ಷೇರುಪೇಟೆ ಉತ್ತುಂಗಕ್ಕೆ ! ಉದಯೋನ್ಮುಖ ಮಾರುಕಟ್ಟೆಗಳ ಸೂಚ್ಯಂಕದಲ್ಲಿ ಭಾರತ ಮುನ್ನಡೆ

KannadaprabhaNewsNetwork |  
Published : Sep 07, 2024, 01:33 AM ISTUpdated : Sep 07, 2024, 04:34 AM IST
ಷೇರುಪೇಟೆ | Kannada Prabha

ಸಾರಾಂಶ

ಉದಯೋನ್ಮುಖ ಮಾರುಕಟ್ಟೆಗಳ ಹೂಡಿಕೆಯ ಮಾರುಕಟ್ಟೆ ಸೂಚ್ಯಂಕದಲ್ಲಿ (ಎಂಎಸ್‌ಸಿಐ) ಭಾರತವು ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದೆ. ಭಾರತೀಯ ಷೇರುಗಳು ಸೂಚ್ಯಂಕದಲ್ಲಿ ಶೇ.22.27 ರಷ್ಟು ಪಾಲು ಹೊಂದಿದ್ದರೆ, ಚೀನಾ ಶೇ.21.58 ಕ್ಕೆ ಇಳಿದಿದೆ.

ನವದೆಹಲಿ: ಉದಯೋನ್ಮುಖ ಮಾರುಕಟ್ಟೆಗಳ ಹೂಡಿಕೆಯ ಮಾರುಕಟ್ಟೆ ಸೂಚ್ಯಂಕದಲ್ಲಿ (ಎಂಎಸ್‌ಸಿಐ) ಭಾರತವು ಚೀನಾವನ್ನು ಹಿಂದಿಕ್ಕಿದೆ. ಚೀನಾವನ್ನು ಭಾರತ ಹಿಂದಿಕ್ಕುತ್ತಿರುವುದು ಇದೇ ಮೊದಲು.

ಭಾರತೀಯ ಷೇರುಗಳು ಸೂಚ್ಯಂಕದಲ್ಲಿ ಒಟ್ಟು ಶೇ.22.27ರಷ್ಟು ಪಾಲು ಹೊಂದಿದ್ದು, ಚೀನೀ ಷೇರುಗಳಿಗಿಂತ ಮುಂದಿವೆ. ಚೀನಾ ದೇಶದ ಸಂಯೋಜಿತ ಷೇರುಗಳ ಪಾಲು ಈಗ ಶೇ.21.58 ಕ್ಕೆ ಇಳಿದಿದೆ ಎಂದು ಆರ್ಥಿಕ ವ್ಯವಹಾರಗಳ ಬಗ್ಗೆ ವಿಶ್ಲೇಷಣೆ ಮಾಡುವ ಕಂಪನಿಯಾದ ‘ಮಾರ್ಗನ್‌ ಸ್ಟಾನ್ಲಿ’ ಹೇಳಿದೆ. ನಂತರದ ಸ್ಥಾನಗಳಲ್ಲಿ ತೈವಾನ್, ದಕ್ಷಿಣ ಕೊರಿಯಾ ಹಾಗೂ ಬ್ರೆಜಿಲ್‌ ಇವೆ.

ಎಂಎಸ್‌ಸಿಐ ಸೂಚ್ಯಂಕವು 24 ಉದಯೋನ್ಮುಖ ಮಾರುಕಟ್ಟೆ ದೇಶಗಳ ದೊಡ್ಡ, ಮಧ್ಯಮ ಮತ್ತು ಸಣ್ಣ-ಕ್ಯಾಪ್ ಷೇರುಗಳನ್ನು ಒಳಗೊಂಡಿರುವ ಒಂದು ಸಮಗ್ರ ಸೂಚ್ಯಂಕವಾಗಿದೆ.ಚೀನೀ ಷೇರುಪೇಟೆಯು ಹಾಗೂ ಅದರಲ್ಲಿನ ಕಂಪನಿಗಳು ಕಳೆದ 2 ವರ್ಷದಿಂದ ಕಳಾಹೀನವಾಗುತ್ತಿವೆ. ಆದರೆ ಇದೇ ಅವಧಿಯಲ್ಲಿ ಭಾರತದ ಷೇರುಪೇಟೆಗಳಲ್ಲಿ ಹೂಡಿಕೆದಾರರು ಉತ್ಸಾಹದಿಂದ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದು ಭಾರತದ ಚೇತರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!
ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ