ಎಐ ಚಾಟ್‌ಬಾಟ್‌ ಬಳಸಿ ಉಗ್ರರಿಂದ ಬಾಂಬ್‌ ತಯಾರಿಕೆ!

KannadaprabhaNewsNetwork |  
Published : Jul 14, 2026, 03:00 AM IST
AI

ಸಾರಾಂಶ

ಅಲ್‌ ಖೈದಾ, ಐಸಿಸ್‌, ಬೋಕೊ ಹರಾಮ್‌ನಂತರ ಉಗ್ರ ಸಂಘಟನೆಗಳು ಎಐ ಚಾಟ್‌ಬಾಟ್‌ಗಳನ್ನು ಕೇವಲ ತೀವ್ರವಾದಿ ವಿಚಾರಗಳನ್ನು ಪಸರಿಸಲು ಬಳಸುತ್ತಿಲ್ಲ. ಬದಲಾಗಿ ಬಾಂಬ್‌ ತಯಾರಿಕೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ಉಗ್ರದಾಳಿಗಳನ್ನು ಸಂಘಟಿಸಲೂ ಬಳಸುತ್ತಿವೆ ಎಂಬ ಆಘಾತಕರ ಮಾಹಿತಿಯನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

 ವಾಷಿಂಗ್ಟನ್‌: ಅಲ್‌ ಖೈದಾ, ಐಸಿಸ್‌, ಬೋಕೊ ಹರಾಮ್‌ನಂತರ ಉಗ್ರ ಸಂಘಟನೆಗಳು ಎಐ ಚಾಟ್‌ಬಾಟ್‌ಗಳನ್ನು ಕೇವಲ ತೀವ್ರವಾದಿ ವಿಚಾರಗಳನ್ನು ಪಸರಿಸಲು ಬಳಸುತ್ತಿಲ್ಲ. ಬದಲಾಗಿ ಬಾಂಬ್‌ ತಯಾರಿಕೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ಉಗ್ರದಾಳಿಗಳನ್ನು ಸಂಘಟಿಸಲೂ ಬಳಸುತ್ತಿವೆ ಎಂಬ ಆಘಾತಕರ ಮಾಹಿತಿಯನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

ಸಂಶೋಧಕಿ ಡಾ. ಆ್ಯಂಟೋನಿಯಾ ಜೂಲಿಚ್ ನೇತೃತ್ವದಲ್ಲಿ ಈ ಕುರಿತು ಅಧ್ಯಯನ ನಡೆಸಲಾಗಿದೆ. ಈ ಸಂಬಂಧ ಕಳೆದ ವರ್ಷ ನೈಜೀರಿಯಾದ ಬೋಕೊ ಹರಾಮ್ ಸಂಘಟನೆಯ ಸುಮಾರು 60 ಮಾಜಿ ಉಗ್ರರನ್ನು ಸಂದರ್ಶಿಸಲಾಗಿದೆ. ಈ ವೇಳೆ, ಉಗ್ರಕೃತ್ಯಗಳನ್ನು ನಡೆಸಲು ಎಐ ಚಾಟ್‌ಬಾಟ್‌ಗಳನ್ನು ಯಾವೆಲ್ಲ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಅವರು ಬಾಯ್ಬಿಟ್ಟಿದ್ದಾರೆ.  

ಎಐನಿಂದ ಬಾಂಬ್‌ ತಯಾರಿಕೆ ಕಲಿಕೆ:‘ 

ನೀವು ಪ್ರಶ್ನೆ ಟೈಪ್ ಮಾಡಿದರೆ ಅಥವಾ ಧ್ವನಿಯ ಮೂಲಕ ಕೇಳಿದರೆ ಚಾಟ್‌ಬಾಟ್‌ ವಿವರವಾದ ಉತ್ತರ ನೀಡುತ್ತದೆ. ಉದಾಹರಣೆಗೆ, ಬಾಂಬ್ ತಯಾರಿಸುವುದು ಹೇಗೆ ಎಂದು ಕೇಳಿದರೆ, ಅದು ಆ ವಿಧಾನವನ್ನು ತಿಳಿಸುತ್ತದೆ. ಇದು ಮನುಷ್ಯನಂತೆಯೇ ಇರುವ ರೋಬೋಟ್‌ನಂತಿದೆ! ನಾವು ಇದನ್ನು ತುಂಬಾ ಬಳಸಿದ್ದೇವೆ’ ಎಂದು ಬೋಕೊ ಹರಾಮ್‌ನ ಮಾಜಿ ಕಮಾಂಡರ್ ಒಬ್ಬ ತಿಳಿಸಿದ್ದಾನೆ. 

ಎಐ ಬಳಸಲು ಐಸಿಸ್‌ ತರಬೇತಿ: 

ಶಸ್ತ್ರಾಸ್ತ್ರಗಳನ್ನು ಸುಧಾರಿಸಲು ಮತ್ತು ದಾಳಿಗಳನ್ನು ಯೋಜಿಸಲು ಬೇಕಾದ ತಾಂತ್ರಿಕ ಮಾಹಿತಿಯನ್ನು ಎಐ ಚಾಟ್‌ಬಾಟ್‌ಗಳಿಂದ ಪಡೆಯಲಾಗುತ್ತಿದೆ.

ಇವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ಐಸಿಸ್‌ ತರಬೇತಿ ನೀಡಿದೆ. ಈ ತರಬೇತಿಯಲ್ಲಿ, ಉಗ್ರರು ತಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಮರೆಮಾಡಲು ವಿಪಿಎನ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಾಫ್ಟ್‌ವೇರ್‌ಗಳನ್ನು ಹೊಂದಿರುವ ಲ್ಯಾಪ್‌ಟಾಪ್‌ಗಳನ್ನು ಬಳಸುತ್ತಿದ್ದರು. ತರಬೇತುದಾರರು ಅವರಿಗೆ ಎಐ ಖಾತೆಗಳನ್ನು ರಚಿಸುವುದು, ಉಪಯುಕ್ತ ಉತ್ತರಗಳನ್ನು ಪಡೆಯಲು ಸರಿಯಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವುದು ಮತ್ತು ಚಾಟ್‌ಬಾಟ್‌ಗಳ ಸುರಕ್ಷತಾ ನಿರ್ಬಂಧಗಳನ್ನು ತಪ್ಪಿಸುವುದು ಹೇಗೆ ಎಂಬುದನ್ನು ಕಲಿಸಿದರು ಎಂದು ಮಾಜಿ ಉಗ್ರರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗ್ಳೂರು ಸ್ಟಾರ್ಟಪ್‌ನಿಂದ ಮ್ಯಾಗ್ನೆಟ್‌ ಇಲ್ಲದ ಇವಿ ಮೋಟರ್‌ ಉತ್ಪಾದನೆ
ರಾಜ್ಯಸಭೇಲಿ ಬಿಜೆಪಿ ಬಹುಮತಕ್ಕೆ ಸಮೀಪ: 6 ಸೀಟುಗಳಷ್ಟೇ ಕೊರತೆ