ಪಕ್ಷದ ಜತೆ ಸಮಸ್ಯೆ ನಿಜ, ಬಗೆಹರಿಸಿಕೊಳ್ಳುತ್ತೇವೆ: ತರೂರ್‌

KannadaprabhaNewsNetwork |  
Published : Jan 25, 2026, 02:00 AM IST
ಶಶಿ | Kannada Prabha

ಸಾರಾಂಶ

ಪಕ್ಷದ ಜೊತೆಗೆ ತಮಗೆ ಕೆಲವು ಭಿನ್ನಾಭಿಪ್ರಾಯ ಇರುವುದನ್ನು ತಿರುವನಂತರ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒಪ್ಪಿಕೊಂಡಿದ್ದಾರೆ. ಆದರ ಇದನ್ನು ಸಾರ್ವ ಜನಿಕವಾಗಿ ಚರ್ಚಿಸದೆ ನಾಯಕರೊಂದಿಗೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳುತ್ತೇವೆ. ನಾನು ಇದುವರೆಗೂ ಪಕ್ಷದ ಯಾವುದೇ ನಿಯಮ ಉಲ್ಲಂಘಿಸಿಲ್ಲ’ ಎಂದಿದ್ದಾರೆ.

ಭಿನ್ನಾಭಿಪ್ರಾಯ ಸಾರ್ವಜನಿಕವಾಗಿ ಚರ್ಚಿಸಲ್ಲ: ಸಂಸದ

ಪಕ್ಷದ ಯಾವುದೇ ನಿಯಮ ಉಲ್ಲಂಘಿಸಿಲ್ಲ: ಕೈ ನಾಯಕ

ಆಪರೇಷನ್‌ ಸಿಂದೂರ ನಿಲುವಿಗೆ ಈಗಲೂ ಬದ್ಧ: ಶಶಿ

ಕಲ್ಲಿಕೋಟೆ: ಪಕ್ಷದ ಜೊತೆಗೆ ತಮಗೆ ಕೆಲವು ಭಿನ್ನಾಭಿಪ್ರಾಯ ಇರುವುದನ್ನು ತಿರುವನಂತರ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒಪ್ಪಿಕೊಂಡಿದ್ದಾರೆ. ಆದರ ಇದನ್ನು ಸಾರ್ವ ಜನಿಕವಾಗಿ ಚರ್ಚಿಸದೆ ನಾಯಕರೊಂದಿಗೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳುತ್ತೇವೆ. ನಾನು ಇದುವರೆಗೂ ಪಕ್ಷದ ಯಾವುದೇ ನಿಯಮ ಉಲ್ಲಂಘಿಸಿಲ್ಲ’ ಎಂದಿದ್ದಾರೆ.

ಶುಕ್ರವಾರ ಕಾಂಗ್ರೆಸ್‌ ಹೈಕಮಾಂಡ್‌ ಸಭೆಗೆ ತರೂರ್‌ ಗೈರಾಗಿದ್ದರು. ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗಿನ ಮುನಿಸಿನ ಕಾರಣದಿಂದ ತರೂರ್ ಸಭೆಗೆ ಹಾಜರಾಗಲಿಲ್ಲ ಎನ್ನುವ ವದಂತಿ ಹಬ್ಬಿತ್ತು. ಶನಿವಾರ ಈ ಬಗ್ಗೆ ಕೈ ನಾಯಕ ಮಾತನಾಡಿದ್ದು, ‘ ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಆದರೆ ಅದನ್ನು ನಾಯಕರೊಂದಿಗೆ ಚರ್ಚಿಸಬೇಕು. ಮಾಧ್ಯಮ, ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದಲ್ಲ. ನಾನು ಅಧಿವೇಶನಕ್ಕಾಗಿ ದೆಹಲಿಗೆ ಹೋಗುತ್ತೇನೆ. ಅಲ್ಲಿ ನಾಯಕರೊಂದಿಗೆ ಮಾತನಾಡುತ್ತೇನೆ. ನಾನು ಕಳೆದ 17 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಏನೇ ತಪ್ಪಾಗಿದ್ದರೂ ಅದನ್ನು ಬಗೆ ಹರಿಸಬೇಕಿದೆ. ಸೂಕ್ತ ವೇದಿಕೆಯಲ್ಲಿ ಪರಿಹರಿಸುತ್ತೇವೆ’ ಎಂದಿದ್ದಾರೆ.

ಇದೇ ವೇಳೆ ಅವರು ಪಕ್ಷದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಸುಮ್ಮನಾದರು. ಅಲ್ಲದೇ ‘ಪಕ್ಷದ ಸಭೆಗೆ ಭಾಗಿಯಾಗದಿರುವ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಮೊದಲೇ ತಿಳಿಸಿದ್ದೇನೆ’ ಎಂದರು.

ಸಿಂದೂರ ನಿಲುವಿಗೆ ಬದ್ಧ:

ಇನ್ನು ಆಪರೇಷನ್‌ ಸಿಂದೂರ ವೇಳೆ ತಮ್ಮ ನಿಲುವು ಸಮರ್ಥಿಸಿಕೊಂಡ ಅವರು, ‘ ಆಪರೇಷನ್‌ ಸಿಂದೂರ ಮತ್ತು ಆ ನಂತರದ ಬೆಳವಣಿಗೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸಿದ್ದೇನೆ. ಈಗಲೂ ಆ ನಿಲುವಿಗೆ ಬದ್ಧ. ಕ್ಷಮೆಯಾಚಿಸಲ್ಲ’ ಎಂದರು.

ತರೂರ್‌ ಹೇಳಿದ್ದೇನು?

ಪಕ್ಷದ ಜೊತೆ ನನಗೆ ಕೆಲವು ಬಿನ್ನಾಭಿಪ್ರಾಯ ಇದೆ. ಅದನ್ನು ದೆಹಲಿಗೆ ಹೋದಾಗ ನಾಯಕರ ಜೊತೆ ಚರ್ಚಿಸುವೆ

ಇದು ಮಾಧ್ಯಮ, ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುವುದಲ್ಲ. ಅಧಿವೇಶನಕ್ಕೆ ಹೋದಾಗ ಈ ಬಗ್ಗೆ ಪ್ರಸ್ತಾಪಿಸುವೆ

17 ವರ್ಷದಿಂದ ಪಕ್ಷದಲ್ಲಿದ್ದೇನೆ. ಏನೇ ತಪ್ಪಾಗಿದ್ದರೂ ಅದನ್ನು ನಾವು ಸೂಕ್ತವಾದ ವೇದಿಕೆಯಲ್ಲಿ ಪರಿಹರಿಸುತ್ತೇವೆ

ವಿಧಾನಸಭಾ ಚುನಾವಣೆ ಕುರಿತ ದಿಲ್ಲಿ ಸಭೆಗೆ ಆಗಮಿಸುತ್ತಿಲ್ಲ ಎಂದು ಮೊದಲೇ ತಿಳಿಸಿದ್ದೆ. ಮುನಿಸಿ ಆರೋಪ ಸರಿಯಲ್ಲ

ಪಹಲ್ಗಾಂಗೆ ಪ್ರತಿಯಾಗಿ ಪಾಕ್‌ ವಿರುದ್ಧದ ಆಪರೇಷನ್‌ ಸಿಂದೂರ ಕುರಿತ ನನ್ನ ಹೇಳಿಕೆಗೆ ನಾನೂ ಈಗಲೂ ಬದ್ದ

ಅದು ದೇಶ ಮೊದಲು ಎಂಬ ನನ್ನ ನಿಲುವಿನದ್ದು. ಈ ಬಗ್ಗೆ ನಾನು ಕ್ಷಮೆಯಾಚಿಸಬೇಕಾದ ಅಗತ್ಯವಿಲ್ಲ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಂಗವೈಕಲ್ಯ ಕೋಟಾದಡಿ ವೈದ್ಯ ಸೀಟು ಪಡೆಯಲು ಪಾದ ತುಂಡರಿಸಿಕೊಂಡ!
ತೆಲಂಗಾಣ: ಮತ್ತೆ 300 ಬೀದಿ ನಾಯಿಗಳ ಹತ್ಯೆ