ವಾಯುಪಡೆಯ ಮಿಗ್‌ 29 ಯುದ್ಧವಿಮಾನ ಪತನ: ಪೈಲಟ್‌ ಪಾರು

KannadaprabhaNewsNetwork |  
Published : Nov 05, 2024, 12:51 AM IST
ಜೆಟ್‌ ಪತನ | Kannada Prabha

ಸಾರಾಂಶ

ಭಾರತೀಯ ವಾಯಪಡೆಯ ಮಿಗ್‌-29 ಯುದ್ಧ ವಿಮಾನವು ಸೋಮವಾರ ಉತ್ತರಪ್ರದೇಶದ ಆಗ್ರಾದಲ್ಲಿ ಪತನಗೊಂಡಿದೆ. ಜೆಟ್‌ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಆಗ್ರಾ: ಭಾರತೀಯ ವಾಯಪಡೆಯ ಮಿಗ್‌-29 ಯುದ್ಧ ವಿಮಾನವು ಸೋಮವಾರ ಉತ್ತರಪ್ರದೇಶದ ಆಗ್ರಾದಲ್ಲಿ ಪತನಗೊಂಡಿದೆ. ಜೆಟ್‌ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಹಾರಾಟದ ವೇಳೆ ಜೆಟ್‌ನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿದ್ದು, ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜೆಟ್‌ನಲ್ಲಿದ್ದ ಇಬ್ಬರೂ ಪೈಲಟ್‌ಗಳು ಜಿಗಿದು ಸುರಕ್ಷಿತವಾಗಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.

ಈ ಹಿಂದೆ ಸೆ.2 ರಂದು ಮಿಗ್‌-29 ಯುದ್ಧವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಾಜಸ್ಥಾನದ ಬಾಢಮೇರ್‌ನಲ್ಲಿ ಪತನಗೊಂಡಿತ್ತು. ಯಾವುದೇ ಸಾವುನೋವು ಸಂಭವಿಸಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ