ಆರೋಗ್ಯ, ಗೌಪ್ಯತೆ, ರಕ್ಷಣೆ ಮೊದಲ ಆದ್ಯತೆ
==
- ಪತನವಾಗುತ್ತಿರುವ ವಿಮಾನದಿಂದ ಪ್ಯಾರಾಚೂಟ್ ಮೂಲಕ ಪೈಲಟ್‌ಗಳು ಹೊರಬರುವರಾದರೂ, ಹೋಗಿ ಬೀಳುವ ಜಾಗ ಎಂಥದ್ದೆಂದು ತಿಳಿದಿರುವುದಿಲ್ಲ. ಹಾಗಾಗಿ ನೆಲ ಮುಟ್ಟುತ್ತಿದ್ದಂತೆ ತಮ್ಮ ದೈಹಿಕ ಸ್ಥಿತಿಯನ್ನು ಪರಿಶೀಲಿಸಿಕೊಂಡು, ಕದಲಲು, ನಡೆಯಲು ಸಮರ್ಥನಾಗಿರುವೆನೇ ಎಂದು ನೋಡಿಕೊಳ್ಳುತ್ತಾರೆ. ಗಾಯಗಳಾಗಿದ್ದರೆ ಪ್ರಥಮ ಚಿಕಿತ್ಸೆ ಕೊಟ್ಟುಕೊಳ್ಳುತ್ತಾರೆ.- ಬಳಿಕ ತಾವಿರುವ ಪ್ರದೇಶ ಯಾವುದೆಂದು ನೋಡುತ್ತಾರೆ. ಎದುರಾಳಿಗಳ ಗಡಿಯೊಳಗಿದ್ದರೆ, ಯಾರ ಕಣ್ಣಿಗೂ ಬೀಳದೆ ಹೇಗಿರುವುದು ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾರೆ. ಜತೆಗೆ ತಮ್ಮ ದೇಶ/ ಸೇನೆ/ಮಿತ್ರ ದೇಶಗಳ ಜೊತೆ ರಹಸ್ಯ ಸಾಧನಗಳ ಮೂಲಕ ಸಂಪರ್ಕ ಸಾಧಿಸಲು ಯತ್ನಿಸುತ್ತಾರೆ.
- ಒಂದೊಮ್ಮೆ ನಗರಪ್ರದೇಶದಲ್ಲಿದ್ದರೆ ಮನೆಯ ಮಹಡಿಗಳಂತಹ ಎತ್ತರದ ಪ್ರದೇಶ ಸೇರಿಕೊಳ್ಳುತ್ತಾರೆ. ಹಳ್ಳಿಯಾದರೆ ಹೊಲ-ಗದ್ದೆಗಳಲ್ಲಿ ಅವಿತು ಕೂರುತ್ತಾರೆ. ಇಂತಹ ಪ್ರದೇಶಗಳಿಂದ ಅವರ ರಕ್ಷಣೆಯು ಸುಲಭವಾಗುತ್ತದೆ. ಇಂತಹ ಜಾಗಗಳನ್ನು ತಲುಪಲು ಜನಸಂಚಾರವಿರುವ ರಸ್ತೆಗಳನ್ನು ಬಳಸದೆ ಕಾಡುಮೇಡುಗಳ ಹಾದಿಯನ್ನು ನೆಚ್ಚಿಕೊಳ್ಳುತ್ತಾರೆ.
-ರೇಡಿಯೋ ಮೂಲಕ, ತಮ್ಮನ್ನು ರಕ್ಷಿಸಲು ಬರುತ್ತಿರುವವರ ಜತೆ ಸಂಪರ್ಕದಲ್ಲಿರುವ ಪೈಲಟ್‌ಗಳು, ಆ ಹೆಲಿಕಾಪ್ಟರು ಬರುತ್ತಿದ್ದಂತೆ ತಾವಿರುವ ತಾವನ್ನು ತಿಳಿಸಲು ಕಿಟ್‌ನಲ್ಲಲಿರುವ ಬೀಕನ್, ಸಿಳ್ಳೆ ಅಥವಾ ಹೊಗೆ ಬರುವ ಸಾಧನಗಳನ್ನು ಬಳಸುತ್ತಾರೆ.