ಮುಂಬೈ: ‘ಆಪರೇಷನ್ ಸಿಂದೂರದ ಮೊದಲ ದಿನವಾದ ಮೇ 7ರಂದೇ ಭಾರತ ಸೋತಿತು. ಭಾರತದ ದಾಳಿಗೆ ಪಾಕಿಸ್ತಾನ ಪ್ರತಿದಾಳಿ ಮಾಡಿದಾಗ ನಮ್ಮ ಯುದ್ಧವಿಮಾನಗಳು ಧ್ವಂಸವಾಗುವ ಆಪಾಯವಿತ್ತು.
ಹೀಗಾಗಿ ಉತ್ತರ ಭಾರತದ ಯಾವುದೇ ವಾಯುನೆಲೆಯಿಂದಲೂ ನಮ್ಮ ಯುದ್ಧವಿಮಾನ ಹಾರಲಿಲ್ಲ’ ಎಂದು ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವಾಣ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಇವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ‘ಕಾಂಗ್ರೆಸ್ ಯಾವಾಗಲೂ ಸೈನಿಕ ವಿರೋಧೀ ಪಕ್ಷ ’ ಎಂದು ಕಿಡಿಕಾರಿದೆ.