ಪ್ರಾಕೃತಿಕ ವಿಕೋಪ: ಕಳೆದ ವರ್ಷ 5 ಲಕ್ಷ ಜನರ ಸ್ಥಳಾಂತರ

KannadaprabhaNewsNetwork |  
Published : May 15, 2024, 01:30 AM IST
ಪ್ರಾಕೃತಿಕ ವಿಕೋಪ | Kannada Prabha

ಸಾರಾಂಶ

ದೇಶದ 3 ವರ್ಷದ ಅಂಕಿ-ಅಂಶಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತ ಕಂಡಿದ್ದು, 2022ರಲ್ಲಿ 25 ಲಕ್ಷ ಜನರು ಸ್ಥಳಾಂತರವಾಗಿದ್ದರು ಎಂದು ಜಾಗತಿಕ ವರದಿ ತಿಳಿಸಿದೆ.

ಪಿಟಿಐ ನವದೆಹಲಿ

ಪ್ರವಾಹ, ಚಂಡಮಾರುತಗಳು, ಭೂಕಂಪಗಳು ಮತ್ತು ಇತರ ವಿಪತ್ತುಗಳಿಂದಾಗಿ ಭಾರತವು 2023ರಲ್ಲಿ 5 ಲಕ್ಷ ಜನರ ಆಂತರಿಕ ಸ್ಥಳಾಂತರಗಳನ್ನು ಅನುಭವಿಸಿದೆ. ಇದು 2022 ರಲ್ಲಿ ಸುಮಾರು 25 ಲಕ್ಷ ಜನರ ಸ್ಥಳಾಂತರಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತವಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಜಾಗತಿಕ ವರದಿಯೊಂದು ತಿಳಿಸಿದೆ.

ಅತಿ ಹೆಚ್ಚು ಪ್ರವಾಹದ ಹಾಟ್‌ಸ್ಪಾಟ್‌ ಎಂಬ ಹಣೆಪಟ್ಟಿ ದೆಹಲಿಗೆ ಇದೆ. ಜುಲೈ 9, 2023ರಂದು ಭಾರೀ ಮಳೆಯ ನಂತರ ಯಮುನಾ ನದಿ ಉಕ್ಕಿ ಹರಿಯಿತು. ಅಲ್ಲಿಂದ ಸುಮಾರು 27 ಸಾವಿರ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡರು ಎಂದು ಜಿನೇವಾ ಮೂಲದ ಆಂತರಿಕ ಸ್ಥಳಾಂತರ ಮಾನಿಟರಿಂಗ್ ಸೆಂಟರ್ ಹೇಳಿದೆ.

ಜುಲೈ 9ರಂದು, ದೆಹಲಿಯು ಕೇವಲ 24 ಗಂಟೆಗಳಲ್ಲಿ 15 ಸೆಂ.ಮೀ. ಮಳೆ ದಾಖಲಿಸಿತ್ತು. ಇದು 31 ವರ್ಷದಲ್ಲಿನ ದಿಲ್ಲಿಯ ಅತಿ ಗರಿಷ್ಠ ಮಳೆಯಾಗಿತ್ತು. ಅಂದು ಯಮುನಾ ನದಿ ಭಾರಿ ಉಕ್ಕೇರಿತ್ತು.

ಜೂನ್‌ನಲ್ಲಿ ಅಸ್ಸಾಂನಲ್ಲಿ ಸುಮಾರು 91 ಸಾವಿರ ಜನರು ಸ್ಥಳಾಂತರಗೊಂಡ ದೊಡ್ಡ ಘಟನೆ ನಡೆಯಿತು. ಅದು 20 ಜಿಲ್ಲೆಗಳ ಮೇಲೆ ಪರಿಣಾಮ ಬೀರಿತು. ಗುಜರಾತ್‌, ರಾಜಸ್ಥಾನಗಳಲ್ಲಿ ಸೈಕ್ಲೋನ್‌ ಬಿಪರ್‌ಜೋಯ್‌ 1.05 ಲಕ್ಷ ಜನರ ಸ್ಥಳಾಂತರಕ್ಕೆ ನಾಂದಿ ಹಾಡಿತು ಎಂದು ವರದಿ ಹೇಳಿದೆ.ಕಳೆದ ವರ್ಷ ಜಗತ್ತಿನಲ್ಲಿ 76 ದಶಲಕ್ಷ ಜನರ ಗುಳೆಜಿನೇವಾ: ಸಂಘರ್ಷಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ಕಳೆದ ವರ್ಷ ತಮ್ಮ ದೇಶಗಳಲ್ಲಿ ಸುಮಾರು 76 ದಶಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಸೂಡಾನ್, ಕಾಂಗೋ ಮತ್ತು ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರವು ಒಟ್ಟಾರೆ ಗುಳೆಯಲ್ಲಿ 3ನೇ 2ರಷ್ಟು ವಲಸೆಗೆ ಕಾರಣವಾಗಿದೆ.ಅಮೆರಿಕದ ಡಿಸ್‌ಪ್ಲೇಸ್‌ಮೆಂಟ್‌ ಮಾನಟಿರಿಂಗ್‌ ಸೆಂಟರ್‌ ವರದಿ ಪ್ರಕಾರ, ಕಳೆದ 5 ವರ್ಷಗಳಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಸಂಖ್ಯೆಯು ಶೇ.50ರಷ್ಟು ಹೆಚ್ಚಿದೆ ಮತ್ತು ಕಳೆದ 1 ದಶಕದಲ್ಲಿ ಸರಿಸುಮಾರು ದುಪ್ಪಟ್ಟಾಗಿದೆ. ಅಂದರೆ ಇದು ಬೇರೆ ದೇಶಕ್ಕೆ ಓಡಿಹೋದ ಸ್ಥಳಾಂತರಗೊಂಡ ನಿರಾಶ್ರಿತರನ್ನು ಒಳಗೊಳ್ಳುವುದಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ