ಇಂದು ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‌ಡಿಎಗೆ 300+ ಸೀಟು

Published : Aug 29, 2025, 06:11 AM IST
PM Modi First Japan Visit In 7 Years

ಸಾರಾಂಶ

: 2024ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ 293 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ, ಈಗ ಚುನಾವಣೆ ನಡೆದರೆ 324 ಸೀಟುಗಳನ್ನು ಗೆಲ್ಲಲಿದೆ ಎಂದು ಇಂಡಿಯಾ ಟುಡೆ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆ ಹೇಳಿದೆ.

 ನವದೆಹಲಿ: 2024ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ 293 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ, ಈಗ ಚುನಾವಣೆ ನಡೆದರೆ 324 ಸೀಟುಗಳನ್ನು ಗೆಲ್ಲಲಿದೆ ಎಂದು ಇಂಡಿಯಾ ಟುಡೆ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆ ಹೇಳಿದೆ.

ಇಂಡಿಯಾ ಟುಡೆ ಸಿವೋಟರ್‌ ನಡೆಸಿದ ಮೂಡ್‌ ಆಫ್‌ ದಿನೇಷನ್‌ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೆ ಹಿನ್ನಡೆಯಾಗಲಿದ್ದು, 234 ಸೀಟುಗಳನ್ನು ಗೆದ್ದಿದ್ದ ಕೂಟ 208ಕ್ಕೆ ಕುಸಿತವಾಗಲಿದೆ ಎಂದು ಹೇಳಿದೆ.

ಜೂನ್‌ನಿಂದ ಆಗಸ್ಟ್‌ 14ವರೆಗೆ 2.06 ಲಕ್ಷ ಜನರನನ್ನು ಸಂದರ್ಶಿಸಿ, ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಹೆಚ್ಚಿನ ಜನರು ಎನ್‌ಡಿಎ ಪರ ಇದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಬಿಜೆಪಿಗೆ ಇಲ್ಲ ಬಹುಮತ:

ಈಗ ಚುನಾವಣೆ ನಡೆದರೆ, ಬಿಜೆಪಿಗೆ 260 ಸೀಟುಗಳು ಬರಲಿದೆ. ಆದರೆ ಇದು ಬಹುಮತಕ್ಕೆ ಬೇಕಿರುವ 281ಕ್ಕಿಂತ ಕಡಿಮೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಅದೇ ರೀತಿ ಕಾಂಗ್ರೆಸ್‌ಗೆ ಈಗ 99ರ ಬದಲು 97 ಸೀಟುಗಳು ಮಾತ್ರ ಬರಲಿದೆ ಎಂದು ಅಂದಾಜಿಸಿದೆ. ಎನ್‌ಡಿಎ ಮತಪ್ರಮಾಣ ಶೇ.44ರಿಂದ ಶೇ.46ಕ್ಕೆ ಏರಿಕೆಯಾಗಲಿದೆ.

PREV
Read more Articles on

Recommended Stories

ಜ್ಯೂಸ್‌ ಮೇಲಿನ ಒಆರೆಸ್‌ ಲೇಬಲ್‌ ತೆಗೀರಿ: ಕೇಂದ್ರ ಖಡಕ್‌ ಸೂಚನೆ
5 ದಿನದ ಬದಲು ಇನ್ನು 1/2ತಾಸಲ್ಲಿ ಸ್ಪೀಡ್‌ ಪೋಸ್ಟ್‌ಡೆಲಿವರಿ: ಜನವರೀಲಿ ಶುರು