ದೇಶಾದ್ಯಂತ 20,000 ಕೋಟಿ ರು. ಮೌಲ್ಯದ ಸಂಚಾರ ನಿಯಮ ಉಲ್ಲಂಘನೆಯ (ಇ-ಚಲನ್) ದಂಡ ವಸೂಲಿಯಾಗದೆ ಬಾಕಿ ಉಳಿದಿರುವುದರಿಂದ ಗರಂ ಆಗಿರುವ ಸುಪ್ರೀಂ ಕೋರ್ಟ್, ಬಾಕಿ ಉಳಿದಿರುವ ಇ-ಚಲನ್‌ಗಳನ್ನು ವಿದ್ಯುತ್ ಬಿಲ್‌ಗಳಿಗೆ ಲಿಂಕ್ ಮಾಡಿ ದಂಡ ವಸೂಲಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೋಮವಾರ ಮಹತ್ವದ ನಿರ್ದೇಶನ ನೀಡಿದೆ.
ನವದೆಹಲಿ : ದೇಶಾದ್ಯಂತ 20,000 ಕೋಟಿ ರು. ಮೌಲ್ಯದ ಸಂಚಾರ ನಿಯಮ ಉಲ್ಲಂಘನೆಯ (ಇ-ಚಲನ್) ದಂಡ ವಸೂಲಿಯಾಗದೆ ಬಾಕಿ ಉಳಿದಿರುವುದರಿಂದ ಗರಂ ಆಗಿರುವ ಸುಪ್ರೀಂ ಕೋರ್ಟ್, ಬಾಕಿ ಉಳಿದಿರುವ ಇ-ಚಲನ್‌ಗಳನ್ನು ವಿದ್ಯುತ್ ಬಿಲ್‌ಗಳಿಗೆ ಲಿಂಕ್ ಮಾಡಿ ದಂಡ ವಸೂಲಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೋಮವಾರ ಮಹತ್ವದ ನಿರ್ದೇಶನ ನೀಡಿದೆ.
ಸಂಚಾರ ನಿಯಮಗಳ ಜಾರಿಗೆ ಸಂಬಂಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜೆ. ಬಿ.ಪರ್ದೀವಾಲಾ ಮತ್ತು ನ್ಯಾ. ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠ, ‘ಜನರು ಟ್ರಾಫಿಕ್ ಚಲನ್ ದಂಡವನ್ನು ಪಾವತಿಸದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್‌ಗೆ ಸೇರಿಸಿ. ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಭಯದಿಂದ ಅವರು ಬಿಲ್ ಪಾವತಿಸಲೇಬೇಕಾಗುತ್ತದೆ. ಈ ದೇಶದಲ್ಲಿ, ಇಂಥ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲೇಬೇಕು’ ಎಂದಿತು.
ದೇಶಾದ್ಯಂತ ಒಟ್ಟು 45,000 ಕೋಟಿ ರು. ಮೌಲ್ಯದ ಇ-ಚಲನ್‌ಗಳಲ್ಲಿ ಇದುವರೆಗೆ ಸುಮಾರು 25,000 ಕೋಟಿ ರು. ಮಾತ್ರ ವಸೂಲಾಗಿದ್ದು, ಇನ್ನೂ 20,000 ಕೋಟಿ ರು. ಬಾಕಿ ಉಳಿದಿದೆ.
ಕರ್ನಾಟಕ ನಂ.10:
ಭಾರತದ ಒಟ್ಟು ಸಂಚಾರ ನಿಯಮ ಉಲ್ಲಂಘನೆ ಚಲನ್‌ಗಳಲ್ಲಿ ಶೇ.80ರಷ್ಟು ಚಲನ್‌ಗಳು ದೇಶದ ಕೇವಲ 12 ರಾಜ್ಯಗಳಿಂದಲೇ ದಾಖಲಾಗುತ್ತಿವೆ ಎಂದು ಸಿಎಆರ್‌ಎಸ್24 ವರದಿ ತಿಳಿಸಿದೆ. ದೇಶದ ಒಟ್ಟು ಚಲನ್‌ಗಳಲ್ಲಿ ಉತ್ತರ ಪ್ರದೇಶ ಒಂದೇ ಶೇ.21.04ರಷ್ಟು ಪಾಲು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ದೆಹಲಿ (ಶೇ.11.51) ಹಾಗೂ ತಮಿಳುನಾಡು (ಶೇ.10.90) ನಂತರದ ಸ್ಥಾನಗಳಲ್ಲಿವೆ. ಕರ್ನಾಟಕ ರಾಜ್ಯವು ಶೇ.2.47ರಷ್ಟು ಚಲನ್‌ಗಳೊಂದಿಗೆ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಕೋರ್ಟ್ ಹೇಳಿದ್ದೇನು?
- ಜನರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಸಲು ನಿರಾಸಕ್ತಿ
- ದೇಶಾದ್ಯಂತ ₹20,000 ಕೋಟಿ ಟ್ರಾಫಿಕ್ ದಂಡ ವಸೂಲಾಗದೇ ಬಾಲಿ
- ವಿದ್ಯುತ್ ಬಿಲ್‌ಗೆ ಬಾಕಿ ಸಂಯೋಜಿಸಿದರೆ ದಂಡ ಪಾವತಿ ಅನಿವಾರ್ಯ
- ವಿದ್ಯುತ್ ಸಂಪರ್ಕ ಕಡಿತದ ಭಯದಿಂದ ದಂಡ ಪಾವತಿಸಲೇಬೇಕು
- ಈ ದೇಶದಲ್ಲಿ ಇಂಥ ಪರ್ಯಾಯ ಮಾರ್ಗ ಕಂಡುಕೊಳ್ಳಲೇಬೇಕು: ಪೀಠ--
