ಬೆಂಗಳೂರು : ಕ್ಲಿನಿಕಲ್ ಟ್ರಯಲ್ಸ್ ಪ್ರೊಟೋಕಾಲ್ ಉಲ್ಲಂಘನೆ ಸೇರಿ ವಿವಿಧ ಗಂಭೀರ ಆರೋಪ ಎದುರಿಸುತ್ತಿರುವ ನಗರದ ಎಚ್‌ಸಿಜಿ ಆಸ್ಪತ್ರೆ ವಿರುದ್ಧ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಗುರುವಾರದಿಂದ ಮೂರು ದಿನಗಳ ಕಾಲ ತನಿಖೆ ನಡೆಯಲಿದೆ.
ಆಸ್ಪತ್ರೆಯ ಎಥಿಕ್ಸ್ ಕಮಿಟಿಯ ಮಾಜಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಡಾ.ಕೃಷ್ಣ ಭಟ್ ಅವರ ದೂರು ಅರ್ಜಿ ಆಧರಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಜೂ.30ರಂದು ಸಿಡಿಎಸ್‌ಸಿಒಗೆ ಪತ್ರ ಬರೆದು ತನಿಖೆಗೆ ಕೋರಿದ್ದರು. ಆರೋಗ್ಯ ಇಲಾಖೆಯ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಸಿಡಿಎಸ್‌ಸಿಒ, ಪತ್ರ ತಲುಪಿದ ಎರಡೇ ದಿನಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಆರಂಭಿಸುತ್ತಿದೆ.
ಈ ವಿಷಯವನ್ನು‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ ಎಚ್‌ಸಿಜಿ ಆಸ್ಪತ್ರೆಯ ಮೆಡಿಕಲ್ ಲಾ ಮತ್ತು ಎಥಿಕ್ಸ್ ವಿಭಾಗದ ಹಿರಿಯ ವೈದ್ಯ, ಕಾರ್ಯದರ್ಶಿಯೂ ಆಗಿರುವ ಡಾ.ರಮೇಶ್ ಎಸ್. ಬಿಳಿಮಗ್ಗ ಅವರು, ತನಿಖಾ ತಂಡ ಗುರುವಾರದಿಂದ ಮೂರು ದಿನಗಳ ಕಾಲ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಅದಕ್ಕೆ ನಾವು ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ.
ಆಸ್ಪತ್ರೆ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾವು ಸಜ್ಜುಗೊಳಿಸಿ ಇಟ್ಟುಕೊಂಡಿದ್ದೇವೆ. ತನಿಖೆ ನಡೆದು ಸತ್ಯಾಂಶ ಹೊರಬರಲಿ. ಆಗ ಸಾರ್ವಜನಿಕರಿಗೂ ಸ್ಪಷ್ಟತೆ ಬರುತ್ತದೆ ಎಂದು ಹೇಳಿದರು.
ನಿಯಯ ಉಲ್ಲಂಘನೆಸಾಬೀತಾದರೆ ಕ್ರಮಈ ಬಗ್ಗೆ ಕೇಂದ್ರಕ್ಕೆ ಪತ್ರ
ಸಚಿವ ದಿನೇಶ್‌ಬೆಂಗಳೂರು: ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯು ಕ್ಲಿನಿಕಲ್ ಟ್ರಯಲ್ ವೇಳೆ ನಿಯಮ ಉಲ್ಲಂಘನೆ ಮಾಡಿತ್ತು ಎಂಬ ಪ್ರಕರಣದ ಬಗ್ಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ತನಿಖೆ ನಡೆಸಲಿದೆ. ಈ ತನಿಖೆಯಲ್ಲಿ ಆಸ್ಪತ್ರೆಯು, ಪ್ರೊಟೋಕಾಲ್ ಉಲ್ಲಂಘನೆ ಆರೋಪಗಳು ದೃಢಪಟ್ಟರೆ ಕೇಂದ್ರಿಯ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.