ಅಮೆರಿಕ ವಸ್ತುಗಳಿಗೆ ಭಾರತದಿಂದ ಶೂನ್ಯ ತೆರಿಗೆಯ ಪ್ರಸ್ತಾಪ : ಟ್ರಂಪ್‌

Follow Us

ಸಾರಾಂಶ

ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ತೆರಿಗೆ ವಿಧಿಸುವ ಪ್ರಸ್ತಾಪ ಭಾರತದಿಂದ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ದೋಹಾ: ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ತೆರಿಗೆ ವಿಧಿಸುವ ಪ್ರಸ್ತಾಪ ಭಾರತದಿಂದ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ನಡುವೆ ವ್ಯಾಪಾರ ಒಪ್ಪಂದ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಕತಾರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್‌, ‘ಭಾರತ ನಮ್ಮ ಮುಂದೆ ಪ್ರಸ್ತಾಪ ಇಟ್ಟಿದ್ದು, ಅದರನ್ವಯ ಅವರು ನಮ್ಮ ಎಲ್ಲಾ ಆಮದಿನ ಮೇಲೆ ಶೂನ್ಯದ ಸುಂಕ ವಿಧಿಸಲಿದ್ದಾರೆ’ ಎಂದು ಹೇಳಿದ್ದಾರೆ. ಉಭಯ ದೇಶಗಳ ವ್ಯಾಪಾರ ಒಪ್ಪಂದದ ಮುಂದಿನ ಹೆಜ್ಜೆಯ ಭಾಗವಾಗಿ ಸಚಿವ ಪಿಯೂಷ್‌ ಗೋಯಲ್‌ ನೇತೃತ್ವದ ನಿಯೋಗ ಮೇ 16ರಂದು ಅಮೆರಿಕಕ್ಕೆ ಭೇಟಿ ನೀಡುತ್ತಿದೆ. ಅದಕ್ಕೂ ಮುನ್ನ ಟ್ರಂಪ್‌ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಅಂತಿಮ ಆಗಿಲ್ಲ:  ಈ ನಡುವೆ ವ್ಯಾಪಾರ ಒಪ್ಪಂದ ಅತ್ಯಂತ ಸಂಕೀರ್ಣ. ಮಾತುಕತೆ ಅಂತಿಮ ಆಗುವವರೆಗೂ ಯಾವುದನ್ನೂ ನಿರ್ಧರಿಸಲಾಗದು. ವ್ಯಾಪಾರ ಒಪ್ಪಂದಗಳು ಉಭಯ ದೇಶಗಳಿಗೂ ಅನುಕೂಲಕರವಾಗಿರಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಹೇಳಿದ್ದಾರೆ.