ನವದೆಹಲಿ: 2023, ಕಳೆದೊಂದು ಶತಮಾನದ ಅವಧಿಯಲ್ಲೇ 2ನೇ ಅತಿ ಗರಿಷ್ಠ ಉಷ್ಣಾಂಶದ ವರ್ಷ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಈ ಕುರಿತು ಮಾಹಿತಿ ನೀಡಿದ ಇಲಾಖೆಯ ಮುಖ್ಯಸ್ಥ ಧನಂಜಯ್ ಮಹೋಪಾತ್ರ, ‘ಹವಾಮಾನ ವಾರ್ಷಿಕ ವರದಿಯನ್ನು ಪರಿಶೀಲಿಸಿದಾಗ 2023ನೇ ವರ್ಷವು, ದೀರ್ಘ ಕಾಲಿನ ಸರಾಸರಿಗಿಂತ ಶೇ.0.65ರಷ್ಟು ಹೆಚ್ಚು ಉಷ್ಣಾಂಶವನ್ನು ದಾಖಲಿಸಿದೆ. ಈ ಮೂಲಕ 2023ನೇ ವರ್ಷವು, 1901ರಿಂದ ಇಲ್ಲಿಯವರೆಗೆ ಎರಡನೇ ಅತಿ ಉಷ್ಣತೆಯ ವರ್ಷ ಎಂಬ ದಾಖಲೆಗೆ ಪಾತ್ರವಾಗಿದೆ. 2016ನೇ ವರ್ಷವು ದೀರ್ಘಕಾಲಿನ ಸರಾಸರಿಗಿಂತ ಶೇ.0.71ರಷ್ಟು ಹೆಚ್ಚು ಉಷ್ಣಾಂಶ ದಾಖಲಿಸುವ ಮೂಲಕ ನಂ.1 ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
2023ನೇ ಸಾಲಿನಲ್ಲಿ ಅಧಿಕ ಉಷ್ಣಾಂಶಕ್ಕೆ ಭಾರತದಲ್ಲಿ 2376 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಶೇ.50ರಷ್ಟು ಸಾವು ಸಿಡಿಲು ಮತ್ತು ಚಂಡಮಾರುತದಿಂದ ಸಂಭವಿಸಿದೆ. 2022ರಲ್ಲಿ ಹವಾಮಾನ ವೈಪರೀತ್ಯದಿಂದಾಗಿ 2,227 ಮಂದಿ ಸಾವನ್ನಪ್ಪಿದ್ದರು ಎಂದು ಮಹಾಪಾತ್ರ ತಿಳಿಸಿದ್ದಾರೆ.ನಂ.1 ಸ್ಥಾನ:
ಇನ್ನು ಒಟ್ಟಾರೆ ಜಾಗತಿಕ ಮಟ್ಟದಲ್ಲಿ ನೋಡಿದರೆ 2023ನೇ ವರ್ಷವು ದೀರ್ಘಕಾಲಿನ ಸರಾಸರಿಗಿಂತ ಶೇ.1.40ರಷ್ಟು ಹೆಚ್ಚು ಉಷ್ಣಾಂಶದ ಮೂಲಕ ಕಳೆದ 123 ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶ ದಾಖಲಿಸಿದ ವರ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.ಎಲ್ ನಿನೋದಿಂದಾದಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ ಎಂದು ಮಹಾಪಾತ್ರ ತಿಳಿಸಿದ್ದಾರೆ.573 ಕೋವಿಡ್ ಕೇಸು, 2 ಸಾವು: ಜೆಎನ್.1 ಕೇಸು 312ಕ್ಕೆ ಏರಿಕೆನವದೆಹಲಿ: ದೇಶದಲ್ಲಿ ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 573 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆಯು 4,565ಕ್ಕೆ ಏರಿಕೆಯಾಗಿದೆ.ಇದೇ ವೇಳೆ ಕರ್ನಾಟಕ ಮತ್ತು ಹರ್ಯಾಣಗಳಲ್ಲಿ ತಲಾ 1 ಸೇರಿ ಒಟ್ಟು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಹೊಸ ಕೋವಿಡ್ ಉಪತಳಿಯಾದ ಜೆಎನ್.1 ಪ್ರಕರಣಗಳ ಸಂಖ್ಯೆ 312ಕ್ಕೆ ಏರಿದೆ ಎಂದು ಸರ್ಕಾರ ಹೇಳಿದೆ.ಇನ್ನು ಚೇತರಿಕೆಯ ಪ್ರಮಾಣವು 98.81ರಷ್ಟು ದಾಖಲಾಗಿದೆ. ದೇಶದಲ್ಲಿ ಈವರೆಗೆ 3.5 ಕೋಟಿ ಜನರಿಗೆ ಕೋವಿಡ್ ತಗುಲಿದ್ದು, ಈ ಪೈಕಿ 4.4 ಕೋಟಿ ಜನರು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 220.67 ಕೋಟಿ ಡೋಸ್ ಕೋವಿಡ್ ಲಸಿಕೆಗಳ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.