ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಜೆ.ಡಿ.ವ್ಯಾನ್ಸ್‌

KannadaprabhaNewsNetwork |  
Published : Jul 17, 2024, 12:53 AM ISTUpdated : Jul 17, 2024, 08:17 AM IST
JD Vance  wife

ಸಾರಾಂಶ

ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಜೆ.ಡಿ.ವ್ಯಾನ್ಸ್‌ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಆಯ್ಕೆ ಮಾಡಿದ್ದಾರೆ.

ಮಿಲ್ವಾಕಿ: ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಜೆ.ಡಿ.ವ್ಯಾನ್ಸ್‌ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಆಯ್ಕೆ ಮಾಡಿದ್ದಾರೆ. ಇವರು ಭಾರತದ ಅಳಿಯ ಎಂಬುದು ವಿಶೇಷ. ಏಕೆಂದರೆ ಅವರ ಪತ್ನಿ ಭಾರತೀಯ ಮೂಲದ ಉಷಾ ಚಿಲ್ಕೂರಿ.

ವ್ಯಾನ್ಸ್‌, ಓಹಿಯೋ ರಾಜ್ಯದ ಸೆನೆಟರ್‌ ಆಗಿದ್ದು, ಟ್ರಂಪ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ವಕೀಲರಾಗಿದ್ದ ಇವರನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ಪತ್ನಿ ಉಷಾ ಪ್ರಮುಖ ಪಾತ್ರ ವಹಿಸಿದ್ದಾರೆ. ಉಷಾ ಕೂಡ ಯೇಲ್‌ ವಿವಿ ಕಾನೂನು ಪದವೀಧರೆ

ಯೇಲ್‌ ವಿವಿಯಲ್ಲಿ ಅಭ್ಯಾಸ ಮಾಡುವಾಗ ವ್ಯಾನ್ಸ್‌ ಮತ್ತು ಉಷಾ ಪರಸ್ಪರ ಪರಿಚಿತರಾಗಿದ್ದು, 2014ಲ್ಲಿ ಈ ಜೋಡಿ ಕ್ರೈಸ್ತ ಮತ್ತು ಹಿಂದೂ ಸಂಪ್ರದಾಯದ ಅನ್ವಯ ವಿವಾಹವಾಗಿದ್ದರು. ದಂಪತಿಗೆ ಇವಾನ್‌, ವಿವೇಕ್‌ ಮತ್ತು ಮಿರಾಬೆಲ್‌ ಎಂಬ 3 ಮಕ್ಕಳಿದ್ದಾರೆ.

ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್‌ ಅಧಿಕೃತ ಆಯ್ಕೆ

ಮಿಲ್ವಾಕಿ: ಮುಂಬರುವ ಅಮೆರಿಕದ ಅಧ್ಯಕ್ಷೀಯ ಹುದ್ದೆ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಸೋಮವಾರ ಇಲ್ಲಿ ಆಯ್ಕೆ ಮಾಡಲಾಯಿತು. 4 ವರ್ಷಗಳಿಗೊಮ್ಮೆ ನಡೆಯುವ ಪಕ್ಷದ ಸಭೆಯಲ್ಲಿ ಭಾರೀ ಬೆಂಬಲದೊಂದಿಗೆ ಟ್ರಂಪ್‌ ಹೆಸರನ್ನುಘೋಷಿಸಲಾಯಿತು. ಟ್ರಂಪ್‌ ಹೀಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವುದು ಇದು 3ನೇ ಬಾರಿ.2017ರಲ್ಲಿ ಟ್ರಂಪ್ ಹಿಲರಿ ಕ್ಲಿಂಟನ್‌ ವಿರುದ್ಧ ಗೆದ್ದಿದ್ದರೆ, 2021ರಲ್ಲಿ ಜೋ ಬೈಡೆನ್‌ ವಿರುದ್ಧ ಸೋತಿದ್ದರು. ಇದೀಗ ಮತ್ತೆ ಅವರು ಕಣಕ್ಕೆ ಇಳಿಯುತ್ತಿದ್ದು, ಬಹುತೇಕ ಡೆಮಾಕ್ರೆಟ್‌ ಪಕ್ಷದ ನಾಯಕ, ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರನ್ನು ಎದುರಿಸುವ ಸಾಧ್ಯತೆ ಇದೆ.

ಟ್ರಂಪ್‌ ಹೆಸರನ್ನು ಘೋಷಣೆ ಮಾಡಿದ ಪಕ್ಷದ ಅಧ್ಯಕ್ಷ ಮೈಕೆಲ್‌ ವಾಟ್ಲೆ, ‘ನಾವು ಒಂದು ಪಕ್ಷವಾಗಿ ಒಗ್ಗೂಡಬೇಕಿದೆ ಮತ್ತು ಒಂದು ದೇಶವಾಗಿ ನಾವು ಒಗ್ಗೂಡಬೇಕಿದೆ. ಟ್ರಂಪ್‌ ಅವರಂತೆಯೇ ನಾವು ಶಕ್ತಿ ಮತ್ತು ಪುಟಿದೇಳುವ ಶಕ್ತಿಯನ್ನು ತೋರಿಸುವ ಮೂಲಕ ದೇಶವನ್ನು ಅದ್ಭುತ ಭವಿಷ್ಯದತ್ತ ಕೊಂಡೊಯ್ಯಲು ಸಹಕರಿಸಬೇಕು ಎಂದು ಕರೆ ಕೊಟ್ಟರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!