ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬಕ್ಕೆ ಭಾರತ ಸಜ್ಜು

KannadaprabhaNewsNetwork |  
Published : Mar 17, 2024, 01:52 AM ISTUpdated : Mar 17, 2024, 07:40 AM IST
ಚುನಾವಣೆ | Kannada Prabha

ಸಾರಾಂಶ

2024ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವುದರೊಂದಿಗೆ ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆಚರಿಸಲು ದೇಶದಲ್ಲಿ ಚಾಲನೆ ಸಿಕ್ಕಿದಂತಾಗಿದೆ.

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವುದರೊಂದಿಗೆ ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆಚರಿಸಲು ದೇಶದಲ್ಲಿ ಚಾಲನೆ ಸಿಕ್ಕಿದಂತಾಗಿದೆ.

144 ಕೋಟಿ ಜನರೊಂದಿಗೆ ಭಾರತ ಸದ್ಯ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಗೆ ಚುಕ್ಕಾಣಿ ಹಿಡಿಯುವ ನೇತಾರರ ಆಯ್ಕೆಗೆ ಇದೀಗ 7 ಹಂತದ ಚುನಾವಣೆ ಘೋಷಣೆಯಾಗಿದೆ. 

144 ಕೋಟಿ ಜನರ ಪೈಕಿ 97 ಕೋಟಿ ಜನರು ಮತದಾನದ ಅವಕಾಶ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲ ಚುನಾವಣೆಗೆ ಬಳಸುವ ಸಿಬ್ಬಂದಿ, ಮತಗಟ್ಟೆ ಸಂಖ್ಯೆ, ನೊಂದಾಯಿತ ರಾಜಕೀಯ ಪಕ್ಷಗಳು, ಭದ್ರತಾ ವ್ಯವಸ್ಥೆ, ಚುನಾವಣಾ ವೆಚ್ಚ ಹೀಗೆ ಪ್ರತಿಯೊಂದು ವಿಷಯದಲ್ಲೂ ಈ ಚುನಾವಣೆ ವಿಶ್ವದಲ್ಲೇ ಕಂಡುಕೇಳರಿಯದ ಪ್ರಮಾಣದ್ದು ಎನ್ನಿಸಿಕೊಳ್ಳಲಿದೆ. ಹೀಗಾಗಿಯೇ ಮುಂದಿನ ಒಂದೂವರೆ ತಿಂಗಳ ಕಾಲ ಇಡೀ ವಿಶ್ವದ ಗಮನ ಭಾರತದತ್ತ ಇರಲಿದೆ.

ಯುರೋಪ್‌ ಒಕ್ಕೂಟಕ್ಕಿಂತ ಅಧಿಕ: ಯುರೋಪ್‌ ಒಕ್ಕೂಟದ ಜನಸಂಖ್ಯೆಗಿಂತ ಭಾರತೀಯ ಮತದಾರರೇ ಹೆಚ್ಚಿದ್ದಾರೆ. ಯುರೋಪಿಯನ್‌ ಒಕ್ಕೂಟ ಒಟ್ಟು ಜನಸಂಖ್ಯೆ 74 ಕೋಟಿ ಆಗಿದೆ, ಆದರೆ ಭಾರತದ ಮತದಾರರ ಸಂಖ್ಯೆ 97 ಕೋಟಿ ಆಗಿದೆ. 

ಅಮೆರಿಕದ ಜನಸಂಖ್ಯೆಗಿಂತ 3 ಪಟ್ಟು ಅಧಿಕ ಮತದಾರರು: ಅಮೆರಿಕ ಒಟ್ಟು ಜನಸಂಖ್ಯೆ ಹೆಚ್ಚುಕಡಿಮೆ 34 ಕೋಟಿ. ಮತದಾರರ ಸಂಖ್ಯೆ 16 ಕೋಟಿ. ಆದರೆ ಭಾರತದಲ್ಲಿ ಅರ್ಹ ಮತದಾರರ ಪ್ರಮಾಣವೇ 97 ಕೋಟಿ. ಅಂದರೆ ಅಮೆರಿಕದ ಒಟ್ಟು ಜನಸಂಖ್ಯೆಗಿಂತ ಹೆಚ್ಚುಕಡಿಮೆ 3 ಪಟ್ಟು ಅಧಿಕ.

 ವಿಶ್ವದ ದೊಡ್ಡ ಚುನಾವಣೆ ಹೇಗೆ?

  • 97 ಕೋಟಿ ಈ ಬಾರಿ ಮತಚಲಾವಣೆಯ ಅವಕಾಶ ಪಡೆದವರು
  • 2660 ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಹೊಂದಿರುವ ಪಕ್ಷಗಳು
  • 10.5 ಲಕ್ಷ ಮತದಾನಕ್ಕೆ ಸಿದ್ಧಪಡಿಸಲಾಗುವ ಮತಗಟ್ಟೆಗಳ ಸಂಖ್ಯೆ
  • 55 ಲಕ್ಷ ದೇಶವ್ಯಾಪಿ ಮತದಾನಕ್ಕಾಗಿ 55 ಇವಿಎಂಗಳ ಬಳಕೆ
  • 1.5 ಕೋಟಿ ಚುನಾವಣಾ ಪ್ರಕ್ರಿಯೆಗೆ ನಿಯೋಜನೆಗೊಳ್ಳಲಿರುವ ಸಿಬ್ಬಂದಿಗಳು
  • 8000 ಕಳೆದ ಬಾರಿ 8039 ಅಭ್ಯರ್ಥಿಗಳ ಸ್ಪರ್ಧೆ. ಈ ಬಾರಿ ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆ
  • 49.72 ಕೋಟಿ ಈ ಬಾರಿ ಮತದಾನದ ಅವಕಾಶ ಹೊಂದಿರುವ ಪುರುಷರು
  • 47.01 ಕೋಟಿ ಈ ಬಾರಿ ಮತದಾನದ ಅವಕಾಶ ಹೊಂದಿರುವ ಮಹಿಳೆಯರು
  • 1.82 ಕೋಟಿ ಮೊದಲ ಬಾರಿಗೆ ಮತದಾನದ ಅವಕಾಶ ಪಡೆದವರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಶ್ಮಿಕಾ-ವಿಜಯ್‌ ಮದುವೆ ಪ್ರಸಾರಕ್ಕೆ ₹60 ಕೋಟಿ ಆಫರ್‌!
ಬ್ರಹ್ಮಪುತ್ರಾ ನದಿ ಮೇಲೆ ಅತ್ಯಾಧುನಿಕ 6 ಪಥದ ಸೇತುವೆ