ಕೇಂದ್ರ ಬಜೆಟ್‌ 2024: ಸಂಶೋಧನೆಗೆ 1 ಲಕ್ಷ ಕೋಟಿ ರು. ಕಾರ್ಪಸ್‌ ನಿಧಿ

KannadaprabhaNewsNetwork |  
Published : Feb 02, 2024, 01:05 AM ISTUpdated : Feb 02, 2024, 11:41 AM IST
Union Budget 2024

ಸಾರಾಂಶ

ಸಂಶೋಧನೆ ನಡೆಸುವ ಕಂಪನಿಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಉದಯೋನ್ಮುಖ ವಲಯಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಹೆಚ್ಚಿಸಲು ಖಾಸಗಿ ವಲಯ ಉತ್ತೇಜಿಸಲು 50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರು. ಮೊತ್ತದ ಕಾರ್ಪಸ್ ಫಂಡ್‌ (ಮೀಸಲು ನಿಧಿ) ಸ್ಥಾಪಿಸಲಾಗುವುದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಅಲ್ಲದೆ, ತಂತ್ರಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ಯವಕರಿಗೆ ಇದು ಸುವರ್ಣ ಯುಗವಾಗಿದೆ ಎಂದು ಹೇಳಿದೆ.

‘50 ವರ್ಷಗಳ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರುಪಾಯಿಗಳ ಕಾರ್ಪಸ್ ಸ್ಥಾಪಿಸಲಾಗುವುದು. ಕಾರ್ಪಸ್‌ ನಿಧಿಯು ದೀರ್ಘಾವಧಿಯ ಹಣಕಾಸು ಸೇವೆ ನೀಡಲಿದೆ. 

ಇದನ್ನು ಕಡಿಮೆ ಅಥವಾ ಶೂನ್ಯ ಬಡ್ಡಿದರಗಳೊಂದಿಗೆ ಒದಗಿಸುತ್ತದೆ’ ಎಂದಿದೆ.‘ಉದಯೋನ್ಮುಖ ವಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಸರ್ಕಾರ ಉತ್ತೇಜಿಸುತ್ತದೆ. 

ನಮ್ಮ ಯುವ ಶಕ್ತಿ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಬೇಕು’ ಎಂದಿದೆ.

PREV

Recommended Stories

ಇಡೀ ವಕ್ಫ್‌ ಕಾಯ್ದೆ ಬದಲು 2 ಅಂಶಕ್ಕಷ್ಟೆ ಸುಪ್ರೀಂ ತಡೆ
30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಸಾರ್ಥಕತೆ