ತವರಲ್ಲಿ ವಿಶ್ವಕಪ್‌ ಗೆಲ್ಲಲು ಉತ್ಸುಕರಾಗಿದ್ದೇವೆ : ಹರ್ಮನ್‌

KannadaprabhaNewsNetwork |  
Published : Sep 27, 2025, 01:00 AM IST
ವಿಶ್ವಕಪ್‌  | Kannada Prabha

ಸಾರಾಂಶ

ಸೆ.30ರಿಂದ ಆರಂಭವಾಗಲಿರುವ ವನಿತೆಯರ ವಿಶ್ವಕಪ್‌ಗೂ ಮುನ್ನ ಅಂ.ರಾ. ಕ್ರಿಕೆಟ್‌ ಸಮಿತಿ(ಐಸಿಸಿ) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ, ನಾಯಕಿಯರ ಜೊತೆ ಸಂವಾದ (ಕ್ಯಾಪ್ಟನ್ಸ್‌ ಡೇ) ಕಾರ್ಯಕ್ರಮವನ್ನು ಆಯೋಜಿಸಿತ್ತು.

  ಬೆಂಗಳೂರು :  ಸೆ.30ರಿಂದ ಆರಂಭವಾಗಲಿರುವ ವನಿತೆಯರ ವಿಶ್ವಕಪ್‌ಗೂ ಮುನ್ನ ಅಂ.ರಾ. ಕ್ರಿಕೆಟ್‌ ಸಮಿತಿ(ಐಸಿಸಿ), ನಾಯಕಿಯರ ಜೊತೆ ಸಂವಾದ (ಕ್ಯಾಪ್ಟನ್ಸ್‌ ಡೇ) ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಸೇರಿದಂತೆ ನಾಲ್ಕು ತಂಡಗಳ ನಾಯಕಿಯರು ಭಾಗಿಯಾಗಿದ್ದರು.

ಹರ್ಮನ್‌ ಜತೆಗೆ ಆಸೀಸ್‌ ನಾಯಕಿ ಅಲಿಸ್ಸಾ ಹೀಲಿ, ಇಂಗ್ಲೆಂಡ್‌ನ ಹೀದರ್‌ ನೈಟ್‌, ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ‘ಒಬ್ಬ ಆಟಗಾರ್ತಿಯಾಗಿ ದೇಶ ಪ್ರತಿನಿಧಿಸುವುದು ಯಾವಾಗಲೂ ವಿಶೇಷ. ಅದರಲ್ಲೂ ವಿಶ್ವಕಪ್‌ನಲ್ಲಿ ತಂಡದ ಸಾರಥ್ಯ ವಹಿಸುತ್ತಿರುವುದು ಇನ್ನು ವಿಶೇಷ. ನಮ್ಮ ದೇಶದಲ್ಲೇ ನಡೆಯುತ್ತಿರುವುದರಿಂದ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿದೆ. ಅವರು ಕ್ರೀಡಾಂಗಣದಲ್ಲಿ ನಮ್ಮನ್ನು ಹುರಿದುಂಬಿಸುವುದನ್ನು ಈ ಬಾರಿ ನೋಡಲಿದ್ದೇವೆ. ನಮ್ಮ ಜವಾಬ್ದಾರಿಯೂ ಜಾಸ್ತಿಯಿದೆ. ತವರಿನಲ್ಲಿ ವಿಶ್ವಕಪ್‌ ಗೆಲ್ಲಲು ಉತ್ಸುಕರಾಗಿದ್ದೇವೆ’ ಎಂದರು.

ಭಾರತದ ಜೊತೆ ಶ್ರೀಲಂಕಾ ಸಹ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದ್ದು, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡದ ನಾಯಕಿಯರು ಕೊಲಂಬೊದಲ್ಲಿ ನಡೆದ ಕ್ಯಾಪ್ಟನ್ಸ್‌ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎರಡೂ ಕಾರ್ಯಕ್ರಮಗಳು ಒಟ್ಟಿಗೆ ನಡೆದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ ಮೇಲೆ ಟ್ರಂಪ್‌ ಮಾತಲ್ಲೇ ಬಾಂಬ್‌ ದಾಳಿ
ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!