ಕೇಂದ್ರ ಬಜೆಟ್‌ ಅಮೃತ ಕಾಲದ ಪ್ರತಿಬಿಂಬ: ರಾಜೀವ್‌ ಚಂದ್ರಶೇಖರ್‌

KannadaprabhaNewsNetwork | Updated : Feb 02 2024, 11:45 AM IST

ಸಾರಾಂಶ

ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ರಾಜೀವ್‌ ಚಂದ್ರಶೇಖರ್‌ ಬಜೆಟ್‌ ಕುರಿತು ಹಾಡಿ ಹೊಗಳಿದರು.

ನವದೆಹಲಿ: ನಿರ್ಮಲಾ ಸೀತಾರಾಮನ್‌ ಮಂಡಿಸಿದ ಮಧ್ಯಂತರ ಬಜೆಟ್‌ ಭಾರತವು ಅಮೃತ ಕಾಲದಿಂದ ವಿಕಸಿತ ಭಾರತಕ್ಕೆ ಹೊರಳುತ್ತಿರುವ ಪ್ರತಿಬಿಂಬದಂತಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು. 

ಈ ಕುರಿತು ಪತ್ರಿಕಾ ಬಿಡುಗಡೆ ಮಾಡಿರುವ ಅವರು, ‘ಭಾರತದ ಆರ್ಥಿಕತೆಯು ‘ಅಸ್ಥಿರ 5 ಆರ್ಥಿಕತೆಗಳ ಸಾಲಿನಿಂದ ಅತ್ಯಂತ ಉತ್ತಮ 5 ಆರ್ಥಿಕತೆಗಳ ಸಾಲಿಗೆ ಬಂದು ನಿಂತಿದೆ. ಇಷ್ಟೇ ಅಲ್ಲದೆ ಅತ್ಯಂತ ವೇಗವಾಗಿ ಆರ್ತಿಕತೆ ಅಭಿವೃದ್ಧಿಯಾಗುತ್ತಿದೆ. 

ಭಾರತದ ನಾಲ್ಕು ಆಧಾರಸ್ತಂಭಗಳಾದ ಮಹಿಳೆ, ರೈತ, ಯುವಜನತೆ ಮತ್ತು ಬಡವರನ್ನು ಸಬಲೀಕರಿಸುವ ಮೂಲಕ ಭಾರತ ಸರ್ಕಾರದ ಧ್ಯೇಯವಾದ ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌ ಜೊತೆಗೆ ಸಬ್‌ಕಾ ಪ್ರಯಾಸ್‌ ಮಾಡುವ ದೃಷ್ಟಿಕೋನವನ್ನು ಪ್ರಸ್ತುತ ಬಜೆಟ್‌ ಪ್ರತಿಬಿಂಬಿಸಿದೆ. 

ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳ ಸಾಧನೆಯ ಆಧಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Share this article