ಇಂದು ಐಸಿಎಸ್‌ಇ 10, 12ನೇ ಕ್ಲಾಸ್‌ ಫಲಿತಾಂಶ ಪ್ರಕಟ

KannadaprabhaNewsNetwork |  
Published : May 06, 2024, 12:31 AM ISTUpdated : May 06, 2024, 05:53 AM IST
ಪರೀಕ್ಷೆ | Kannada Prabha

ಸಾರಾಂಶ

ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಬೋರ್ಡ್‌ನ 10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ (ಐಸಿಎಸ್) ತರಗತಿಗಳ ಪರೀಕ್ಷಾ ಫಲಿತಾಂಶವು ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.

ನವದೆಹಲಿ: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಬೋರ್ಡ್‌ನ 10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ (ಐಸಿಎಸ್) ತರಗತಿಗಳ ಪರೀಕ್ಷಾ ಫಲಿತಾಂಶವು ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.

ಫಲಿತಾಂಶವು ಬೋರ್ಡ್ ನ ಅಧಿಕೃತ ವೆಬ್‌ಸೈಟ್‌ ಮತ್ತು CAREERS ಪೋರ್ಟಲ್ ಹಾಗೂಡಿಜಿ ಲಾಕರ್‌ ನಲ್ಲಿ ಲಭ್ಯವಿದೆ.

ಈ ವರ್ಷದಿಂದ ಸಿಐಎಸ್‌ಸಿಇ ಬೋರ್ಡ್ 10 ಮತ್ತು 12 ತರಗತಿಗಳಿಗೆ ವಿಭಾಗೀಯ ಪರೀಕ್ಷೆ ನಡೆಸುವುದನ್ನು ನಿಲ್ಲಿಸಲು ನಿರ್ಧರಿಸಿದೆ.

ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಯಸುವ ವಿದ್ಯಾರ್ಥಿಗಳು ಕನಿಷ್ಠ ಎರಡು ವಿಷಯಗಳಿಗೆ ಸುಧಾರಣಾ ಪರೀಕ್ಷೆ ಕೈಗೊಳ್ಳಬಹುದು.

ಈ ಪರೀಕ್ಷೆ ಜುಲೈ ತಿಂಗಳಿನಲ್ಲಿ ನಡೆಯಲಿದೆ.

ಇಂದು ಐಸಿಎಸ್‌ಇ ಪರೀಕ್ಷೆ ಫಲಿತಾಂಶ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದ್ದು, ಡಿಜಿಲಾಕರ್‌ ಸೇರಿದಂತೆ ಹಲವು ವೇದಿಕೆಗಳಲ್ಲಿ ಲಭ್ಯವಿರುವುದಾಗಿ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜಿರಳೆ ಪಾರ್‍ಟಿ ಹೋರಾಟಕ್ಕೆ ಉಗ್ರ ಪನ್ನೂನ್‌ ಬೆಂಬಲ!
ವಾಂಗ್ಚುಕ್‌ ಉಪವಾಸ ಮುಕ್ತಾಯ - ನಿನ್ನೆ ತಡರಾತ್ರಿ ಕೇಂದ್ರದ ಮನವೊಲಿಕೆ ಯಶಸ್ವಿ