ವಿನೇಶ್‌ ಫೋಗಟ್‌ ಮತ್ತು ಬಜರಂಗ್‌ ಪೂನಿಯಾ ಕಾಂಗ್ರೆಸ್‌ ಸೇರ್ಪಡೆ : ಹರ್ಯಾಣ ಚುನಾವಣೆಗೆ ಕಾವು

KannadaprabhaNewsNetwork |  
Published : Sep 07, 2024, 01:32 AM ISTUpdated : Sep 07, 2024, 04:36 AM IST
ವಿನೇಶ್‌ ಪೋಗಟ್‌ | Kannada Prabha

ಸಾರಾಂಶ

ಒಲಿಂಪಿಕ್ಸ್‌ ಪದಕ ವಿಜೇತೆಯರಾದ ವಿನೇಶ್‌ ಫೋಗಟ್‌ ಮತ್ತು ಬಜರಂಗ್‌ ಪೂನಿಯಾ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಹರ್ಯಾಣ ವಿಧಾ​ನ​ಸಭಾ ಚುನಾ​ವಣೆಯ 31 ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಪ್ರಕ​ಟಿಸಿದೆ. 

 ನವದೆಹಲಿ : 100 ಗ್ರಾಂ ತೂಕ ಹೆಚ್ಚಳ ಕಾರಣಕ್ಕೆ ಪ್ಯಾರಿಸ್‌ ಒಲಿಂಪಿಕ್ಸ್‌ ಪದಕದಿಂದ ವಂಚಿತರಾಗಿ ದೇಶದ ಹೃದಯ ಗೆದ್ದಿದ್ದ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಟ್‌ ಹಾಗೂ ಟೋಕಿಯೋ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿ ಆಟಗಾರ ಬಜರಂಗ್‌ ಪೂನಿಯಾ ಅವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಹರಾರ‍ಯಣ ವಿಧಾ​ನ​ಸಭಾ ಚುನಾ​ವಣೆಯ 31 ಅಭ್ಯ​ರ್ಥಿ​ಗಳ ಪಟ್ಟಿ​ಯನ್ನು ಕಾಂಗ್ರೆಸ್‌ ಪ್ರಕ​ಟಿ​ಸಿದೆ.ವಿನೇಶ್‌ ಫೋಗಟ್‌ ಜುಲಾನಾ ಕ್ಷೇತ್ರ​ದಿಂದ ಕಣ​ಕ್ಕಿ​ಳಿ​ಯ​ಲಿ​ದ್ದಾರೆ. ಬಜ​ರಂಗ ಪುನಿಯಾ ಚುನಾ​ವ​ಣೆಗೆ ಸ್ಪರ್ಧಿ​ಸು​ತ್ತಿಲ್ಲ. ಬದ​ಲಾಗಿ ಅವ​ರಿಗೆ ಕಿಸಾನ್‌ ಕಾಂಗ್ರೆಸ್‌ ಕಾರ್ಯಾ​ಧ್ಯಕ್ಷ ಹುದ್ದೆ ನೀಲಾ​ಗಿ​ದೆ. ಇಬ್ಬರೂ ಹರಾರ‍ಯಣ ಮೂಲ​ದ​ವ​ರು. ಇದೇ ವೇಳೆ ಮಾಜಿ ಸಿಎಂ ಭೂಪಿಂದರ ಸಿಂಗ್‌ ಹೂಡಾ ಗಢಿ ಸಂಪ್ಲಾ​ದಿಂದ ಸ್ಪರ್ಧಿ​ಸ​ಲಿ​ದ್ದಾ​ರೆ.

ಬಿಜೆಪಿ ವ್ಯಂಗ್ಯ:  ವಿನೇಶ್‌ ನಡೆಗೆ ಬಿಜೆಪಿ ವ್ಯಂಗ್ಯವಾಡಿದೆ. ‘ದೇಶದ ಪುತ್ರಿಯಾಗಿದ್ದ ವಿನೇಶ್‌ ಅವರು ಕಾಂಗ್ರೆಸ್‌ನ ಪುತ್ರಿಯಾಗಲು ಹೊರಟರೆ ನಾವೇ ನು ಮಾಡಲಾದೀತು?’ ಎಂದು ಹರ್ಯಾಣದ ಬಿಜೆಪಿ ನಾಯಕ ಅನಿಲ್‌ ವಿಜ್‌ ತೀಕ್ಷವಾಗಿ ಹೇಳಿದ್ದಾರೆ. ಏಕೆಂದರೆ ಬಿಜೆಪಿಯ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸಂಬಂಧ ದೆಹಲಿಯಲ್ಲಿ ನಡೆದ ಬೀದಿ ಹೋರಾಟದಲ್ಲಿ ಈ ಇಬ್ಬರೂ ಆಟ ಗಾರರು ಮುಂಚೂಣಿಯಲ್ಲಿದ್ದರು ಎಂಬುದು ಗಮನಾರ್ಹ.ಏತನ್ಮಧ್ಯೆ, ಕಾಂಗ್ರೆಸ್‌ ಸೇರ್ಪಡೆಗೂ ಮುನ್ನ ವಿನೇಶ್‌ ಫೋಗಟ್‌ ರೈಲ್ವೆ ನೌಕ​ರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಬೇರೆಯವರಿಗೆ ನನ್ನ ಸ್ಥಿತಿ ಬೇಡ- ವಿನೇಶ್‌: 

ದೆಹಲಿ​ಯಲ್ಲಿ ಬೆಳಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವಿನೇಶ್‌ ಹಾಗೂ ಬಜರಂಗ್‌ ಪೂನಿಯಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಹರಾರ‍ಯ​ಣ ಕಾಂಗ್ರೆಸ್‌ ಮುಖ್ಯಸ್ಥ ಉದಯ್‌ ಭಾನ್‌ ಸಮ್ಮುಖ ಅಧಿಕೃತವಾಗಿ ಸೇರ್ಪಡೆಯಾದರು.ಬಳಿಕ ಮಾತನಾಡಿದ ವಿನೇಶ್‌, ‘ನನ್ನ​ಷ್ಟುಯಾತನೆಯನ್ನು ಬೇರಾವ ಕ್ರೀಡಾಪಟುಗಳು ಅನುಭವಿ​ಸುವುದು ನನಗೆ ಇಷ್ಟವಿಲ್ಲ. ಕಷ್ಟಕಾಲದಲ್ಲಿ ಯಾರು ನಿಮ್ಮ ಜತೆಗೆ ಇರುತ್ತಾರೆ ಎಂಬುದು ನಿಮಗೆ ತಿಳಿದಿ​ದೆ. ನಮ್ಮನ್ನು ದಿಲ್ಲಿ ಬೀದಿಗಳಲ್ಲಿ ಎಳೆದಾಡಿದಾಗ ಬಿಜೆಪಿ ಬಿಟ್ಟು ಎಲ್ಲ ಪಕ್ಷಗಳು ಬೆಂಬಲಿಸಿವೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!
ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ