ಭಾರತದ ಆತ್ಮಸ್ಥೈರ್ಯ ಕುಗ್ಗಿಸಲು ಪಿತೂರಿ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

KannadaprabhaNewsNetwork |  
Published : Oct 13, 2024, 01:04 AM ISTUpdated : Oct 13, 2024, 04:27 AM IST
ಭಾಗವತ್‌ | Kannada Prabha

ಸಾರಾಂಶ

‘ಭಾರತ ಇಂದು ಶಕ್ತಿಶಾಲಿಯಾಗಿದ್ದು, ತನ್ನ ವಿಶ್ವಾಸಾರ್ಹತೆಯಿಂದ ಜಾಗತಿಕವಾಗಿ ಗೌರವಿಸಲ್ಪಡುತ್ತಿದೆ. ಆದರೆ ಅದರ ಸ್ಥೈರ್ಯವನ್ನು ಪರೀಕ್ಷಿಸಲು ಕೆಲ ದುಷ್ಟಶಕ್ತಿಗಳು ಪಿತೂರಿ ನಡೆಸುತ್ತಿವೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕಿಡಿ ಕಾರಿದ್ದಾರೆ.

ನಾಗ್ಪುರ: ‘ಭಾರತ ಇಂದು ಶಕ್ತಿಶಾಲಿಯಾಗಿದ್ದು, ತನ್ನ ವಿಶ್ವಾಸಾರ್ಹತೆಯಿಂದ ಜಾಗತಿಕವಾಗಿ ಗೌರವಿಸಲ್ಪಡುತ್ತಿದೆ. ಆದರೆ ಅದರ ಸ್ಥೈರ್ಯವನ್ನು ಪರೀಕ್ಷಿಸಲು ಕೆಲ ದುಷ್ಟಶಕ್ತಿಗಳು ಪಿತೂರಿ ನಡೆಸುತ್ತಿವೆ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕಿಡಿ ಕಾರಿದ್ದಾರೆ.

ಅಲ್ಲದೆ, ‘ಬಾಂಗ್ಲಾಗೆ ಭಾರತದಿಂದ ಬೆದರಿಕೆಯಿದೆ ಎಂದು ಬಿಂಬಿಸಿ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅಂತೆಯೇ ಪಾಕಿಸ್ತಾನದೊಂದಿಗೆ ಕೈಜೋಡಿಸಲು ಪ್ರಚೋದಿಸಲಾಗುತ್ತಿದೆ’ ಎಂದೂ ಹೇಳಿದ್ದಾರೆ.

ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ವಿಜಯದಶಮಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ತಲೆ ಮೇಲೆ ಆತಂಕದ ಕತ್ತಿ ತೂಗುತ್ತಿದೆ. ಅಲ್ಲಿನ ಹಿಂದೂಗಳಿಗೆ ಈಗ ಭಾರತ ಸರ್ಕಾರ ಸೇರಿದಂತೆ ಮಾನವೀಯತೆ ಮತ್ತು ಸಾಮರಸ್ಯವನ್ನು ಬೆಂಬಲಿಸುವವರ ಸಹಾಯದ ಅವಶ್ಯಕತೆಯಿದೆ’ ಎಂದರು. ಜೊತೆಗೆ, ಸಮಾಜದ ಒಂದು ವರ್ಗವನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಹಳವಳ ವ್ಯಕ್ತಪಡಿಸಿದರು.

‘ಒಂದು ದೇಶ ತನ್ನ ಪ್ರಜೆಗಳ ವ್ಯಕ್ತಿತ್ವದಿಂದ ಮಹಾನ್‌ ಎನ್ನಿಸಿಕೊಳ್ಳುತ್ತದೆ. ಭರವಸೆ ಮತ್ತು ಆಕಾಂಕ್ಷೆಗಳ ಜೊತೆಗೆ ಸವಾಲು ಮತ್ತು ಸಮಸ್ಯೆಗಳೂ ದೇಶದಲ್ಲಿವೆ. ದೇಶದ ಕಲ್ಯಾಣ, ಧರ್ಮ, ಸಂಸ್ಕೃತಿ ಹಾಗೂ ಸಮಾಜಕ್ಕಾಗಿ ಮಡಿದ ಅಹಿಲ್ಯಾಬಾಯಿ ಹೋಲ್ಕರ್‌, ದಯಾನಂದ ಸರಸ್ವತಿ, ಬಿರ್ಸಾ ಮುಂಡಾರಂತಹವರಿಂದ ಸ್ಫೂರ್ತಿ ಪಡೆಯಬೇಕು’ ಎಂದ ಅವರು, ಸಂಘ ಮುಂದಿನ ವರ್ಷ ಶತಮಾನ ಪೂರೈಸಲಿದೆ ಸಂತಸ ವ್ಯಕ್ತಪಡಿಸಿದರು.

ಹಮಾಸ್‌-ಇಸ್ರೇಲ್‌ ಸಂಘರ್ಷದಿಂದ ಯುದ್ಧ ಎಲ್ಲಿಯವರೆಗೆ ಹರಡುತ್ತದೆ ಎಂಬ ಆತಂಕವಿದೆ ಎಂದ ಭಾಗವತ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ಶಾಂತಿಯುತವಾಗಿ ಸಂಪನ್ನಗೊಂಡ ಕುರಿತು ತೃಪ್ತಿಯಿದೆ ಎಂದರು.

ಆರ್‌ಎಸ್‌ಎಸ್‌ ದೇಶ ಸೇವೆಗೆ ಮೀಸಲು: ಮೋದಿ

ನವದೆಹಲಿ: ‘ಆರ್‌ಎಸ್‌ಎಸ್‌ ದೇಶ ಸೇವೆಗೆ ಮೀಸಲಾಗಿರುವ ಸಂಘಟನೆ’ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸಂಘ ಶತಮಾನ ಪೂರೈಸುತ್ತಿರುವ ಹೊತ್ತಿನಲ್ಲಿ ಅದರ ಕಾರ್ಯಕರ್ತರಿಗೆ ಶುಭ ಕೋರಿದ್ದಾರೆ.

ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ವಿಜಯದಶಮಿಯಂದು ಮಾಡಿದ ಭಾಷಣದ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ, ‘ಇದನ್ನು ಕೇಳಲೇಬೇಕು’ ಎಂದು ಬರೆದಿದ್ದಾರೆ.

ತಾಯಿ ಭಾರತಿಯ ಪ್ರತಿ ಸಂಘದ ಸಮರ್ಪಣೆ ಎಲ್ಲಾ ಪೀಳಿಗೆಗಳನ್ನೂ ಪ್ರೇರೇಪಿಸುತ್ತದೆ ಮತ್ತು ವಿಕಸಿತ ಭಾರತದ ಗುರಿಯನ್ನು ಸಾಧಿಸುವಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಮೋದಿ ಹೇಳಿದ್ದಾರೆ.ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕನೆಂದು ಆರ್‌ಎಸ್‌ಎಸ್‌ ಗುರುತಿಸಿಕೊಂಡಿದ್ದು, ಪಕ್ಷವನ್ನು ಸೇರುವ ಮೊದಲು ಮೋದಿ ಕೂಡ ಸಂಘದ ಕಾರ್ಯಕರ್ತರಾಗಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ