- ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತ

---ವೈಶಿಷ್ಟ್ಯ ಏನು?- ಭಾರತದಿಂದ ಬಹುಸ್ತರದ ಬ್ಯಾಲಿಸ್ಟಿಕ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸಾಮರ್ಥ್ಯ ಪರೀಕ್ಷೆ- ಅಣ್ವಸ್ತ್ರ ಕ್ಷಿಪಣಿಯನ್ನು ಮೊದಲೇ ಗುರುತಿಸಿ ನಾಶ ಮಾಡುವ ಯತ್ನದಲ್ಲಿ ಯಶಸ್ವಿ- 2,000-5,000 ಕಿ.ಮೀ. ದೂರದಿಂದ ಹಾರಿಬರುವ ಕ್ಷಿಪಣಿ ಪತ್ತೆ ಮಾಡಿ ಉಡೀಸ್‌- ರಷ್ಯಾ, ಅಮೆರಿಕ, ಚೀನಾದಂಥ ಕೆಲವೇ ಕೆಲ ದೇಶಗಳ ಸಾಲಿಗೆ ಭಾರತ ಸೇರ್ಪಡೆ- ಸಾಧನೆಗೈದ ಡಿಆರ್‌ಡಿಒ ವಿಜ್ಞಾನಿಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಶಂಸೆ--ನವದೆಹಲಿ: ಬ್ಯಾಲಿಸ್ಟಿಕ್‌ ಮತ್ತು ಖಂಡಾಂತರ ಕ್ಷಿಪಣಿಗಳ ಆಗಮನವನ್ನು ದೂರದಿಂದಲೇ ಗುರುತಿಸಿ ಅವುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುವ ಬಹುಸ್ತರದ ಬ್ಯಾಲಿಸ್ಟಿಕ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ (ಬಿಎಂಡಿ) ಸಾಮರ್ಥ್ಯ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. ಈ ಮೂಲಕ ಇಂಥ ಸಾಮರ್ಥ್ಯ ಹೊಂದಿದ ರಷ್ಯಾ, ಅಮೆರಿಕ, ಚೀನಾದಂಥ ಕೆಲವೇ ಕೆಲವು ದೇಶಗಳ ಸಾಲಿಗೆ ಇದೀಗ ಭಾರತವೂ ಸೇರಿಕೊಂಡಿದೆ.ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯನ್ನು ಜೂ.10, 11ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಭೂವಾತಾವರಣದ ಒಳಗೆ (100 ಕಿ.ಮೀ) ಮತ್ತು ಭೂವಾತಾವರಣದ ಹೊರಗಿನಿಂದ ಬರುವ ಬ್ಯಾಲಿಸ್ಟಿಕ್‌ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಪ್ರಕ್ರಿಯೆ ನಡೆಸಲಾಗಿತ್ತು.ಬಿಎಂಡಿಯು ದೀರ್ಘಶ್ರೇಣಿಯ ಅಣ್ವಸ್ತ್ರ ಕ್ಷಿಪಣಿ ದಾಳಿಯ ಕುರಿತು ಮುನ್ನೆಚ್ಚರಿಕೆ ನೀಡಬಲ್ಲದು. ಶತ್ರುವಿಮಾನಗಳನ್ನು ಪತ್ತೆ ಹಚ್ಚಿ ಆಗಸದಲ್ಲೇ ಹೊಡೆದುರುಳಿಸಬಲ್ಲದು. ಇದು 2,000-5,000 ಕಿ.ಮೀ. ದೂರದಿಂದ ಹಾರಿಬರುವ ಕ್ಷಿಪಣಿಗಳನ್ನೂ ಪತ್ತೆ ಹಚ್ಚಿ ಹೊಡೆಯುವ ಸಾಮರ್ಥ್ಯ ಹೊಂದಿದೆ.ಮಧ್ಯಮ ಶ್ರೇಣಿಯ ನೌಕಾ ಹಡಗು ವಿರೋಧಿ ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯನ್ನು ಸಹ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಡಿಆರ್‌ಡಿಒ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.