬೇರೊಂದು ಕಕ್ಷೆಯಲ್ಲಿ ಇರಿಸಲಾಗಿತ್ತು. ಆ ಕಕ್ಷೆಯಿಂದ ಅ.6ರಂದು ಅದು ನಿಗದಿಯಂತೆ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಬಿದ್ದಿದೆ ಎಂದು ಇಸ್ರೋ ಹೇಳಿದೆ. ಬಾಹ್ಯಾಕಾಶವನ್ನು ಅವಶೇಷ ಮುಕ್ತಗೊಳಿಸುವ ಸಲುವಾಗಿ ರಾಕೆಟ್‌ಗಳನ್ನು ಮರಳಿ ಭೂಮಿಗೆ ತರುವ ಕೆಲಸಗಳನ್ನು ಎಲ್ಲಾ ದೇಶಗಳು ಮಾಡುತ್ತಿವೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.