‘ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಏನಾಗುತ್ತದೆಯೋ ಅದು ನನಗೆ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಷಯ. ಹೈಕಮಾಂಡ್ ಮೇಲೆ ನನಗೆ ವಿಶ್ವಾಸವಿದೆ. ಏನು ಮಾಡಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಡಿ.ಕೆ. ಶಿವಕುಮಾರ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ‘ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಏನಾಗುತ್ತದೆಯೋ ಅದು ನನಗೆ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಷಯ. ಹೈಕಮಾಂಡ್ ಮೇಲೆ ನನಗೆ ವಿಶ್ವಾಸವಿದೆ. ಏನು ಮಾಡಬೇಕು ಎಂಬುದು ಅವರಿಗೆ ತಿಳಿದಿದೆ. ಅವರು ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾರೆಂದು ನನಗೆ ಖಾತ್ರಿಯಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎನ್‌ಡಿಟೀವಿ ಜೊತೆ ಸಂದರ್ಶನದಲ್ಲಿ ಮಾತನಾಡಿದರು
ಎನ್‌ಡಿಟೀವಿ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಾಯಕತ್ವ ಬದಲಾವಣೆ ವಿಷಯವಾಗಿ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಬೇಸರವಿಲ್ಲ. ಏನಾಗುತ್ತದೆಯೋ ಅದು ನನಗೆ ಮತ್ತು ನನ್ನ ನಾಯಕತ್ವಕ್ಕೆ ಬಿಟ್ಟ ವಿಷಯ ಎಂದು ನನಗೆ ವಿಶ್ವಾಸವಿದೆ. ಅವರಿಗೆ ಏನು ಮಾಡಬೇಕು ಮತ್ತು ಹೇಗೆ ಮಾಡಬೇಕೆಂದು ತಿಳಿದಿದೆ. ನಾನು ಅವರ ಮೇಲೆ ನಂಬಿಕೆ ಇಡುತ್ತೇನೆ’ ಎಂದಿದ್ದಾರೆ.
ತುಂಬಾ ಊಹಾಪೋಹಗಳನ್ನು ಸೃಷ್ಟಿಸುತ್ತಿವೆ
ಇದೇ ವೇಳೆ, ‘ಮಾಧ್ಯಮಗಳು ಈ ಬಗ್ಗೆ ತುಂಬಾ ಊಹಾಪೋಹಗಳನ್ನು ಸೃಷ್ಟಿಸುತ್ತಿವೆ. ಏನಾಗಬೇಕೋ ಅದು ಸೂಕ್ತ ಸಮಯದಲ್ಲಿ ಆಗುತ್ತದೆ. ನಾವು ಒಟ್ಟಾಗಿ ಕೆಲಸ ಮಾಡೋಣ, ಬೆಂಗಳೂರನ್ನು ಹೆಮ್ಮೆಪಡುವಂತೆ ಮಾಡೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತದೆ. ಬೆಂಗಳೂರು ಬೆಳೆದರೆ, ಬಲಿಷ್ಠವಾದರೆ ಅದು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ’ ಎಂದರು.
ನಾಯಕತ್ವ ಬದಲಾವಣೆ ನನಗೂ, ನನ್ನ ನಾಯಕತ್ವಕ್ಕೂ ಬಿಟ್ಟ ವಿಷಯ
ಏನು ಮಾಡಬೇಕು, ಹೇಗೆ ಮಾಡಬೇಕೆಂದು ದಿಲ್ಲಿ ನಾಯಕರಿಗೆ ಗೊತ್ತಿದೆ
ಇಂಥ ನಿರ್ಧಾರ ಕರ್ನಾಟಕದ ಹಿತದೃಷ್ಟಿಯಿಂದ ಇರುವ ಖಾತ್ರಿ ನನಗಿದೆ
ನಾನು ಹೈಕಮಾಂಡ್ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ದೇನೆ: ಡಿ.ಕೆ.ಶಿವಕುಮಾರ್

