ಮ್ಯಾನ್ಮಾರಲ್ಲಿ ಸಿಲುಕಿದ್ದ 540 ಭಾರತೀಯರ ರಕ್ಷಣೆ

KannadaprabhaNewsNetwork |  
Published : Mar 12, 2025, 12:49 AM IST
ಮ್ಯಾನ್ಮಾರ್ | Kannada Prabha

ಸಾರಾಂಶ

ವಿದೇಶಗಳಲ್ಲಿ ಉದ್ಯೋಗ ಸಿಗುವ ಭರವಸೆಯಿಂದ ತರೆಳಿ ಮ್ಯಾನ್ಮಾರ್‌ನಲ್ಲಿ ಸಿಲುಕಿಕೊಂಡಿದ್ದ 540 ಭಾರತೀಯರನ್ನು ಭಾರತ ಸರ್ಕಾರ ರಕ್ಷಿಸಿದೆ. ಈ ಪೈಕಿ 28 ಕನ್ನಡಿಗರು ಸೇರಿದಂತೆ 283 ಭಾರತೀಯರನ್ನು ರಕ್ಷಿಸಿ ಸೋಮವಾರ ಸ್ವದೇಶಕ್ಕೆ ಕರೆತರಲಾಗಿದೆ.

ನವದೆಹಲಿ: ವಿದೇಶಗಳಲ್ಲಿ ಉದ್ಯೋಗ ಸಿಗುವ ಭರವಸೆಯಿಂದ ತರೆಳಿ ಮ್ಯಾನ್ಮಾರ್‌ನಲ್ಲಿ ಸಿಲುಕಿಕೊಂಡಿದ್ದ 540 ಭಾರತೀಯರನ್ನು ಭಾರತ ಸರ್ಕಾರ ರಕ್ಷಿಸಿದೆ. ಈ ಪೈಕಿ 28 ಕನ್ನಡಿಗರು ಸೇರಿದಂತೆ 283 ಭಾರತೀಯರನ್ನು ರಕ್ಷಿಸಿ ಸೋಮವಾರ ಸ್ವದೇಶಕ್ಕೆ ಕರೆತರಲಾಗಿದೆ.ಚೀನಾ, ಥಾಯ್ಲೆಂಡ್‌ ಹಾಗೂ ಮ್ಯಾನ್ಮಾರ್‌ನ ವಂಚಕರು ಇವರಿಗೆ ಸೋಷಿಯಲ್‌ ಮೀಡಿಯಾ ಮೂಲಕ ಉದ್ಯೋಗದ ಭರವಸೆ ನೀಡಿ ಥಾಯ್ಲಂಡ್‌, ಮಲೇಷ್ಯಾ ಸೇರಿ ವಿವಿಧ ವಿದೇಶಗಳಿಗೆ ಕರೆಸಿಕೊಂಡಿದ್ದರು. ಬಳಿಕ ಉದ್ಯೋಗ ನೀಡದೆ ಮೋಸ ಮಾಡಿದ್ದರು ಹಾಗೂ ಅವರನ್ನು ಅಲ್ಲಿಂದ ಮ್ಯಾನ್ಮಾರ್‌ಗೆ ಕರೆದೊಯ್ದಿದ್ದರು. ಅಲ್ಲಿ ಪಾಸ್‌ಪೋರ್ಟ್‌ ಕಿತ್ತುಕೊಂಡು ದಿನಕ್ಕೆ 15 ಗಂಟೆ ಕೆಲಸ ಮಾಡಿಸುತ್ತಿದ್ದರು. ಅಕ್ರಮವಾಗಿ ದುಡ್ಡು ಸುಲಿಯುವ ಸೈಬರ್‌ ಅಪರಾಧದ ಕೂಪಕ್ಕೆ ತಳ್ಳಿದ್ದರು. ಈ ವಿಷಯ ವಿದೇಶಾಂಗ ಇಲಾಖೆ ಗಮನಕ್ಕೆ ಬಂದ ಬಳಿಕ ಅಂಥವರನ್ನು ಗುರುತಿಸಿ ಮ್ಯಾನ್ಮಾರ್‌, ಥೈಲ್ಯಾಂಡ್ ರಾಯಭಾರ ಕಚೇರಿಗಳ ಮೂಲಕ ವಾಪಸು ಕರೆಸಿಕೊಳ್ಳಲಾಗಿದೆ.ಸೋಮವಾರ ಐಎಎಫ್‌ ವಿಮಾನದಲ್ಲಿ ವಾಪಸು ಬಂದ ಮೊದಲ ತಂಡದಲ್ಲಿನ 283 ಭಾರತೀಯರ ಪೈಕಿ 28 ಮಂದಿ ಕನ್ನಡಿಗರಿದ್ದಾರೆ. ಕನ್ನಡಿಗರಲ್ಲಿ 4 ಮಹಿಳೆಯರೂ ಉಂಟು. 257 ಜನರ ಇನ್ನೊಂದು ತಂಡ ಬುಧವಾರ ನಸುಕಿನ ಜಾವ ಭಾರತಕ್ಕೆ ಮರಳುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ