ರ್‍ಯಾಗಿಂಗ್‌ ಬಗ್ಗೆ ದೂರು ಕೊಡದಿದ್ರೆ ಸಂತ್ರಸ್ತರು, ಸಾಕ್ಷಿಗಳಿಗೂ ಶಿಕ್ಷೆ!

KannadaprabhaNewsNetwork | Updated : Mar 22 2024, 08:58 AM IST

ಸಾರಾಂಶ

ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್‍ಯಾಗಿಂಗ್‌ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಗುಜರಾತ್‌ ರಾಜ್ಯ ಸರ್ಕಾರ, ರ್‍ಯಾಗಿಂಗ್‌ಗೆ ಒಳಗಾದವರು ಮತ್ತು ಅದಕ್ಕೆ ಸಾಕ್ಷಿಯಾಗಿದ್ದವರು ದೂರು ನೀಡುವುದನ್ನು ಕಡ್ಡಾಯ ಮಾಡಿದೆ

ಅಹಮದಾಬಾದ್‌: ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ರ್‍ಯಾಗಿಂಗ್‌ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಗುಜರಾತ್‌ ರಾಜ್ಯ ಸರ್ಕಾರ, ರ್‍ಯಾಗಿಂಗ್‌ಗೆ ಒಳಗಾದವರು ಮತ್ತು ಅದಕ್ಕೆ ಸಾಕ್ಷಿಯಾಗಿದ್ದವರು ದೂರು ನೀಡುವುದನ್ನು ಕಡ್ಡಾಯ ಮಾಡಿದೆ. 

ಒಂದು ವೇಳೆ ದೂರು ನೀಡದೇ ಹೋದಲ್ಲಿ ಅವರು ಕೂಡಾ ಶಿಕ್ಷೆಗೆ ಅರ್ಹರು ಎಂಬ ನಿಯಮ ರೂಪಿಸಿದೆ. ರ್‍ಯಾಗಿಂಗ್‌ ತಡೆಗಟ್ಟಲು ವಿದ್ಯಾರ್ಥಿಗಳು ದೂರು ನೀಡಬೇಕು. 

ಇಂಥ ಘಟನೆಗಳ ಕುರಿತು ಸಾಕ್ಷಿ ಇರುವ ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಇದಕ್ಕೆ ಹಿಂದೇಟು ಹಾಕಿದರೆ ಸಂತ್ರಸ್ತ ವಿದ್ಯಾರ್ಥಿ ಹಾಗೂ ಸಾಕ್ಷಿಗಳಿಗೆ ಸೂಕ್ತ ಶಿಕ್ಷೆ ವಿಧಿಸಲಾಗುವುದು. 

ಇನ್ನು ರ್‍ಯಾಗಿಂಗ್‌ ಮಾಡಿದ ವಿದ್ಯಾರ್ಥಿಗಳಿಗೆ ಕನಿಷ್ಠ ತರಗತಿಯಿಂದ ಹೊರಹಾಕುವ ಶಿಕ್ಷೆಯಿಂದ ಹಿಡಿದು, ಐದು ವರ್ಷ ಯಾವುದೇ ಕಾಲೇಜಿನಲ್ಲಿ ಪ್ರವೇಶ ಸಿಗದಂತೆ ನಿರ್ಬಂಧಿಸಲಾಗುವುದು ಎಂಬ ನಿಯಮ ರೂಪಿಸಲಾಗುವುದು ಎಂದು ಗುಜರಾತ್‌ ಸರ್ಕಾರ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

Share this article