ವಾಷಿಂಗ್ಟನ್: ಬಾಡಿಗೆ ಕಾರು, ಬಾಡಿಗೆ ಮನೆ ಬಗ್ಗೆ ಕೇಳಿರುತ್ತೀರಿ.. ಆದರೆ ಬಾಡಿಗೆ ಕೋಳಿ ಎಂಬ ಬಗ್ಗೆ ಕೇಳಿರಲು ಸಾಧ್ಯವೆ? ಅಮೆರಿಕದಲ್ಲಿ ಮೊಟ್ಟೆಗೋಸ್ಕರ ಕೋಳಿಗಳನ್ನೂ ಬಾಡಿಗೆಗೆ ಕೊಡುವ ವ್ಯವಸ್ಥೆ ಶುರುವಾಗಿದೆ!
ಕಂಪನಿಯ ಸಹ-ಸಂಸ್ಥಾಪಕ ಜೆನ್ ಟಾಂಪ್ಕಿನ್ಸ್ ಅವರು ಹೇಳುವಂತೆ, ದುಬಾರಿ ಬೆಲೆ ಕೊಟ್ಟು ಮೊಟ್ಟೆ ಖರೀದಿಸುವ ಬದಲು, ಜನರಿಗೆ ಕೋಳಿಗಳನ್ನು ಕಂಪನಿಯವರೇ ಬಾಡಿಗೆಗೆ ಕೊಡುತ್ತಾರೆ. 2 ಕೋಳಿಗಳು ವಾರಕ್ಕೆ ಸುಮಾರು 1 ಡಜನ್ ಮೊಟ್ಟೆಗಳನ್ನು ಇಡುತ್ತವೆ. ಬಾಡಿಗೆಗೆ ನೀಡಿದ ಅವಧಿ ಮುಗಿದ ನಂತರ ಕಂಪನಿಯವರು ಕೋಳಿಗಳನ್ನು ವಾಪಸ್ ಪಡೆಯುತ್ತಾರೆ. ಆದರೆ ಆ ಅವಧಿಯಲ್ಲಿ ಕೋಳಿ ಹಾಕಿದ ಅಷ್ಟೂ ಮೊಟ್ಟೆಗಳನ್ನು ಜನ ಬಳಸಿಕೊಳ್ಳಬಹುದಾಗಿದೆ.
ಈ ಹೊಸ ಟ್ರೆಂಡ್ ಅಮೆರಿಕದಲ್ಲಿ ಭಾರೀ ಸದ್ದು ಮಾಡಿದ್ದು, ಬಾಡಿಗೆ ಕೋಳಿಗಳಿಗಾಗಿ ಜನ ಮುಗಿಬಿದ್ದಿದ್ದಾರೆ.