ದೇಶದ ಅತಿ ದೊಡ್ಡ ಏರ್‌ಪೋರ್ಟ್ ಎಂಬ ಖ್ಯಾತಿಗೆ ಭವಿಷ್ಯದಲ್ಲಿ ಭಾಜನವಾಗಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ1 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾ ಸನಿಹದ ಜೆವಾರ್‌ನಲ್ಲಿ ಉದ್ಘಾಟಿಸಿದರು.
- ಮೋದಿಯಿಂದ ನೋಯ್ಡಾ ಅಂ.ರಾ. ಏರ್‌ಪೋರ್ಟ್ ಉದ್ಘಾಟನೆ
- ವಾರ್ಷಿಕ 1.2 ಕೋಟಿ ಪ್ರಯಾಣಿಕರ ಪ್ರಯಾಣ ನಿರೀಕ್ಷೆ
- ದಿಲ್ಲಿ ಮೇಲಿನ ಹೊರೆ ತಗ್ಗಿಸಲಿದೆ ನೋಯ್ಡಾ ಏರ್‌ಪೋರ್ಟ್ನೋಯ್ಡಾ (ಉ.ಪ್ರ.): ದೇಶದ ಅತಿ ದೊಡ್ಡ ಏರ್‌ಪೋರ್ಟ್ ಎಂಬ ಖ್ಯಾತಿಗೆ ಭವಿಷ್ಯದಲ್ಲಿ ಭಾಜನವಾಗಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ1 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೋಯ್ಡಾ ಸನಿಹದ ಜೆವಾರ್‌ನಲ್ಲಿ ಉದ್ಘಾಟಿಸಿದರು.
ಈ ವಿಮಾನ ನಿಲ್ದಾಣವು ದಿಲ್ಲಿಯ ಗಡಿಯಲ್ಲೇ ಇರುವ ಕಾರಣ ಹಾಗೂ ನೋಯ್ಡಾ ಕೂಡ ದೊಡ್ಡ ಔದ್ಯಮಿಕ ನಗರವಾಗಿರುವ ಕಾರಣ, ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ನಿರೀಕ್ಷೆ ಇದೆ.
ವಿಮಾನ ನಿಲ್ದಾಣದ ಮೊದಲ ಹಂತವನ್ನು ಅಂದಾಜು 11,200 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಬಹು ಮಾದರಿ ಸಾರಿಗೆ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿದ್ದು, ರಸ್ತೆ, ರೈಲು, ಮೆಟ್ರೋ ಮತ್ತು ಪ್ರಾದೇಶಿಕ ಸಾರಿಗೆ ವ್ಯವಸ್ಥೆಗಳ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಆರಂಭಿಕ ಹಂತದಲ್ಲಿ ಈ ವಿಮಾನ ನಿಲ್ದಾಣವು ವರ್ಷಕ್ಕೆ 1.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆಯಿದ್ದು, ಭವಿಷ್ಯದಲ್ಲಿ ಈ ಸಾಮರ್ಥ್ಯವನ್ನು ವಾರ್ಷಿಕ 7 ಕೋಟಿ ಪ್ರಯಾಣಿಕರಿಗೆ ಹೆಚ್ಚಿಸಲಾಗುವುದು.
ನಿಲ್ದಾಣವು ವಾರ್ಷಿಕವಾಗಿ 2.5 ಲಕ್ಷ ಮೆಟ್ರಿಕ್ ಟನ್ ಸರಕು ನಿರ್ವಹಿಸಬಲ್ಲ ಸರಕು ಕೇಂದ್ರ ಒಳಗೊಂಡಿದೆ. ಇದನ್ನು ಸುಮಾರು 18 ಲಕ್ಷ ಮೆಟ್ರಿಕ್ ಟನ್‌ಗಳಿಗೆ ವಿಸ್ತರಿಸಬಹುದು.
ಏರ್‌ಪೋರ್ಟ್ ದಿಲ್ಲಿ ಮೇಲಿನ ಹೊರೆಯಷ್ಟೇ ಅಲ್ಲ ಆಗ್ರಾ, ಮಥುರಾ, ಅಲಿಗಢ, ಗಾಜಿಯಾಬಾದ್, ಮೇರಠ್, ಇಟಾವಾ, ಬುಲಂದ್‌ಶಹರ್, ಫರೀದಾಬಾದ್ ಜನರಿಗೂ ಪ್ರಯೋಜನ ನೀಡಲಿದೆ.
--
ಬೆಂಗಳೂರು ಸೇರಿ 6
ನಗರಗಳಿಗೆ ಸಂಪರ್ಕ
ಸದ್ಯಕ್ಕೆ ಮೊದಲ ಹಂತದಲ್ಲಿ ನೋಯ್ಡಾ ಏರ್‌ಪೋರ್ಟ್‌ನಿಂದ ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ, ಲಖನೌ ಹಾಗೂ ಡೆಹ್ರಾಡೂನ್‌ಗೆ ವಿಮಾನ ಸಂಚಾರ ಆರಂಭವಾಗಲಿದೆ.
--
ಭವಿಷ್ಯದಲ್ಲಿ ದೇಶದ ಅತಿ
ದೊಡ್ಡ ಏರ್‌ಪೋರ್ಟ್
ಸದ್ಯಕ್ಕೆ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 5,500 ಎಕರೆ ವ್ಯಾಪ್ತಿಯಲ್ಲಿದ್ದು, ದೇಶದ ದೊಡ್ಡ ವಿಮಾನ ನಿಲ್ದಾಣ ಎನ್ನಿಸಿಕೊಂಡಿದೆ. ನೋಯ್ಡಾ ಏರ್‌ಪೋರ್ಟ್ 7,200 ಎಕರೆಯಲ್ಲಿ ನಿರ್ಮಾಣ ಆಗುತ್ತಿದೆ. ಆದರೆ ಸದ್ಯ ಹಂತ-1 ಮಾತ್ರ ಉದ್ಘಾಟನೆ ಆಗಿರುವ ಕಾರಣ ಪೂರ್ಣ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಮುಂದಿನ ಹಂತಗಳ ನಿರ್ಮಾಣ ಪೂರ್ಣಗೊಂಡ ನಂತರ ದೇಶದ ಅತಿದೊಡ್ಡ ವಿಮಾನ ನಿಲ್ದಾಣ ಆಗಲಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.