ಹಜ್ ಸೇರಿದಂತೆ ಮಹತ್ವದ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಅದ್ಧೂರಿಯಾಗಿ ಮೋದಿಗೆ ಸಾಂಪ್ರದಾಯಿಕ ಸ್ವಾಗತಜೆಡ್ಡಾ: ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಮಂಗಳವಾರ ಅದ್ಧೂರಿ ಸ್ವಾಗತ ದೊರೆತಿದೆ. ಮೋದಿ ತಮ್ಮ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಹಜ್ ಯಾತ್ರೆಯಲ್ಲಿ ಭಾರತದ ಕೋಟಾ ಸೇರಿದಂತೆ 6 ಪ್ರಮುಖ ಒಪ್ಪಂದಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.ಸೌದಿ ರಾಜಕುಮಾರನ ಆಹ್ವಾನದ ಮೇರೆಗೆ ಮೋದಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದು, 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಜೆಡ್ಡಾಗೆ ಭೇಟಿ ನೀಡಲಿದ್ದಾರೆ. ಇಲ್ಲಿನ ಕಿಂಗ್ ಅಬ್ದುಲ್ಲಾ ಅಜೀಜ್ ಅಂತಾರಾಷ್ಟ್ರೀಯ ವಿಮಾನಕ್ಕೆ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಗೆ ಅದ್ಧೂರಿ ಸ್ವಾಗತ ದೊರೆಯಿತು.ಇದು ಗಲ್ಫ್ ರಾಷ್ಟ್ರಕ್ಕೆ ಮೋದಿಯ ಮೂರನೇ ಭೇಟಿಯಾಗಿದ್ದು, ಐತಿಹಾಸಿಕ ಜೆಡ್ಡಾ ನಗರಕ್ಕೆ ಮೊದಲ ಭೇಟಿ. ಈ ಬಗ್ಗೆ ಪ್ರಧಾನಿ ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ‘ಈ ಭೇಟಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹವನ್ನು ಬಲ ಪಡಿಸುತ್ತದೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಉತ್ಸುಹಕನಾಗಿದ್ದೇನೆ’ ಎಂದಿದ್ದಾರೆ.ಇದೇ ವೇಳೆ ಸೌದಿಯ ಗಾಯಕರು ಮೋದಿಯವರಿಗೆ ಹಿಂದಿ ಗೀತೆಯ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು .ಇನ್ನು ಆ ಬಳಿಕ ಮೋದಿ ಅವರಿಗೆ ಪ್ರಧಾನಿಗೆ ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದಿಂದಲೂ ಅದ್ಧೂರಿ ಸ್ವಾಗತ ದೊರೆತಿದ್ದು, ಈ ವೇಳೆ ಭಾರತೀಯರ ಜೊತೆ ಸಂವಾದ ನಡೆಸಿದ್ದರು. ಇನ್ನು ಪ್ರಧಾನಿ ನೋಡಿದ ಜನರು ಹರ್ಷ ವ್ಯಕ್ತಪಡಿಸಿದರು.ನರೇಂದ್ರ ಮೋದಿಯವರ ಸೌದಿ ಅರೇಬಿಯಾ ಭೇಟಿ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಕನಿಷ್ಟ 6 ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆಯಿದೆ. ಸೌದಿ ಅರೇಬಿಯಾ ರಾಜ ಕುಮಾರ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಭೇಟಿಯ ಸಂದರ್ಭದಲ್ಲಿ ಮೋದಿ , ಭಾರತೀಯ ಯಾತ್ರಿಕರ ಕೋಟಾ ಸೇರಿದಂತೆ ಹಜ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಇದರ ಜೊತೆಗೆ ಎರಡು ದೇಶಗಳ ನಡುವೆ ಬಾಹ್ಯಾಕಾಶ, ಇಂಧನ, ಆರೋಗ್ಯ, ವಿಜ್ಞಾನ, ವೈಜ್ಞಾನಿಕ ಸಂಶೋಧನೆ, ಸಂಸ್ಕೃತಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
==ಮೋದಿ ವಿಮಾನಕ್ಕೆ ಸೌದಿ ಯುದ್ಧ ವಿಮಾನ ‘ಬೆಂಗಾವಲು ಗೌರವ’
ಜೆಡ್ಡಾ (ಸೌದಿ): ಮಂಗಳವಾರ ಸೌದಿ ಅರೇಬಿಯಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ವಿಮಾನವು ಗಲ್ಫ್ ರಾಷ್ಟ್ರದ ವಾಯುಪ್ರದೇಶವನ್ನು ಪ್ರವೇಶಿಸಿದಾಗ, ಗೌರವ ಸೂಚಕವಾಗಿ ಸೌದಿ ಅರೇಬಿಯಾದ ಯುದ್ಧ ವಿಮಾನಗಳು ಅವರ ವಿಮಾನಕ್ಕೆ ಬೆಂಗಾವಲು ನೀಡಿದವು.ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮೋದಿ ಅವರ ವಿಮಾನದೊಂದಿಗೆ ಎಫ್-15 ಜೆಟ್‌ಗಳು ಬಂದಿರುವುದನ್ನು ತೋರಿಸಲಾಗಿದೆ. ಇದು ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಭಾವಿಸಲಾಗಿದೆ.