ಬಿಸಿಲಿಗೆ ಅಯೋಧ್ಯೆ, ವಾರಾಣಸಿ ತತ್ತರ : ಭಕ್ತರ ಸಂಖ್ಯೆ ಭಾರಿ ಕುಸಿತ

Published : Apr 27, 2026, 09:25 AM IST
ram mandir ayodhya

ಸಾರಾಂಶ

ಉತ್ತರ ಪ್ರದೇಶದ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ರಾಮಜನ್ಮ ಭೂಮಿ ಅಯೋಧ್ಯೆ ಹಾಗೂ ವಾರಾಣಸಿ ಅಧಿಕ ತಾಪಮಾದಿಂದ ತತ್ತರಿಸಿದ್ದು, ಪ್ರವಾಸಿಗರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಅಯೋಧ್ಯೆಯಲ್ಲಿ 42 ಡಿಗ್ರಿ, ಕಾಶಿಯಲ್ಲಿ 45 ಡಿಗ್ರಿ ತಾಪಮಾನ ದಾಖಲಾಗಿದೆ.

 ಅಯೋಧ್ಯೆ/ವಾರಾಣಸಿ: ಉತ್ತರ ಪ್ರದೇಶದ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ರಾಮಜನ್ಮ ಭೂಮಿ ಅಯೋಧ್ಯೆ ಹಾಗೂ ವಾರಾಣಸಿ ಅಧಿಕ ತಾಪಮಾದಿಂದ ತತ್ತರಿಸಿದ್ದು, ಪ್ರವಾಸಿಗರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಅಯೋಧ್ಯೆಯಲ್ಲಿ 42 ಡಿಗ್ರಿ, ಕಾಶಿಯಲ್ಲಿ 45 ಡಿಗ್ರಿ ತಾಪಮಾನ ದಾಖಲಾಗಿದೆ.

1 ಲಕ್ಷಕ್ಕೂ ಹೆಚ್ಚು ಭಕ್ತರು ಸಾಮಾನ್ಯ ದಿನಗಳಲ್ಲಿ ಭೇಟಿ

ಇಲ್ಲಿನ ದೇಗುಲಗಳಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಭಕ್ತರು ಸಾಮಾನ್ಯ ದಿನಗಳಲ್ಲಿ ಭೇಟಿ ನೀಡುತ್ತಿದ್ದರು, ಆದರೆ ಈಗ ಈ ಪ್ರಮಾಣ 40,000ಕ್ಕಿಂತ ಕಡಿಮೆಯಾಗಿದೆ. ಇನ್ನು ಹೆಚ್ಚುತ್ತಿರುವ ಬಿಸಿಲಿನ ಕಾರಣದಿಂದ ನೈವೇದ್ಯಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.

ಅಯೋಧ್ಯೆಯಲ್ಲಿ ಶನಿವಾರ ಗರಿಷ್ಠ 42 ಡಿಗ್ರಿ

ಅಯೋಧ್ಯೆಯಲ್ಲಿ ಶನಿವಾರ ಗರಿಷ್ಠ 42 ಡಿಗ್ರಿ ಹಾಗೂ ವಾರಾಣಸಿಯಲ್ಲಿ 45 ಡಿಗ್ರಿ ತಾಪಮಾನ ದಾಖಲಾಗಿದೆ. ಮುಂದಿನ 72 ಗಂಟೆಗಳಲ್ಲಿ ತಾಪಮಾನ ಇನ್ನೂ ಅಧಿಕವಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಿರಿಯ ಛಾಯಾಗ್ರಾಹಕ ರಘು ರಾಯ್‌ ನಿಧನ
ಕರ್ನಾಟಕದ ಬೈಲಕುಪ್ಪೆ ಅರಣ್ಯಕ್ಕೆ ಮೋದಿ ಫಿದಾ