ರಷ್ಯಾದಿಂದ ಅಮೆರಿಕದ ಗೊಬ್ಬರ ಖರೀದಿ ನನಗೆ ಗೊತ್ತಿಲ್ಲ : ಟ್ರಂಪ್‌!

KannadaprabhaNewsNetwork |  
Published : Aug 07, 2025, 12:46 AM ISTUpdated : Aug 07, 2025, 04:28 AM IST
ಟ್ರಂಪ್ | Kannada Prabha

ಸಾರಾಂಶ

ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಉಕ್ರೇನ್‌ ಯುದ್ಧಕ್ಕೆ ಭಾರತ ಪರೋಕ್ಷವಾಗಿ ನೆರವು ನೀಡುತ್ತಿದೆ ಎಂದು ಆರೋಪಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಮ್ಮದೇ ದೇಶ ಅದೇ ರಷ್ಯಾದಿಂದ ರಸಗೊಬ್ಬರ, ಯುರೇನಿಯಂ ತರಿಸಿಕೊಳ್ಳುತ್ತಿರುವ ವಿಚಾರ ಗೊತ್ತೇ ಇಲ್ಲವಂತೆ!

 ನ್ಯೂಯಾರ್ಕ್‌/ವಾಷಿಂಗ್ಟನ್‌: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಉಕ್ರೇನ್‌ ಯುದ್ಧಕ್ಕೆ ಭಾರತ ಪರೋಕ್ಷವಾಗಿ ನೆರವು ನೀಡುತ್ತಿದೆ ಎಂದು ಆರೋಪಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಮ್ಮದೇ ದೇಶ ಅದೇ ರಷ್ಯಾದಿಂದ ರಸಗೊಬ್ಬರ, ಯುರೇನಿಯಂ ತರಿಸಿಕೊಳ್ಳುತ್ತಿರುವ ವಿಚಾರ ಗೊತ್ತೇ ಇಲ್ಲವಂತೆ!

ನಮ್ಮ ಮೇಲೆ ತೈಲ ಆಮದಿನ ಆರೋಪ ಮಾಡುತ್ತಿರುವ ಅಮೆರಿಕ, ಯುರೋಪಿಯನ್‌ ಒಕ್ಕೂಟ ಉಕ್ರೇನ್‌ ಯುದ್ಧದ ಸಂದರ್ಭದಲ್ಲೇ ರಷ್ಯಾದಿಂದ ಇಂಧನ, ರಾಸಾಯನಿಕ ವಸ್ತುಗಳು, ಯುರೇನಿಯಂ, ರಸಗೊಬ್ಬರಗಳನ್ನು ತರಿಸಿಕೊಳ್ಳುತ್ತಿವೆ ಎಂಬ ಭಾರತದ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಇಂಥದ್ದೊಂದು ಪ್ರತಿಕ್ರಿಯೆ ನೀಡಿದ್ದಾರೆ.

ರಷ್ಯಾದಿಂದ ಇಂಥ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ಆ ಕುರಿತು ಪರಿಶೀಲನೆ ನಡೆಸಿದ ಬಳಿಕ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ, ರಷ್ಯಾದಿಂದ ಇಂಧನ ಖರೀದಿಸುತ್ತಿರುವ ದೇಶಗಳ ಮೇಲೆ ತೆರಿಗೆ ಹೇರುವ ಕುರಿತು ಶೀಘ್ರದಲ್ಲೇ ನಿರ್ಧಾರ ಮಾಡುವುದಾಗಿಯೂ ತಿಳಿಸಿದ್ದಾರೆ.

ಈ ಮೂಲಕ ರಷ್ಯಾದಿಂದ ತೈಲ ಆಮದು ಮಾಡುತ್ತಿರುವ ಕಾರಣಕ್ಕೆ ಭಾರತದ ವಿರುದ್ಧ ತೆರಿಗೆ ಬೆದರಿಕೆ ಹಾಕುತ್ತಿರುವ ಅಮೆರಿಕದ ನಾಟಕ ಮತ್ತೊಮ್ಮೆ ಬಯಲಾದಂತಾಗಿದೆ.

ಟ್ರಂಪ್‌ ಬದಲು ಮೋದಿಗೆ ಕಾಲ್‌ ಮಾಡ್ತೀನಿ : ಬ್ರೆಜಿಲ್‌ ಅಧ್ಯಕ್ಷ ಲುಲ

 ರಿಯೋ ಡಿ ಜನೈರೋ: ವ್ಯಾಪಾರ ಒಪ್ಪಂದ ಕುರಿತ ಯಾವುದೇ ಸಮಸ್ಯೆ ಇದ್ದರೆ ನನ್ನ ಬಳಿ ನೇರವಾಗಿ ಮಾತನಾಡಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಹ್ವಾನವನ್ನು ಬ್ರೆಜಿಲ್‌ ಅಧ್ಯಕ್ಷ ಲೂಯಿಜ್‌ ಇನಾಸಿಯಾ ಲುಲ ಡ ಸಿಲ್ವಾ ತಿರಸ್ಕರಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ಯಾವುದೇ ಮಾತುಕತೆ ಆಡುವುದಿದ್ದರೆ ನಾನು ಭಾರತದ ಪ್ರಧಾನಿ ಮೋದಿ ಜೊತೆಗೆ ಅಥವಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆಗೆ ಆಡುವೆ ಎಂದಿದ್ದಾರೆ.

ಇತ್ತೀಚೆಗೆ ಅಮೆರಿಕ ತನ್ನ ಮೇಲೆ ಹೆಚ್ಚಿನ ಪ್ರತಿತೆರಿಗೆ ಹೇರಿದ್ದಕ್ಕೆ ಬ್ರೆಜಿಲ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಟ್ರಂಪ್‌, ತೆರಿಗೆ ಕುರಿತು ಅವರು ಯಾವುದೇ ಕ್ಷಣದಲ್ಲಿ ನನ್ನೊಂದಿಗೆ ನೇರವಾಗಿ ಮಾತನಾಡಬಹುದು ಎಂದಿದ್ದರು.ಇದನ್ನು ತಿರಸ್ಕರಿಸಿರುವ ಲುಲ, ‘ಪ್ರತಿತೆರಿಗೆ ವಿಷಯದಲ್ಲಿ ವಿಶ್ವ ವ್ಯಾಪಾರ ಸಂಘಟನೆ ಸೇರಿದಂತೆ ನಮಗೆ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿ ನಮ್ಮ ಹಿತಾಕಸ್ತಿ ಕಾಪಾಡಿಕೊಳ್ಳುತ್ತೇವೆ. ಅಮೆರಿಕ ಅಧ್ಯಕ್ಷರಿಗೆ ಕರೆ ಮಾಡಲು ಬಯಸಲ್ಲ. ಏಕೆಂದರೆ ಅವರು ಮಾತನಾಡಲು ಬಯಸಲ್ಲ. ಬೇಕಿದ್ದರೆ ಪ್ರಧಾನಿ ಮೋದಿ, ಅಧ್ಯಕ್ಷ ಜಿನ್‌ಪಿಂಗ್‌ ಅವರಿಗೆ ಕರೆ ಮಾಡುತ್ತೇನೆ’ ಎಂದಿದ್ದಾರೆ.

ಯಾವ ದೇಶಗಳಿಂದ ಹೆಚ್ಚು ರಷ್ಯಾ ತೈಲ ಖರೀದಿ?

ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣದಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿದ್ದಾರೆ. ಇದರ ಜತೆಗೆ ಐರೋಪ್ಯ ಒಕ್ಕೂಟವು ಸಹ ಭಾರತದ ವಿರುದ್ಧ ಕೆಂಡಕಾರುತ್ತಿದೆ. ಆದರೆ ವರದಿ ಪ್ರಕಾರ ಭಾರತವು ಕಚ್ಚಾ ತೈಲ ಆಮದಿನಲ್ಲಿ ಮಾತ್ರ 2ನೇ ಸ್ಥಾನದಲ್ಲಿರುವುದನ್ನು ಹೊರತುಪಡಿಸಿದರೆ, ಮಿಕ್ಕೆಲ್ಲದಲ್ಲಿಯೂ ಐರೋಪ್ಯ ಒಕ್ಕೂಟವೇ ಮುಂದಿದೆ. 

ಇಯು ‘ತೊಟ್ಟಿಲು ತೂಗಿ, ಮಗುವನ್ನು ಚಿವುಟಿದಂತೆ’ ನಡೆದುಕೊಳ್ಳುತ್ತಿದೆ. ಅತ್ತ ಟ್ರಂಪ್‌ ಸಹ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿ, ಇಯು ಮೇಲೆ ಕೇವಲ ಶೇ.15ರಷ್ಟು ತನ್ನ ತೆರಿಗೆ ವಿಧಿಸಿದ್ದಾರೆ. ಮತ್ತೊಂದೆಡೆ ಚೀನಾಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು 90 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.===

ಕಚ್ಚಾ ತೈಲ ಆಮದುಚೀನಾ 47%

ಭಾರತ 38%ಐರೋಪ್ಯ ಒಕ್ಕೂಟ 6%

ಎಲ್‌ಎನ್‌ಜಿ ಖರೀದಿ ಟಾಪ್‌ 3

ಐರೋಪ್ಯ ಒಕ್ಕೂಟ 50%ಚೀನಾ 21%

ಜಪಾನ್‌ 19%

ಕೊಳವೆ ಮೂಲಕ ಸಾಗಿಸುವ ಇಂಧನ ಖರೀದಿ

ಐರೋಪ್ಯ ಒಕ್ಕೂಟ 37%

ಚೀನಾ 29%ಟರ್ಕಿ 27%

ರಷ್ಯಾದಿಂದ ಏನೇನು ತರಿಸಿಕೊಳ್ತಿದೆ ಅಮೆರಿಕ?

- ಗೊಬ್ಬರ, ಯುರೇನಿಯಂ,ರಾಸಾಯನಿಕ, ಇತರೆ ವಸ್ತುಗಳು

PREV
Read more Articles on

Recommended Stories

ಸೆಮೀಸ್‌ನಲ್ಲಿ ಮೈಸೂರು vs ಶಿವಮೊಗ್ಗ,ಮಂಗಳೂರು vs ಹುಬ್ಬಳ್ಳಿ ಫೈಟ್‌ ಇಂದು
ಉತ್ತರಾಖಂಡ ಪ್ರವಾಹ : 3 ಅಂತಸ್ತಿನ ಕಟ್ಟಡದಷ್ಟು ಎತ್ತರ ಅವಶೇಷ ರಾಶಿ!