ರಾಜ್ಯಸಭೇಲಿ ಬಿಜೆಪಿ ಬಹುಮತಕ್ಕೆ ಸಮೀಪ : 6 ಸೀಟುಗಳಷ್ಟೇ ಕೊರತೆ

KannadaprabhaNewsNetwork |  
Published : Jul 14, 2026, 03:00 AM IST
BJP

ಸಾರಾಂಶ

ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ, ಏಕೀಕೃತ ಚುನಾವಣೆಯಂತಹ ಮಸೂದೆಗಳನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ ಬಿಜೆಪಿ, ರಾಜ್ಯಸಭೆಯಲ್ಲಿ ಬಹುಮತಕ್ಕೆ ಬಹು ಹತ್ತಿರವಾಗಲಿದೆ. ವಿಧಾನಸಭೆ ಚುನಾವಣೆ ಬಳಿಕ ಟಿಎಂಸಿಯ ಕೆಲ ಸಂಸದರು ಪಕ್ಷ ತೊರೆದು ಬಿಜೆಪಿ ಸೇರಿರುವ ಕಾರಣ ಮೇಲ್ಮನೆಯಲ್ಲಿ ಕಮಲ ಪಡೆಯ ಬಲ ವೃದ್ಧಿ ಖಚಿತವೆಂಬ ವಾತಾವರಣವಿದೆ.

ನವದೆಹಲಿ: ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ, ಏಕೀಕೃತ ಚುನಾವಣೆಯಂತಹ ಮಸೂದೆಗಳನ್ನು ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ ಬಿಜೆಪಿ, ರಾಜ್ಯಸಭೆಯಲ್ಲಿ ಬಹುಮತಕ್ಕೆ ಬಹು ಹತ್ತಿರವಾಗಲಿದೆ. ವಿಧಾನಸಭೆ ಚುನಾವಣೆ ಬಳಿಕ ಟಿಎಂಸಿಯ ಕೆಲ ಸಂಸದರು ಪಕ್ಷ ತೊರೆದು ಬಿಜೆಪಿ ಸೇರಿರುವ ಕಾರಣ ಮೇಲ್ಮನೆಯಲ್ಲಿ ಕಮಲ ಪಡೆಯ ಬಲ ವೃದ್ಧಿ ಖಚಿತವೆಂಬ ವಾತಾವರಣವಿದೆ.

ಟಿಎಂಸಿಗೆ ರಾಜೀನಾಮೆ ನೀಡಿದ್ದ ಸುಶ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್‌ ಅವರು ಕೆಲ ದಿನಗಳ ಹಿಂದಷ್ಟೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಅವರಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಆ ಮೂವರಿಗೇ ಬಿಜೆಪಿ ಟಿಕೆಟ್‌ ನೀಡಿತ್ತು. ಜು.24ರಂದು ನಡೆಯಲಿರುವ ಚುನಾವಣೆಯಲ್ಲಿ ಈ ಮೂವರೂ ಗೆಲುವು ಸಾಧಿಸುವುದು ಖಚಿತ ಎಂಬಂತಿದೆ. ನಿರೀಕ್ಷಿತ ಫಲಿತಾಂಶ ದೊರೆತಲ್ಲಿ, ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 117 ಆಗಲಿದೆ.

 ಬಹುಮತಕ್ಕೆ 6 ಸೀಟು:

ರಾಜ್ಯಸಭೆಯಲ್ಲಿ ಸದ್ಯ ಒಟ್ಟು 245 ಸದಸ್ಯರಿದ್ದು, ಪೂರ್ಣ ಬಹುಮತಕ್ಕೆ 123 ಸೀಟುಗಳು ಅಗತ್ಯ. ಇದನ್ನು ಸಾಧಿಸಲು ಬಿಜೆಪಿಗೆ ಕೇವಲ 6 ಸೀಟುಗಳ ದೂರದಲ್ಲಿದೆ. ಕೊನೆಯ ಬಾರಿ ಪಕ್ಷವೊಂದು ಬಹುಮತ ಪಡೆದಿದ್ದುದು 1986ರಲ್ಲಿ. ಆ ವೇಳೆ ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದರು.

ಎನ್‌ಡಿಎ ಕೂಟದ ಬಲ 152

ಎನ್‌ಡಿಎ ಕೂಟದ ಬಲ 152 ಇದೆ. ರಾಜ್ಯಸಭೆಯಲ್ಲಿ ಮಸೂದೆಯೊಂದು ಅಂಗೀಕಾರವಾಗಲು 3ನೇ ಎರಡರಷ್ಟು(ಸದ್ಯ 166) ಮತಗಳು ಬೇಕಾಗುತ್ತದೆ. ಕೊರತೆಯಿರುವ ಮತಗಳನ್ನು ಮಿತ್ರಪಕ್ಷವಾದ ವೈಎಸ್‌ಆರ್‌ ಕಾಂಗ್ರೆಸ್‌, ಡಿಎಂಕೆ. ಬಿಜು ಜನತಾ ದಳ, ಎನ್‌ಸಿಪಿ(ಶರದ್‌ ಬಣ), ಸ್ವತಂತ್ರ ಅಭ್ಯರ್ಥಿಗಳಿಂದ ಪಡೆಯಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಐ ಚಾಟ್‌ಬಾಟ್‌ ಬಳಸಿ ಉಗ್ರರಿಂದ ಬಾಂಬ್‌ ತಯಾರಿಕೆ!
ಬೆಂಗ್ಳೂರು ಸ್ಟಾರ್ಟಪ್‌ನಿಂದ ಮ್ಯಾಗ್ನೆಟ್‌ ಇಲ್ಲದ ಇವಿ ಮೋಟರ್‌ ಉತ್ಪಾದನೆ