ಕೇಂದ್ರ ಬಜೆಟ್‌ 2024: ಯುಪಿಎ ಸರ್ಕಾರದ ಆರ್ಥಿಕತೆ ಬಗ್ಗೆ ಶ್ವೇತಪತ್ರ

KannadaprabhaNewsNetwork |  
Published : Feb 02, 2024, 01:06 AM ISTUpdated : Feb 02, 2024, 11:29 AM IST
white paper decision

ಸಾರಾಂಶ

ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆಯಲ್ಲಿ ಇದ್ದ ಸ್ಥಿತಿಗತಿಯ ಕುರಿತು ಶ್ವೇತಪತ್ರ ಹೊರಡಿಸಲಾಗುವುದು ಎಂದು ಎನ್‌ಡಿಎ ಸರ್ಕಾರ ತಿಳಿಸಿದೆ.

2014ಕ್ಕಿಂತ ಮೊದಲು ದೇಶದಲ್ಲಿ ನಡೆದಿದ್ದ ಆರ್ಥಿಕ ಅವ್ಯವಹಾರದ ಕುರಿತಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಶ್ವೇತಪತ್ರ ಹೊರಡಿಸಲು ತೀರ್ಮಾನಿಸಿದೆ. 2014ಕ್ಕೂ ಮೊದಲು ದೇಶದ ಆರ್ಥಿಕತೆ ಎಲ್ಲಿತ್ತು. ಈಗ ಎಲ್ಲಿದೆ ಎಂಬುದನ್ನು ಇದರಲ್ಲಿ ವಿವರಿಸಲಾಗುತ್ತದೆ. 

ಹಿಂದಿನ ಅವಧಿಯಲ್ಲಿ ನಡೆದ ಆರ್ಥಿಕ ಅವ್ಯವಸ್ಥೆಯ ಬಗ್ಗೆ ತಿಳಿಸುವ ಗುರಿಯೊಂದಿಗೆ ಇದನ್ನು ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

2014ರಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸಲು ಜವಾಬ್ದಾರಿ ಅಗಾಧವಾಗಿತ್ತು. 

ಆದರೆ ದೇಶ ಮೊದಲು ಎಂಬ ನಂಬಿಕೆಯನ್ನು ಬಲವಾಗಿ ಮತ್ತು ಯಶಸ್ವಿಯಾಗಿ ಸರ್ಕಾರ ಅನುಸರಿಸಿತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಉಂಟಾಗಿದ್ದ ಆರ್ಥಿಕ ತೊಂದರೆಗಳನ್ನು ಯಶಸ್ವಿಯಾಗಿ ದಾಟಲಾಯಿತು. 

ಹಾಗೆಯೇ ಭಾರತದ ಆರ್ಥಿಕತೆಯನ್ನು ಸುಸ್ಥಿರವಾದ ಹಾದಿಯಲ್ಲಿ ಸ್ಥಾಪಿಸುವುದರೊಂದಿಗೆ ಎಲ್ಲಾ ವಿಭಾಗಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.

PREV

Recommended Stories

ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ