ಭಾರತ ಸ್ಥಿರ ದೇಶ, ಬಂಡವಾಳಕ್ಕೆ ಪ್ರಶಸ್ತ ತಾಣ : ಮೋದಿ

KannadaprabhaNewsNetwork |  
Published : Aug 30, 2025, 01:00 AM ISTUpdated : Aug 30, 2025, 05:32 AM IST
PM Modi First Japan Visit In 7 Years

ಸಾರಾಂಶ

  ‘ನಮ್ಮ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಇದೆ. ಜತೆಗೆ ನೀತಿಗಳಲ್ಲಿ ಪಾರದರ್ಶಕತೆಯೂ ಇದ್ದು, ಹಸಿರು ಇಂಧನ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಕರ್ಷಕ ರಾಷ್ಟ್ರವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಟೋಕಿಯೋ :  ಅಮೆರಿಕದಿಂದ ಹೇರಲ್ಪಟ್ಟಿರುವ ತೆರಿಗೆಯಿಂದಾಗಿ ಭಾರತದ ಆರ್ಥಿಕತೆಯ ಬಗ್ಗೆ ಕಳವಳಗಳಿರುವ ಹೊತ್ತಿನಲ್ಲೇ, ‘ನಮ್ಮ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಇದೆ. ಜತೆಗೆ ನೀತಿಗಳಲ್ಲಿ ಪಾರದರ್ಶಕತೆಯೂ ಇದ್ದು, ಹಸಿರು ಇಂಧನ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಕರ್ಷಕ ರಾಷ್ಟ್ರವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶುಕ್ರವಾರ ಜಪಾನ್‌ ವಾಣಿಜ್ಯೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಅತಿಶೀಘ್ರ ವಿಶ್ವದ 3ನೇ ದೊಡ್ಡ ಆರ್ಥಿಕತೆಯಾಗಲಿದೆ. ಭಾರತವು ಜಾಗತಿಕ ಆರ್ಥಿಕತೆಗೆ ಶೇ.18ರಷ್ಟು ಕೊಡುಗೆ ನೀಡುತ್ತಿದೆ. ಬಂಡವಾಳ ಮಾರುಕಟ್ಟೆ ಒಳ್ಳೆ ಲಾಭ ನೀಡುತ್ತಿದ್ದು, ಬ್ಯಾಂಕಿಂಗ್‌ ಕ್ಷೇತ್ರವೂ ಸದೃಢವಾಗಿದೆ. ಹಣದುಬ್ಬರ ಕಡಿಮೆಯಿದೆ’ ಎಂದು ಹೇಳಿದರು.

ಜಪಾನ್‌ ಜತೆಗಿನ ಸಂಬಂಧ ಕುರಿತು ಮಾತನಾಡಿದ ಅವರಿ, ‘ಜಪಾನ್‌ನ ತಂತ್ರಜ್ಞಾನ ಮತ್ತು ಭಾರತದ ಕೌಶಲ್ಯ ಒಟ್ಟಾದರೆ ಈ ದಶಕದಲ್ಲಿ ತಂತ್ರಜ್ಞಾನ ಕ್ರಾಂತಿಯೇ ಆಗಬಹುದು. ಜತೆಗೆ ಏಷ್ಯಾದ ಸ್ಥಿರತೆ, ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಬಹುದು. ಜಪಾನ್‌ನ ಕಂಪನಿಗಳು ಭಾರತದಲ್ಲಿ 3.52 ಲಕ್ಷ ಕೋಟಿ ರು. ಹೂಡಿಕೆ ಮಾಡಿವೆ. ಮೆಟ್ರೋ, ಉತ್ಪಾದನೆ, ಸೆಮಿಕಂಡಕ್ಟರ್‌, ಸ್ಟಾರ್ಟ್‌ಅಪ್‌ಗಳಲ್ಲಿ ಜಪಾನ್‌ ನಮ್ಮ ಅತ್ಯುತ್ತಮ ಪಾಲುದಾರನಾಗಿದೆ’ ಎಂದರು.

ಈ ಮೂಲಕ, ಅಮೆರಿಕದ ಜತೆ ಆರ್ಥಿಕ ಸಂಬಂಧ ಹದಗೆಟ್ಟಿರುವ ಹೊತ್ತಿನಲ್ಲಿ ಜಪಾನ್‌ನೊಂದಿಗಿನ ಸಂಬಂಧ ವೃದ್ಧಿಸುವ ಸುಳಿವು ನೀಡಿದ್ದಾರೆ. ದೇಶದ ಆರ್ಥಿಕತೆ ಬಗ್ಗೆ ಮಾತನಾಡುತ್ತಾ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ