2024-25ನೇ ಸಾಲಿನ ಬಜೆಟ್‌ನಲ್ಲಿ ಗೃಹ ಸಚಿವಾಲಯಕ್ಕೆ 2,02,868.70 ಕೋಟಿ ರು. ಅನುದಾನ ನೀಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಪ್ಯಾರಾಮಿಲಿಟರಿ ಪಡೆಗಳಿಗೆ 1,32,345.47 ಕೊಟಿ ರು. ನೀಡಲಾಗಿದೆ.
ಪ್ಯಾರಾಮಿಲಿಟರಿ ಪಡೆಗಳಲ್ಲಿ ಸಿಆರ್‌ಪಿಎಫ್‌ಗೆ 32,809.65 ಕೋಟಿ ರು., ಬಿಎಸ್‌ಎಫ್‌ಗೆ 25,027.52 ಕೋಟಿ ರು., ಸಿಐಎಸ್‌ಎಫ್‌ಗೆ 13,655 ಕೋಟಿ ರು., ಐಟಿಬಿಪಿಗೆ 8,253 ಕೋಟಿ ರು., ಎಸ್‌ಎಸ್‌ಬಿಗೆ 8,485.77 ಕೋಟಿ ರು., ಅಸ್ಸಾಂ ರೈಫಲ್ಸ್‌ಗೆ 7,3368.33 ಕೋಟಿ ರು. ನೀಡಲಾಗಿದೆ.
ಹಾಗೆಯೇ ಇಂಟೆಲಿಜೆನ್ಸ್ ಬ್ಯೂರೋಗೆ 3,195 ಕೋಟಿ ರು., ದೆಹಲಿ ಪೊಲೀಸ್‌ಗೆ 11 ಸಾವಿರ ಕೋಟಿ ರು., ವಿಶೇಷ ಭದ್ರತಾ ಪಡೆಗೆ 506.32 ಕೋಟಿ ರು., ಮಂಜೂರು ಮಾಡಲಾಗಿದೆ.
ಹಾಗೆಯೇ ಮೂಲಸೌಕರ್ಯ ಅಭಿವೃದ್ಧಿಗೆ 3,199 ಕೋಟಿ ರು., ಗಡಿ ಪ್ರದೇಶ ಅಭಿವೃದ್ಧಿಗೆ 335 ಕೋಟಿ ರು., ಸುರಕ್ಷಿತ ನಗರ ಯೋಜನೆಗೆ 214 ಕೋಟಿ ರು. ನೀಡಲಾಗಿದೆ. ಜೊತೆಗೆ ಸರ್ಕಾರದ ಖರ್ಚು ವೆಚ್ಚಗಳನ್ನು ನಿಭಾಯಿಸಲು 1,248.91 ಕೋಟಿ ರು.ಗಳನ್ನು ನೀಡಲಾಗಿದೆ.
ಜೊತೆಗೆ ಜಮ್ಮು ಕಾಶ್ಮೀರಕ್ಕೆ 37,277.74 ಕೋಟು ರು., ಲಡಾಖ್‌ಗೆ 5,958 ಕೋಟಿ ರು., ಅಂಡಮಾನ್ ನಿಕೋಬಾರ್‌ಗೆ 5,866.37 ಕೋಟಿ ರು., ಚಂಡೀಗಢಕ್ಕೆ 5,862,62 ಕೋಟಿ ರು., ಪುದುಚೆರಿಗೆ 3,269 ಕೋಟಿ ರು., ದಾದ್ರಾ-ನಗರಹವೇಲಿ ಮತ್ತು ದಮನ್-ದಿಯುಗೆ 2,648.97 ಕೋಟಿ ರು., ಲಕ್ಷದ್ವೀಪಕ್ಕೆ 1,490.10 ಕೋಟಿ ರು., ಮತ್ತು ದೆಹಲಿಗೆ 1,168.01 ಕೋಟಿ ರು. ನೀಡಲಾಗಿದೆ.