ಸಾವಿರಾರು ಕೋಟಿ ವೆಚ್ಚದ ತಂತ್ರಜ್ಞಾನ ಸೋಲಿಸಿದ ಇರಾನ್
ತನ್ನ ಅತ್ಯಾಧುನಿಕ ಸ್ಟೆಲ್ತ್ (ರಾಡಾರ್ ಕಣ್ಣಿಂದ ತಪ್ಪಿಸಿಕೊಳ್ಳುವ) ತಂತ್ರಜ್ಞಾನದಿಂದಲೇ ಖ್ಯಾತವಾಗಿರುವ ಅಮೆರಿಕ ಎಫ್-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಎಫ್ 35 ಮೇಲೆ ಶತ್ರು ದಾಳಿ ಇದೇ ಮೊದಲು. 2019ರಲ್ಲಿ ಅಮೆರಿಕ ವಾಯುಪಡೆಗೆ ಸೇರಿದ 950 ಕೋಟಿ ರು. ಮೌಲ್ಯದ ಈ ವಿಮಾನವು, ರಷ್ಯಾದ ಅತಿ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಾದ ಎಸ್-400 ಕಣ್ಣಿಗೂ ಈ ವಿಮಾನವು ಕಾಣಿಸದು. ಹೀಗಿರುವಾಗ, ದುರ್ಬಲ ವಾಯುಪಡೆ ಹೊಂದಿರುವ ಇರಾನ್‌ನ ಪುಟ್ಟ ಕ್ಷಿಪಣಿ, ಎಫ್ 35 ಗುರುತಿಸಿ ದಾಳಿ ಮಾಡಿದ್ದು ಹೇಗೆ ಎಂಬ ಕುತೂಹಲಕ್ಕೆ ವಿಶ್ಲೇಷಣೆ ಇಲ್ಲಿದೆ.
==- ಎಫ್-35 ವಿಮಾನವು ಸ್ಟೆಲ್ತ್ ತಂತ್ರಜ್ಞಾನ ಒಳಗೊಂಡಿದೆ. ಅಂದರೆ ವಿಮಾನದ ಇಡೀ ಮೈ ಭಾಗಕ್ಕೆ ಶತ್ರು ದೇಶದ ರಾಡಾರ್ ಸೂಸುವ ಎಲ್ಲಾ ಎಲೆಕ್ಟ್ರೋಮ್ಯಾಗ್ನೆಟಿಕ್ ಸಿಗ್ನಲ್ ಹೀರಿಕೊಳ್ಳುವ ರಾಸಾಯನಿಕವನ್ನು ಲೇಪನ ಮಾಡಲಾಗಿದೆ. ಇದು ವಿಮಾನದ ಇರುವಿಕೆ ರಹಸ್ಯ ಕಾಪಾಡುತ್ತೆ. ಈ ತಂತ್ರಜ್ಞಾನಕ್ಕಾಗಿ ಅಮೆರಿಕ ಸಾವಿರಾರು ಕೋಟಿ ರು. ವ್ಯಯಿಸಿದೆ.
- ಹೀಗಾಗಿಯೇ ಅಮೆರಿಕದ ವಿಮಾನ ಪತ್ತೆಗೆ ಇರುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿಗ್ನಲ್ ಬಿಟ್ಟು ತನ್ನದೇ ಐಆರ್‌ಎಸ್‌ಟಿ (ಇನ್ಫ್ರಾರೆಡ್ ಹುಡುಕಾಟ ಮತ್ತು ಟ್ರ್ಯಾಕಿಂಗ್) ವ್ಯವಸ್ಥೆ ಬಳಸಿಕೊಂಡಿದೆ. ಇದು ಆಗಸದಲ್ಲಿನ ವಸ್ತುಗಳ ಉಷ್ಣಾಂಶ ಟ್ರ್ಯಾಕ್ ಮಾಡುತ್ತದೆ.
- ಯುದ್ಧದ ವಿಮಾನದ ಸುಳಿವು ಪತ್ತೆಯಾಗುತ್ತಲೇ, ಇರಾನ್ ತನ್ನ ಅರ್ಧ ಡ್ರೋನ್ ಹಾಗೂ ಅರ್ಧ ಕ್ಷಿಪಣಿಯಂತಹ ಎಸ್‌ಎ-67 ಕ್ಷಿಪಣಿಯನ್ನು ಆಗಸಕ್ಕೆ ಹಾರಿಬಿಟ್ಟಿದೆ. ಇತ್ತ ಅಮೆರಿಕದ ಯುದ್ಧವಿಮಾನ ಪತ್ತೆಯಾಗುತ್ತಿದ್ದಂತೆ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುನ್ನುಗ್ಗಿದೆ.
- ಆದರೆ ತನ್ನ ಗುರಿಯನ್ನಷ್ಟೇ ನೋಡುತ್ತಾ ಮುನ್ನುಗ್ಗುತ್ತಿದ್ದ ಎಸ್‌ಎ-67, ಎಫ್-35ರ ಸನಿಹಕ್ಕೆ ಬರುತ್ತಿದ್ದಂತೆ ಸ್ಫೋಟಿಸಿದೆ. ಹೀಗೆ ಅಮೆರಿಕ ಸಾವಿರಾರು ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದ್ದ ವಿಮಾನವನ್ನು ಇರಾನ್ ಸರಳ ತಂತ್ರಜ್ಞಾನ ಬಳಸಿ ಹೊಡೆದುಹಾಕಿದೆ.