ಶಸ್ತ್ರಾಸ್ತ್ರ ಆಮದು: ಉಕ್ರೇನ್‌ ನಂ.1, ಭಾರತ ನಂ.2

KannadaprabhaNewsNetwork |  
Published : Mar 12, 2025, 12:47 AM IST
ಉಕ್ರೇನ್ | Kannada Prabha

ಸಾರಾಂಶ

ಹಲವು ವರ್ಷಗಳಿಂದ ಭಾರತಕ್ಕಿದ್ದ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಆಮದುಗಾರ ಎಂಬ ಹಣೆಪಟ್ಟಿ ಇದೀಗ ಉಕ್ರೇನ್‌ ಪಾಲಾಗಿದೆ. ರಷ್ಯಾ ದಾಳಿ ಬಳಿಕ ವಿಶ್ವದ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ದೇಶವಾಗಿ ಉಕ್ರೇನ್‌ ಹೊರಹೊಮ್ಮಿದೆ.

ನವದೆಹಲಿ: ಹಲವು ವರ್ಷಗಳಿಂದ ಭಾರತಕ್ಕಿದ್ದ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಆಮದುಗಾರ ಎಂಬ ಹಣೆಪಟ್ಟಿ ಇದೀಗ ಉಕ್ರೇನ್‌ ಪಾಲಾಗಿದೆ. ರಷ್ಯಾ ದಾಳಿ ಬಳಿಕ ವಿಶ್ವದ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ದೇಶವಾಗಿ ಉಕ್ರೇನ್‌ ಹೊರಹೊಮ್ಮಿದೆ.

2020-24ನೇ ಸಾಲಿನಲ್ಲಿ ಉಕ್ರೇನ್‌ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. 2015-19ನೇ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ ಉಕ್ರೇನ್‌ನ ಶಸ್ತ್ರಾಸ್ತ್ರಗಳ ಆಮದಿನ ಪ್ರಮಾಣ 100 ಪಟ್ಟು ಹೆಚ್ಚಾಗಿದೆ.

2022ರಲ್ಲಿ ಉಕ್ರೇನ್‌ ಮೇಲೆ ರಷ್ಯಾದ ಪೂರ್ಣಪ್ರಮಾಣದ ದಾಳಿ ಬಳಿಕ ಈ ಬದಲಾವಣೆ ಆಗಿದೆ. ಕನಿಷ್ಠ 35 ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿವೆ ಎಂದು ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌(ಎಸ್‌ಐಪಿಆರ್‌ಐ) ಹೇಳಿದೆ.

ಉಕ್ರೇನ್‌ಗೆ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಅಮೆರಿಕವೇ ಪೂರೈಸುತ್ತಿದೆ. ದೇಶದ ಶೇ.45ರಷ್ಟು ಶಸ್ತ್ರಾಸ್ತ್ರಗಳ ಆಮದು ಅಮೆರಿಕದಿಂದಲೇ ಆಗುತ್ತಿದೆ.

ಭಾರತಕ್ಕೆ 2ನೇ ಸ್ಥಾನ:

ಇನ್ನು ಈ ಮುಂಚೆ ಶಸ್ತ್ರಾಸ್ತ್ರಗಳ ಆಮದು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ವಿಶ್ವದ ಶಸ್ತ್ರಾಸ್ತ್ರಗಳ ಆಮದಿನ ಶೇ.3ರಷ್ಟು ಭಾರತ ಮಾಡಿಕೊಳ್ಳುತ್ತಿದೆ. ಆದರೆ 2015-19ಕ್ಕೆ ಹೋಲಿಸಿದರೆ 202-24ರ ನಡುವೆ ಭಾರತದ ಶಸ್ತ್ರಾಸ್ತ್ರಗಳ ಆಮದಿನ ಪ್ರಮಾಣ ಶೇ.9.3ರಷ್ಟು ಕುಸಿತ ಕಂಡಿದೆ.

ಭಾರತವು ಶೇ.36ರಷ್ಟು ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. 2015-19ರ ನಡುವೆ ರಷ್ಯಾದಿಂದ ಶೇ.55ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ, 2010-14ರಲ್ಲಿ ಈ ಪ್ರಮಾಣ ಸೇ.72ರಷ್ಟಿತ್ತು.-ಬಾಕ್ಸ್‌-ಅಮೆರಿಕ ಅತಿದೊಡ್ಡ ರಫ್ತುದಾರ

ಅಮೆರಿಕವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತು ದೇಶವಾದರೆ, ಎರಡನೇ ಸ್ಥಾನದಲ್ಲಿ ಫ್ರಾನ್ಸ್‌ ಮತ್ತು ಮೂರನೇ ಸ್ಥಾನದಲ್ಲಿ ರಷ್ಯಾ ಇದೆ. ಉಕ್ರೇನ್ ಯುದ್ಧದ ಬಳಿಕ ರಷ್ಯಾದ ಶಸ್ತ್ರಾಸ್ತ್ರ ರಫ್ತಿಗೆ ಹೊಡೆತ ಬಿದ್ದಿದೆ. ಚೀನಾವು ನಾಲ್ಕನೇ ಸ್ಥಾನದಲ್ಲಿದೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ