ರಂಗೋಲಿಯಲ್ಲಿ ಐ ಲವ್‌ಮೊಹಮ್ಮದ್‌: ಮಹಾಗ್ರಾಮ ಉದ್ವಿಗ್ನ ಸ್ಥಿತಿ - ಆರೋಪಿ ವಶಕ್ಕೆ

KannadaprabhaNewsNetwork |  
Published : Sep 30, 2025, 01:00 AM IST
ರಂಗೋಲಿ | Kannada Prabha

ಸಾರಾಂಶ

ಐ ಲವ್‌ ಮೊಹಮ್ಮದ್‌ ’ ವಿವಾದ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಶಾಂತಿಗೆ ಕಾರಣವಾಗಿರುವ ನಡುವೆಯೇ,  ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ, ‘ಪ್ರವಾದಿ ಮೇಲಿನ ಪ್ರೀತಿ ಹೃದಯದಲ್ಲಿರಬೇಕೇ ಹೊರತು, ಬೀದಿಯಲ್ಲಲ್ಲ.  ಶಾಂತಿ ಕಾಪಾಡಬೇಕು’ ಎಂದು ಕರೆ ನೀಡಿದ್ದಾರೆ.

ಮುಂಬೈ: ಐ ಲವ್‌ ಮೊಹಮ್ಮದ್‌ ವಿವಾದ ದಿನೇ ದಿನೇ ಐ ಲವ್‌ ಮೊಹಮ್ಮದ್‌ ವಿವಾದ ವ್ಯಾಪಕವಾಗುತ್ತಿದ್ದು, ಇದೀಗ ಮಹಾರಾಷ್ಟ್ರದ ಅಹಲ್ಯಾನಗರದ ಮಿಲಿವಾಡಾದಲ್ಲಿ ಗುಂಪೊಂದು ರಂಗೋಲಿಯಲ್ಲಿ ಐ ಲವ್‌ ಮೊಹಮ್ಮದ್‌ ಎಂದು ಬರೆದಿದೆ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ರಂಗೋಲಿ ಬಿಡಿಸಿದವನನ್ನು ಪೊಲೀಸರು ಬಂಧಿಸಿದರಾದರೂ ಕ್ರೋಧ ತಣಿಯದೆ, ಮುಸ್ಲಿಂ ಯುವಕರು ಹೆದ್ದಾರಿ ತಡೆದು, ಕಲ್ಲುತೂರಾಟ ನಡೆಸಿದ್ದಾರೆ.

ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, 30 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ‘ಕೋಮುಸಾಮರಸ್ಯ ಹಾಳುಗೆಡಹುವ ಉದ್ದೇಶದಿಂದಲೇ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.ಪ್ರವಾದಿ ಮೇಲಿನ ಪ್ರೀತಿ

ಹೃದಯದಲ್ಲಿರಲಿ, ಬೀದಿ

ಮೇಲಲ್ಲ: ಮೌಲ್ವಿ ಕರೆ 

ಬರೇಲಿ: ‘ಐ ಲವ್‌ ಮೊಹಮ್ಮದ್‌ ’ ವಿವಾದ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಶಾಂತಿಗೆ ಕಾರಣವಾಗಿರುವ ನಡುವೆಯೇ, ಆಲ್‌ ಇಂಡಿಯಾ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ರಜ್ವಿ ಬರೇಲ್ವಿ, ‘ಪ್ರವಾದಿ ಮೇಲಿನ ಪ್ರೀತಿ ಹೃದಯದಲ್ಲಿರಬೇಕೇ ಹೊರತು, ಬೀದಿಯಲ್ಲಲ್ಲ. ಎಲ್ಲರೂ ಶಾಂತಿ ಕಾಪಾಡಬೇಕು’ ಎಂದು ಕರೆ ನೀಡಿದ್ದಾರೆ.ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ‘ಪ್ರವಾದಿಯವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಬಳಸುವ ವಿಧಾನಗಳು ಸೂಕ್ತವಲ್ಲ. ಈ ಕ್ರಮಗಳು ‘ಮೊಹಮ್ಮದ್’ ಹೆಸರಿನ ಪೋಸ್ಟರ್‌ಗಳನ್ನು ಹರಿದು, ಬೀಳಿಸಿ, ಅಪವಿತ್ರಗೊಳಿಸುತ್ತವೆ. ಇತರ ಧರ್ಮಗಳ ಹಬ್ಬಗಳ ಸಮಯದಲ್ಲಿ ಪ್ರದರ್ಶನಗಳು, ಮೆರವಣಿಗೆಗಳು ಅಥವಾ ಆಂದೋಲನಗಳನ್ನು ನಡೆಸದಂತೆ ನಾನು ಸಲಹೆ ನೀಡುತ್ತೇನೆ. ಪ್ರವಾದಿಯವರ ಮೇಲಿನ ಪ್ರೀತಿ ಬೀದಿಗಳ ಮೇಲಲ್ಲ, ಹೃದಯಗಳಲ್ಲಿರಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ